Site icon Vistara News

Kantara Movie | ರಿಷಬ್ ಒಳಗಿನ ಬರಹಗಾರ, ನಟ ಹಾಗೂ ನಿರ್ದೇಶಕನ ಅಭಿಮಾನಿಯಾದೆ: ಡಾಲಿ ಧನಂಜಯ್‌!

Kantara Movie

ಬೆಂಗಳೂರು : ಕಾಂತಾರ ಸಿನಿಮಾ (Kantara Movie) ದೇಶದೆಲ್ಲೆಡೆ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಅನೇಕ ಸೂಪರ್‌ ಸ್ಟಾರ್‌ ನಟ ನಟಿಯರು ಕಾಂತಾರ ಸಿನಿಮಾ ನೋಡಿ ಸೋಷಿಯಲ್‌ ಮೀಡಿಯಾ ಮೂಲಕ ಹೊಗಳಿದ್ದಾರೆ. ಇದೀಗ ಸ್ಯಾಂಡಲ್‌ವುಡ್‌ ನಟ ಡಾಲಿ ಧನಂಜಯ್‌ ಸಿನಿಮಾ ನೋಡಿ ಸಂತೋಷ ವ್ಯಕ್ತಪಡಿಸಿ ಟ್ವೀಟ್‌ ಮಾಡಿದ್ದಾರೆ.

ಡಾಲಿ ಧನಂಜಯ್‌ ಟ್ವೀಟ್‌ ಮೂಲಕ “ಕಾಂತಾರ, ನನ್ನ “ಹೆಡ್ ಬುಷ್” ಸಿನಿಮಾ ಕೆಲಸದ ನಡುವೆ ನೋಡೋದು ತಡವಾಯಿತು. ಪ್ರೀತಿಯ ಗೆಳೆಯ ರಿಷಬ್ ಒಳಗಿನ ಬರಹಗಾರ, ನಟ ಹಾಗು ನಿರ್ದೇಶಕನ ಅಭಿಮಾನಿಯಾದೆ. ಎಂತಹ ಅನುಭವ! ಗೆಳತಿ ಸಪ್ತಮಿಯ ಮುಗ್ಧತೆ ಇಷ್ಟವಾಯಿತು. ಕಾಂತಾರ ಖಂಡಿತವಾಗಿಯೂ ನಮ್ಮ ಹೆಮ್ಮೆ, ಕನ್ನಡ ಚಿತ್ರರಂಗದ ಹೆಮ್ಮೆ” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ | Kantara Movie | ಕಾಂತಾರ ಮತ್ತು ಧರ್ಮ: ಸಿನಿಮಾ ಸುತ್ತ ಎದ್ದಿರುವ ವಿವಾದಕ್ಕೆ ಖಡಕ್‌ ಉತ್ತರ ನೀಡಿದ ನಟ ಕಿಶೋರ್‌!

ಈ ಹಿಂದೆ ಕಾಂತಾರ ಸಿನಿಮಾವನ್ನು ಸೂಪರ್‌ ಸ್ಟಾರ್‌ಗಳು ಮೆಚ್ಚಿ ಕೊಂಡಾಡಿದ್ದರು. ಕರಾವಳಿ ಬೆಡಗಿ, ಟಾಲಿವುಡ್‌ ನಟಿ ಅನುಷ್ಕಾ ಶೆಟ್ಟಿ ಕೂಡ ಸಿನಿಮಾ ನೋಡಿ ಸೋಷಿಯಲ್‌ ಮೀಡಿಯಾ ಮೂಲಕ ಖುಷಿ ಹಂಚಿಕೊಂಡಿದ್ದರು. ರಾಣಾ ದಗ್ಗುಬಾಟಿ, ಧನುಷ್, ಪ್ರಭಾಸ್‌, ಪೃಥ್ವಿರಾಜ್‌ ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗದ ಸಾಕಷ್ಟು ಜನ ಸ್ಟಾರ್‌ಗಳು ಸಿನಿಮಾ ನೋಡಿ ಮೆಚ್ಚುಗೆ ಸೂಚಿಸಿದ್ದರು.

ಇದನ್ನೂ ಓದಿ | Kantara Movie | ತುಮಕೂರಿನಲ್ಲಿ ಅರ್ಧಕ್ಕೆ ಸ್ಥಗಿತಗೊಂಡ ಕಾಂತಾರ ಪ್ರದರ್ಶನ; ಪ್ರೇಕ್ಷಕರ ಪ್ರತಿಭಟನೆ

Exit mobile version