Site icon Vistara News

Kantara Movie | ಮೂಗುತಿ ಸುಂದರಿಗೆ ಮೀನು ಕಟ್‌ ಮಾಡೋದು ತುಂಬಾ ಸುಲಭ; ಸಪ್ತಮಿಯ ಮೀನಿನ ನಡೆ!

Kantara Movie

ಬೆಂಗಳೂರು: ರಿಷಬ್‌ ಶೆಟ್ಟಿ ನಟನೆ ಹಾಗೂ ನಿರ್ದೇಶನದ ಕಾಂತಾರ (Kantara Movie) ಸಿನಿಮಾದಲ್ಲಿ ನಾಯಕಿಯಾಗಿ ಎಂಟ್ರಿ ಪಡೆದ ಸಪ್ತಮಿ ಗೌಡ ಸ್ಟಾರ್‌ ನಟಿಯಾಗಿ ಬದಲಾಗಿದ್ದಾರೆ. ಮೂಗಿನ ಎರಡೂ ಬದಿಯಲ್ಲಿರುವ ಮೂಗುತಿ ಬಗ್ಗೆ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಬೆಂಗಳೂರಿನ ಈ ಬೆಡಗಿಯ “ಮೀನಿನ ನಡೆ” ಗೊತ್ತಾಗಿದೆ. ಮೀನನ್ನು ಹಿಡಿದುಕೊಳ್ಳಲೇ ಕಷ್ಟಪಡುತ್ತಿದ್ದ ಸಪತ್ತಿ ಗೌಡ ಅವರಿಗೀಗ ಬಹಳ ಸುಲಭ ಮತ್ತು ಸರಳವಾಗಿ ಅದನ್ನು ಕಟ್‌ ಮಾಡುವ ನ್ಯಾಕ್‌ ಗೊತ್ತಾಗಿದೆಯಂತೆ!

ಕಾಂತಾರ ಸಿನಿಮಾದಲ್ಲಿ ಲೀಲಾ ಪಾತ್ರಧಾರಿಯಾಗಿ ಪಕ್ಕಾ ಹಳ್ಳಿ ಸೊಗಡಿಗನ ಬೆಡಗಿಯಾಗಿ ಬಣ್ಣ ಹಚ್ಚಿರುವ ಸಪ್ತಮಿ ಗೌಡ ಅವರಿಗೆ ಇದು ಮೊದಲನೇ ಸಿನಿಮಾ. ಮೊದ ಮೊದಲು ಸಪ್ತಮಿ ಗೌಡ ನಾಯಕಿ ಎಂದು ಕೇಳಿದಾಗ ಸಿನಿಮಾ ತಂಡ ಒಪ್ಪಲು ಸಿದ್ಧರಿರಲಿಲ್ಲವಂತೆ. ಆನಂತರ ಕ್ಯಾಮೆರಾ ಮುಂದೆ ಸಪ್ತಮಿಯನ್ನು ರಿಷಬ್‌ ನಿಲ್ಲಿಸಿದ್ದರಂತೆ.

ಇದನ್ನೂ ಓದಿ | Kantara Movie | ಕಾಂತಾರ ಸಿನಿಮಾಗೆ ನಟ ಪ್ರಭಾಸ್‌ ಮೆಚ್ಚುಗೆ; ನಟ ಹೇಳಿದ್ದೇನು?

ಒಂದು ತಿಂಗಳ ಕಾಲ ತರಬೇತಿ ಪಡೆದ ಸಪ್ತಮಿ!
ಕಾಂತಾರದಲ್ಲಿ ಸಪ್ತಮಿ ಗೌಡ ಅರಣ್ಯ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪಾತ್ರದಲ್ಲಿ ಸಪ್ತಮಿ ಹೇಗೆ ಕಾಣುತ್ತಾರೆ ಎನ್ನುವುದು ರಿಷಬ್‌ಗೆ ಪಕ್ಕಾ ಆಗಿದ್ದಲ್ಲದೆ, ತುಂಬಾ ಸ್ಪಷ್ಟತೆ ಇತ್ತು ಎಂದು ಅವರೇ ಮಾಧ್ಯಮಗಳಿಗೆ ಹೇಳಿಕೊಂಡಿದ್ದರು. ಇನ್ನು ಸಪ್ತಮಿ ಎರಡೂ ಕಡೆ ಮೂಗು ಚುಚ್ಚಿಸಿಕೊಳ್ಳಲು ರಿಷಬ್‌ ಶೆಟ್ಟಿಯೇ ಕಾರಣ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಈ ಮೂಲಕ ಸಿನಿಮಾದ ಪಾತ್ರಕ್ಕಾಗಿಯೇ ಅವರು ಮೂಗು ಚುಚ್ಚಿಸಿಕೊಂಡಿದ್ದರು ಎಂಬ ಸಂಗತಿ ತಿಳಿದುಬಂದಿತ್ತು. ಒಂದು ತಿಂಗಳ ಕಾಲ ಸಪ್ತಮಿಗೆ ರಿಷಬ್‌ (Rishabh Shetty) ತರಬೇತಿ ನೀಡಿದ್ದಾರೆ. ಮ್ಯಾನರಿಸಂ ಕೂಡ ಹೀಗಿಯೇ ಇರಬೇಕು ಎಂದು ಪಕ್ಕಾ ತಯಾರಿ ಮಾಡಿಯೇ ಅವರನ್ನು ಶೂಟಿಂಗ್‌ಗೆ ಕರೆದುಕೊಂಡು ಹೋಗಿದ್ದರಂತೆ ರಿಷಬ್‌.

ಮೀನು ಕಟ್‌ ಮಾಡಿಯೇ ಬಿಟ್ಟರು ಸಪ್ತಮಿ!
“ಮೀನಿನ ನಯವಾದ ಮೇಲ್ಮೈ ಮುಟ್ಟೋಕೆ ನನಗೆ ಆಗುತ್ತಿರಲಿಲ್ಲ. ಇದನ್ನು ರಿಷಬ್ ಅವರಲ್ಲಿಯೂ ಹೇಳಿದ್ದೆ” ಎಂದು ಸಪ್ತಮಿ ಹೇಳಿಕೊಂಡಿದ್ದರು. ಹಾಗಾಗಿ ಸಪ್ತಮಿ ಸಿನಿಮಾಗೋಸ್ಕರ ಮೀನು ಕಟ್ ಮಾಡುವುದನ್ನು ಪ್ರಾಕ್ಟೀಸ್ ಮಾಡಿದ್ದರು. ಕುಂದಾಪುರದಲ್ಲಿ ಅವರ ಸ್ಟಿಲ್ ಫೊಟೋಗ್ರಾಫರ್‌ ವಿಜೇತಾ ಅವರ ಅಮ್ಮನಿಂದ ಮೀನು ಕಟ್‌ ಮಾಡುವುದನ್ನು ಕಲಿತೆ” ಎಂದೂ ಹೇಳಿಕೊಂಡಿದ್ದಾರೆ ನಟಿ. ಇದೀಗ ಕಾಂತಾರ ನೂರು ಕೋಟಿ ಕ್ಲಬ್ ಸೇರುವ ಸಿನಿಮಾ ಆಗಿಯೂ ಹೊರಹೊಮ್ಮಲಿದೆ.

ಇದನ್ನೂ ಓದಿ | Kantara Movie | ಜ್ಯೂನಿಯರ್‌ ಎನ್‌ಟಿಆರ್‌ ಊರು ನನ್ನ ಹುಟ್ಟೂರು: ಕಾಂತಾರ ಜರ್ನಿ ಹಂಚಿಕೊಂಡ ರಿಷಬ್‌!

Exit mobile version