Site icon Vistara News

Kantara Movie | ಬೆಂಗಳೂರು ನಗರವೊಂದರಲ್ಲಿಯೇ 20 ಸಾವಿರ ಪ್ರದರ್ಶನ: ದಾಖಲೆ ಬರೆದ ʻಕಾಂತಾರʼ!

Kantara Movie (20 thousand )

ಬೆಂಗಳೂರು : ಕಾಂತಾರ ಸಿನಿಮಾ (Kantara Movie) ಈಗಾಗಲೇ ಒಟಿಟಿಯಲ್ಲಿ ಬಿಡುಗಡೆಗೊಂಡಿದ್ದು ಮತ್ತಷ್ಟು ಜನರನ್ನು ತಲಪುವಲ್ಲಿ ಯಶಸ್ವಿಯಾಗಿದೆ. ಮೊದಲ ದಿನ ಕರ್ನಾಟಕದಲ್ಲಿ ಒಂದೂವರೆ ಕೋಟಿ ರೂ. ಕಲೆಹಾಕಿದ್ದ ಕಾಂತಾರ ಚಿತ್ರ ಈಗ ಒಟ್ಟು 401 ಕೋಟಿ ರೂ. ಕಲೆಕ್ಷನ್ ಮಾಡಿದೆ. ಕರ್ನಾಟಕದಲ್ಲಿ ಸುಮಾರು 168 ಕೋಟಿ ರೂ. ಕಲೆಕ್ಷನ್‌ ಮಾಡಿರುವ ಕಾಂತಾರ, ಬಹುತೇಕ ಎಲ್ಲ ಚಿತ್ರಮಂದರಿಗಳಲ್ಲಿ 50 ದಿನ ಪೂರೈಸಿದೆ. ಇದೀಗ ಕಾಂತಾರ ಬೆಂಗಳೂರು ನಗರದಲ್ಲಿಯೇ 20 ಸಾವಿರ ಪ್ರದರ್ಶನ ಕಂಡಿದ್ದು ಹೊಸ ದಾಖಲೆ ಸೃಷ್ಟಿಸಿದೆ.

ಬೆಂಗಳೂರಿನ ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆಕ್ಸ್ ಎರಡೂ ಸೇರಿ ಕಾಂತಾರ ಇಷ್ಟು ಪ್ರದರ್ಶನಗಳನ್ನು ಕಂಡಿದೆ. ಒಟಿಟಿಯಲ್ಲಿ ಕಾಂತಾರ ಬಂದಿದ್ದರು ಬೆಂಗಳೂರಿನ ಹಲವು ಚಿತ್ರಮಂದಿರಗಳಲ್ಲಿ ಇನ್ನೂ ಸಹ ಕಾಂತಾರ ಪ್ರದರ್ಶನಗೊಳ್ಳುತ್ತಿದೆ. ಈ ಹಿಂದೆ ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಕೆಜಿಎಫ್‌-2 ಚಿತ್ರ ದಾಖಲೆ ಬರೆದಿತ್ತು. 2 ಲಕ್ಷದ 17 ಸಾವಿರಕ್ಕೂ ಹೆಚ್ಚು ಪ್ರದರ್ಶನ ಬೆಂಗಳೂರಿನಲ್ಲಿಯೇ ಕಂಡಿತ್ತು. ಇದೀಗ ಈ ಸಾಲಿಗೆ ಕಾಂತಾರ ಸೇರಿದೆ.

ಇದನ್ನೂ ಓದಿ | Kantara Movie | ಕಾಂತಾರ ತುಳು ಟ್ರೈಲರ್‌ ಔಟ್‌: ಕಾಂತಾರ-2ಗೆ ಸಿದ್ಧತೆ ಮಾಡಿಕೊಳ್ತಿದ್ದಾರಾ ರಿಷಬ್‌ ಶೆಟ್ಟಿ?

ಕಾಂತಾರ ಸಿನಿಮಾ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಿಗೂ ಡಬ್ ಆಗಿ ಭಾರಿ ಗಳಿಕೆ ಕಂಡಿದೆ. ಇದೀಗ ತುಳುವಿನಲ್ಲಿಯೂ ಸಿನಿಮಾ ಡಬ್‌ ಆಗಿದ್ದು, ತುಳು ಟ್ರೈಲರ್‌ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ |Kantara Movie | ವರಾಹ ರೂಪಂ ಕೇಸಿನಲ್ಲಿ ಮೊದಲ ಯಶಸ್ಸು: ಹಾಡು ಬಳಸಲು ಅನುಮತಿ, ಆದರೆ ಷರತ್ತುಗಳು ಅನ್ವಯ!

Exit mobile version