ಬೆಂಗಳೂರು : ಸಿನಿಮಾ ಮಂದಿರಗಳೆಡೆಗೆ ಜನ ದೌಡಾಯಿಸುವಂತೆ ಮಾಡಿದ ಸ್ಯಾಂಡಲ್‌ವುಡ್ ಸಿನಿಮಾ ಕಾಂತಾರ (Kantara Movie) ೪೦೦ ಕೋಟಿ ರೂಪಾಯಿ ಗಳಿಕೆ ಮಾಡುವ ಮೂಲಕ ದಾಖಲೆ ಬರೆದಿದೆ. ಕಡಿಮೆ ಬಜೆಟ್‌ನಲ್ಲಿ ನಿರ್ಮಾಣ ಮಾಡಿರುವ ಈ ಸಿನಿಮಾದ ಇದುವರೆಗಿನ ಸಾರ್ವಕಾಲಿಕ ದಾಖಲೆ ಎಂದೇ ಹೇಳಲಾಗುತ್ತಿದೆ.
ಹೊಂಬಾಳೆ ಫಿಲ್ಸ್ಮ್ ನಿರ್ಮಿಸಿರುವ ಈ ಸಿನಿಮಾ, ಕರ್ನಾಟಕದ ಕರಾವಳಿಯ ದೈವಾರಾಧನೆಯ ಶ್ರೀಮಂತ ಸಂಸ್ಕೃತಿಯನ್ನು ಮನಮುಟ್ಟುವಂತೆ ಜನರಿಗೆ ತಲುಪಿಸಿತ್ತು. ಇದೇ ಕಾರಣಕ್ಕೆ ಬಾಕ್ಸ್‌ಆಫೀಸ್‌ನಲ್ಲಿ ಸಂಚಲನ ಸೃಷ್ಟಿಸಿತ್ತು. ಅದೇ ರೀತಿ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರು ಈ ಚಲನಚಿತ್ರದ ಮೂಲಕ ಜಗದ್ವಿಖ್ಯಾತಿ ಗಳಿಸಿಕೊಂಡಿದ್ದಾರೆ.
ಕಾಂತಾರ ಈಗ ೫೦ ದಿನಗಳನ್ನು ಪೂರೈಸಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಈಗಾಗಲೇ ಅದು ೪೦೦ ಕೋಟಿ ರೂಪಾಯಿ ಸಂಗ್ರಹಿಸಿದೆ ಎಂದು ಹೇಳಲಾಗುತ್ತಿದೆ. ಕರ್ನಾಟಕ ಒಂದರಲ್ಲೇ ಕಾಂತಾರದ ಗಳಿಕೆ ೧೮೦ ಕೋಟಿ ರೂಪಾಯಿ ದಾಟಿದೆ. ಉಳಿದಂತೆ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲಿ ಭರಪೂರ ಗಳಿಕೆ ಮಾಡಿದೆ. ಜತೆಗೆ ವಿದೇಶಗಳಲ್ಲೂ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿವೆ. ಹೀಗಾಗಿ ಕಡಿಮೆ ಬಜೆಟ್‌ನಲ್ಲಿ ತೆಗೆದ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಆದಾಯ ಪಡೆಯುವ ಮೂಲಕ ಕನ್ನಡ ಚಲನಚಿತ್ರ ರಂಗದೊಳಗೆ ಆತ್ಮವಿಶ್ವಾಸ ಮೂಡುವಂತೆ ಮಾಡಿದೆ.
ಕೆಜಿಎಫ್‌೧ ಹಾಗೂ ಚಾಪ್ಟರ್ ೨ ಮೂಲಕ ಕನ್ನಡದ ಸಿನಿಮಾರಂಗ ಜಾಗತಿಕ ಸಿನಿಮಾ ಪ್ರೇಮಿಗಳಿಗೆ ಅಚ್ಚರಿ ಮೂಡಿಸಿತ್ತು. ಆ ಸಿನಿಮಾವನ್ನೂ ಹೊಂಬಾಳೆ ಫಿಲ್ಸ್ಮ್ ನಿರ್ಮಾಣ ಮಾಡಿತ್ತು. ಅದೇ ಸಿನಿಮಾ ಸಂಸ್ಥೆ ಮಾಡಿರುವ ಕಾಂತಾರ ಕೂಡ ಅಷ್ಟೇ ಖ್ಯಾತಿಯನ್ನು ಗಳಿಸಿಕೊಂಡಿದೆ.
ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಆವತ್ತು ಕಪಿಲ್ ದೇವ್ ಮೈಯಲ್ಲಿ ಆವೇಶ ಬಂದಿತ್ತು, ಥೇಟ್ ಕಾಂತಾರದ ರಿಷಬ್ ಶೆಟ್ಟಿ ಸ್ಟೈಲಲ್ಲಿ!