Site icon Vistara News

Kantara Movie | 200 ಕೋಟಿ ಭರ್ಜರಿ ಕಲೆಕ್ಷನ್‌ನತ್ತ ಕಾಂತಾರ!

Kantara Movie

ಬೆಂಗಳೂರು: ರಿಷಬ್‌ ಶೆಟ್ಟಿ ನಿರ್ದೇಶನ ಹಾಗೂ ನಟನೆಯ ‘ಕಾಂತಾರ ಸಿನಿಮಾ’ (Kantara Movie) ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. ಈ ವಾರದ ಕೊನೆಯಲ್ಲಿ ಅದು 200 ಕೋಟಿ ರೂ. ಕ್ಲಬ್‌ ಸೇರಲಿದೆ ಎಂದು ಟ್ರೇಡ್‌ ಅನಾಲಿಸಿಸ್‌ ಹೇಳುತ್ತಿದೆ.

ಕರ್ನಾಟಕದಲ್ಲಿ 100 ಕೋಟಿಗೂ ಅಧಿಕ ಹಣವನ್ನು ಈ ಚಿತ್ರ ಕಲೆಕ್ಷನ್‌ ಮಾಡಿದೆ. ತೆಲಂಗಾಣ, ಉತ್ತರ ಭಾರತ, ಕೇರಳ, ದೇಶದಿಂದ ಬಂದ ಒಟ್ಟು ಹಣ 80 ಕೋಟಿಗೂ ಅಧಿಕ ಎಂದು ಅಂದಾಜಿಸಲಾಗಿದೆ. ಈ ವಾರದ ಒಳಗೆ ಆರಾಮದಾಯಕವಾಗಿ ಕಾಂತಾರ ಸಿನಿಮಾ 200 ಕೋಟಿ ಕ್ಲಬ್ ಸೇರಲಿದೆ ಎನ್ನುವುದು ಸಿನಿ ಪಂಡಿತರ ಲೆಕ್ಕಾಚಾರ. ಕೆಜಿಎಫ್-2 ರಾಜ್ಯದಲ್ಲಿ ಹೆಚ್ಚು ಹಣ ಗಳಿಕೆ ಕಂಡರೆ, ಕಾಂತಾರ ಸಿನಿಮಾ ಹೆಚ್ಚು ಟಿಕೆಟ್‌ಗಳನ್ನು ಮಾರಾಟ ಮಾಡಿರುವ ಸಿನಿಮಾ ಎಂಬ ಹೆಸರನ್ನು ಪಡೆದಿದೆ. ಅಕ್ಟೋಬರ್ 24ರ ಹೊತ್ತಿಗೆ ಕಾಂತಾರ ಸಿನಿಮಾ ಕರ್ನಾಟಕವೊಂದರಲ್ಲೇ 77 ಲಕ್ಷ ಟಿಕೆಟ್‌ಗಳನ್ನು ಮಾರಾಟ ಮಾಡಿದೆ ಎಂದು ವರದಿ ಆಗಿದೆ.

ಇದನ್ನೂ ಓದಿ | Kantara Movie | ವರಾಹ ರೂಪಂKantara Movie, ನವರಸಂ ಸೇಮ್‌ ಟು ಸೇಮ್‌, ಏನಂತಾರೆ ಅಜನೀಶ್‌?

ಕನ್ನಡದಲ್ಲಿ ಈವರೆಗೆ ಕೆಜಿಎಫ್‌, 777 ಚಾರ್ಲಿ ಬಗ್ಗೆಯೇ ಸಿನಿಪ್ರಿಯರು ಮಾತನಾಡಿಕೊಳ್ಳುತ್ತಿದ್ದರು. ಇದೀಗ ಕಾಂತಾರ ಸಿನಿಮಾ ವಿಶ್ವದೆಲ್ಲೆಡೆ ತನ್ನ ಛಾಪು ಮೂಡಿಸಿದೆ. ಹೊಂಬಾಳೆ ಫಿಲಮ್ಸ್ ಸಂಸ್ಥೆ ಈ ಬಗ್ಗೆ ಟ್ವೀಟ್‌ ಮೂಲಕ ʻʻಈವರೆಗೆ ಹೊಂಬಾಳೆ ಫಿಲಮ್ಸ್ ನಿರ್ಮಿಸಿರುವ ಚಲನಚಿತ್ರಗಳ ಪೈಕಿ ಕರ್ನಾಟಕದಲ್ಲಿ ‘ಅತ್ಯಂತ ಹೆಚ್ಚು ಜನ ವೀಕ್ಷಿಸಿದ ಚಿತ್ರ’ ಎಂಬ ಹೆಗ್ಗಳಿಕೆ. ಇನ್ನಷ್ಟು ಹೊಸ ದಾಖಲೆ ನಿರ್ಮಿಸುವ ಹಾದಿಯಲ್ಲಿ ಕಾಂತಾರʼ! ನಿಮ್ಮ ಪ್ರೋತ್ಸಾಹಕ್ಕೆ ನಾವು ಸದಾ ಋಣಿ… ಧನ್ಯವಾದ ಕರ್ನಾಟಕʼʼ ಎಂದು ಹೇಳಿದೆ.

ಇದನ್ನೂ ಓದಿ | Kantara Movie | ʻಹ್ಯಾಟ್ಸ್‌ ಆಫ್‌ ರಿಷಬ್‌ʼಎಂದು ಕಾಂತಾರ ಸಿನಿಮಾ ಹೊಗಳಿದ ಸೂಪರ್‌ ಸ್ಟಾರ್‌ ರಜನಿಕಾಂತ್‌!

Exit mobile version