Site icon Vistara News

Kantara Movie | ಕಾಂತಾರವನ್ನು ಕೊಂಡಾಡಿದ ಬಾಲಿವುಡ್‌ ನಟ ಹೃತಿಕ್ ರೋಷನ್!

Kantara Movie

ಬೆಂಗಳೂರು: ಕಾಂತಾರ ಸಿನಿಮಾ (Kantara Movie) ವೀಕ್ಷಿಸಿದ ಬಾಲಿವುಡ್‌ ನಟ ಹೃತಿಕ್‌ ರೋಷನ್‌ ಈ ಚಿತ್ರವನ್ನು ಕೊಂಡಾಡಿದ್ದು, ʻಕ್ಲೈಮ್ಯಾಕ್ಸ್‌ ಮೈನವಿರೇಳಿಸುವಂತಿತ್ತುʼ ಎಂದು ತಮ್ಮ ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದಾರೆ. ಕಳೆದ ವಾರವಷ್ಟೇ ಈ ಸಿನಿಮಾ ಹಿಂದಿ ವರ್ಷನ್‌ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದ್ದು, ಒಟಿಟಿಯಲ್ಲಿಯೂ ಸೈ ಎನಿಸಿಕೊಂಡಿದೆ. ಬಾಕ್ಸ್‌ ಆಫೀಸ್‌ನಲ್ಲಿ ಹಲವಾರು ದಾಖಲೆಗಳನ್ನು ಧೂಳೀಪಟ ಮಾಡಿರುವ ಈ ಚಿತ್ರ, ಈವರೆಗೆ ೪೫೦ ಕೋಟಿ ರೂ.ಗಳ ಮೈಲುಗಲ್ಲು ದಾಟಿ ಮುನ್ನಡೆದಿದೆ.

“ಕಾಂತಾರ ನೋಡುತ್ತ ಎಷ್ಟೊಂದು ಕಲಿತೆ. ರಿಷಬ್ ಶೆಟ್ಟಿ ಅವರ ನಿಖರತೆ ಈ ಸಿನಿಮಾವನ್ನು ಅದ್ಭುತವಾಗಿಸಿದೆ. ನಿರ್ದೇಶನ, ನಟನೆ ಮತ್ತು ಕಥೆಗಳೆಲ್ಲ ಉನ್ನತ ಮಟ್ಟದ್ದು. ಕ್ಲೈಮ್ಯಾಕ್ಸ್‌ನಲ್ಲಿ ರಿಷಬ್ ಶೆಟ್ಟಿಯ ಪಾತ್ರ ಮೈನವಿರೇಳಿಸುವಂತಿತ್ತು. ಇಡೀ ತಂಡಕ್ಕೆ ಅಭಿನಂದನೆಗಳು” ಎಂದು ಹೃತಿಕ್‌ ರೋಷನ್‌ ತಮ್ಮ ಟ್ವಿಟರ್‌ನಲ್ಲಿ ಹೇಳಿದ್ದಾರೆ. “ತುಂಬಾ ಧನ್ಯವಾದಗಳು ಸರ್‌” ಎಂದು ರಿಷಬ್‌ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ | Kantara Movie | ಕಾಂತಾರ ಸಿನಿಮಾ ಟೀಕಿಸಿದ ʻತುಂಬಾಡ್‌ʼ ಸಹ ನಿರ್ಮಾಪಕ ಹೇಳಿದ್ದೇನು?

ಕಾಂತಾರ ಸಿನಿಮಾದ ಯಶಸ್ಸು ಚಿತ್ರರಂಗದಲ್ಲಿ ಹಲವು ರೀತಿಯ ಚರ್ಚೆಗಳಿಗೆ ನಾಂದಿ ಹಾಡಿದೆ. ಇದರ ಬಗ್ಗೆ ಇತ್ತೀಚೆಗಷ್ಟೇ ಮಾತನಾಡಿದ್ದ ನಿರ್ದೇಶಕ ಎಸ್.‌ ಎಸ್.‌ ರಾಜಮೌಳಿ, ದೊಡ್ಡ ಬಜೆಟ್‌ ಚಿತ್ರಗಳು ಮಾತ್ರವೇ ದೊಡ್ಡ ಮಟ್ಟದಲ್ಲಿ ಯಶಸ್ಸು ಗಳಿಸಬೇಕೆಂದೇನೂ ಇಲ್ಲ ಎಂದು ಹೇಳಿದ್ದರು. “ದೊಡ್ಡ ಬಜೆಟ್‌ ಚಿತ್ರಗಳು ಒಂದು ರೀತಿ. ಆದರೆ ಕಾಂತಾರವನ್ನು ನೋಡಿ ಮತ್ತು ಅದರ ಗಳಿಕೆಯ ಅಂಕಿ-ಸಂಖ್ಯೆಗಳನ್ನು ಗಮನಿಸಿ. ಅಂದರೆ, ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುವುದಕ್ಕೆ ದೊಡ್ಡ ಬಜೆಟ್‌ ಚಿತ್ರಗಳೇ ಆಗಬೇಕೆಂದಿಲ್ಲ. ಕಾಂತಾರದಂಥ ಚಿತ್ರವೂ ಮೇಲಕ್ಕೇರಬಲ್ಲದು” ಎಂದು ಅಭಿಪ್ರಾಯಪಟ್ಟಿದ್ದರು.

ಮೊದಲಿಗೆ ಸೆಪ್ಟೆಂಬರ್‌ ೩೦ಕ್ಕೆ ತೆರೆ ಕಂಡಿದ್ದ ಕಾಂತಾರದ ಹಿಂದಿ ಅವತರಣಿಕೆ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗುತ್ತಿದ್ದ ಹಿನ್ನೆಲೆಯಲ್ಲಿ, ಬಾಲಿವುಡ್‌ನ ಹಲವು ಚಿತ್ರಗಳು ತೆರೆಗೆ ಬರುವುದನ್ನು ತಡೆ ಹಿಡಿಯಲಾಗಿತ್ತು. ಇತ್ತೀಚಿನ ದಿನಗಳಲ್ಲಿ ದೊಡ್ಡ ಸುದ್ದಿ ಮಾಡುತ್ತಿರುವ ದಕ್ಷಿಣ ಭಾರತೀಯ ಚಿತ್ರಗಳ ಸಾಲಿನಲ್ಲಿ ಕಾಂತಾರ ಸಹ ಪ್ರಮುಖ ಎನಿಸಿದೆ.

ಇದನ್ನೂ ಓದಿ | Kantara movie | ವಿಶ್ವಾದ್ಯಂತ ಕಾಂತಾರ ಸಿನಿಮಾ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಹೀಗಿದೆ

Exit mobile version