Site icon Vistara News

Kantara Movie | ಕಾಂತಾರ ಸಿನಿಮಾ ನೋಡಿ ಥ್ರಿಲ್‌ ಆದ ಪೂಜಾ ಹೆಗ್ಡೆ, ಆಕೆ ಹೇಳಿದ್ದೇನು?

Kantara Movie

ಬೆಂಗಳೂರು: ಕಾಂತಾರ ಸಿನಿಮಾಗೆ (Kantara Movie) ದಕ್ಷಿಣ ಭಾರತದ ಸೂಪರ್‌ ಸ್ಟಾರ್‌ ನಟ, ನಟಿಯರು ಫಿದಾ ಆಗಿದ್ದಾರೆ. ಸೋಷಿಯಲ್‌ ಮೀಡಿಯಾ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ ನಟಿ ಪೂಜಾ ಹೆಗ್ಡೆ ಕಾಂತಾರ ಸಿನಿಮಾವನ್ನು ಹೊಗಳಿ, ನನ್ನ ಬಾಲ್ಯ ನೆನಪಿಗೆ ಬಂತು ಎಂದು ಇನ್‌ಸ್ಟಾ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

ಪೋಸ್ಟ್‌ ಹಂಚಿಕೊಂಡ ನಟಿ ʻʻನಿಮ್ಮ ಹೃಯದಿಂದ ಕಥೆ ಹೇಳಿ. ಸಿನಿಮಾ ಅಷ್ಟು ಚೆನ್ನಾಗಿದೆ. ಚಿತ್ರದ ಕೊನೆಯ ಇಪ್ಪತ್ತು ನಿಮಿಷಗಳು ಚಿಲ್‌ ಅನುಭವ ನೀಡಿತು. ದಿಗ್ಭ್ರಮೆಗೊಂಡೆ ಮತ್ತು ವಿಸ್ಮಯಗೊಂಡಿದ್ದೇನೆ. ರಿಷಬ್ ಶೆಟ್ಟಿ ಅವರ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವುದು ನೋಡಿ ಹೆಮ್ಮೆಯಾಗುತ್ತಿದೆ. ನಾನು ಬಾಲ್ಯದಲ್ಲಿ ನೋಡಿದ ಭೂತಾರಾಧನೆ, ಕೋಲ, ದೈವಾರಾಧನೆ ಮರುಕಳಿಸಿತು. ಸಿನಿಮಾವನ್ನು ತುಂಬಾ ಗೌರವದಿಂದ ಮಾಡಲಾಗಿದೆ. ಎಲ್ಲರೂ ಈ ಸಿನಿಮಾವನ್ನು ನೋಡಿʼʼ ಎಂದು ಹೊಂಬಾಳೆ ಫಿಲಮ್ಸ್‌ ಟ್ಯಾಗ್‌ ಮಾಡಿ ಬರೆದುಕೊಂಡಿದ್ದಾರೆ.

ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಈ ಹಿಂದೆ ಸಿನಿಮಾ ಬಗ್ಗೆ ಖುಷಿ ವ್ಯಕ್ತಪಡಿಸಿದ್ದರು. ‘ನಾನು ಥಿಯೇಟರ್‌ನಲ್ಲಿ ಸಿನಿಮಾ ವೀಕ್ಷಿಸಿದೆ. OMG! ಎಂತಹ ನಿರೂಪಣೆ! ಕ್ಲೈಮ್ಯಾಕ್ಸ್ ರೋಮಾಂಚನಗೊಳಿಸಿತ್ತು. ಇದು ಸಿನಿಮಾದ ಪವರ್. ಪ್ರೇಕ್ಷಕನನ್ನು ಬೇರೊಂದು ಜಗತ್ತಿಗೆ ಕೊಂಡೊಯ್ಯುತ್ತದೆ. ನಾನು ಹುಟ್ಟಿ ಬೆಳೆದಂತಹ ಪ್ರಪಂಚಕ್ಕೆ (ಕರಾವಳಿ) ಕೊಂಡೊಯ್ಯುವ ಸಿನಿಮಾʼʼ ಎಂದು ಹೊಗಳಿದ್ದರು. ಕರಾವಳಿ ಬೆಡಗಿ, ಟಾಲಿವುಡ್‌ ನಟಿ ಅನುಷ್ಕಾ ಶೆಟ್ಟಿ ಕೂಡ ಸಿನಿಮಾ ನೋಡಿ ಸೋಷಿಯಲ್‌ ಮೀಡಿಯಾ ಮೂಲಕ ಖುಷಿ ಹಂಚಿಕೊಂಡಿದ್ದರು.

ರಾಣಾ ದಗ್ಗುಬಾಟಿ, ಧನುಷ್, ಪ್ರಭಾಸ್‌, ಪೃಥ್ವಿರಾಜ್‌ ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗದ ಸಾಕಷ್ಟು ಜನ ಸ್ಟಾರ್‌ಗಳು ಸಿನಿಮಾ ನೋಡಿ ಮೆಚ್ಚುಗೆ ಸೂಚಿಸಿದ್ದರು.

ಇದನ್ನೂ ಓದಿ | Kantara Movie | ʻಕರ್ನಾಟಕದಲ್ಲಿ ಅತ್ಯಂತ ಹೆಚ್ಚು ಜನ ವೀಕ್ಷಿಸಿದ ಚಿತ್ರʼ ಎಂಬ ಹೆಗ್ಗಳಿಕೆಗೆ ಪಾತ್ರವಾಯ್ತು ಕಾಂತಾರ!

Exit mobile version