Site icon Vistara News

Kantara Movie | ಇಂಗ್ಲೀಷ್‌ ಭಾಷೆಗೆ ಡಬ್ ಆಗಲಿದೆ ಕಾಂತಾರ: ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್!

Kantara Movie

ಬೆಂಗಳೂರು : ಕಾಂತಾರ ಸಿನಿಮಾದ (Kantara Movie) ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಹಿಂದಿ ವರ್ಷನ್‌ ಒಟಿಟಿಯ ದಿನಾಂಕವನ್ನು ರಿವೀಲ್‌ ಮಾಡಿ ಸಿನಿಪ್ರಿಯರಿಗೆ ಸಿಹಿ ಸುದ್ದಿ ನೀಡಿದ್ದಾರೆ. ಅದರ ಬೆನ್ನಲ್ಲೇ ಅಂತಾರಾಷ್ಟ್ರೀಯ ಪ್ರೇಕ್ಷಕರನ್ನು ಸೆಳೆಯಲು ಇಂಗ್ಲಿಷ್‌ ಭಾಷೆಗೆ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತಿದೆ. ಈಗಾಗಲೇ ತಮಿಳು, ತೆಲುಗು, ಕನ್ನಡ ,ಹಿಂದಿ ಮತ್ತು ತುಳು ಭಾಷೆಯಲ್ಲಿ ಡಬ್ ಆಗಿ ರಿಲೀಸ್ ಆಗಿದೆ.

ʻಕಾಂತಾರʼ ಇಂಗ್ಲೀಷ್ ಭಾಷೆಗೆ ಡಬ್ ಆಗಿ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಲಿದೆ. ಎಲ್ಲಾ ಭಾಷೆಯ ಪ್ರೇಕ್ಷಕರನ್ನ ಸೆಳೆಯುತ್ತಿರುವ ಕಾಂತಾರ ಈಗ ವಿದೇಶಿಗರನ್ನು ಸೆಳೆಯಲು ಮುಂದಾಗಿದೆ. ಇನ್ನೂ ʻಕಾಂತಾರʼ ಇಂಗ್ಲಿಷ್ ವರ್ಷನ್ ಜನವರಿಯಿಂದ ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗಲಿದೆ. 

ಇದನ್ನೂ ಓದಿ | Kantara Movie | ಹಿಂದಿ ʻಕಾಂತಾರʼ ಒಟಿಟಿ ದಿನಾಂಕ ಪ್ರಕಟ: ವಿಶೇಷ ವಿಡಿಯೊ ಹಂಚಿಕೊಂಡ ರಿಷಬ್‌ ಶೆಟ್ಟಿ

ಈ ಬಗ್ಗೆ ಈಗಾಗಲೇ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗಳು ಆಗುತ್ತಿತ್ತು. ತುಳು ಭಾಷೆಯನ್ನು ಹೇಗೆ ಇಂಗ್ಲಿಷ್‌ನಲ್ಲಿ ಡಬ್‌ ಮಾಡುತ್ತಾರೆ ಎಂಬ ಕುತೂಹಲ ಪ್ರೇಕ್ಷಕರಿಗೆ ಹೆಚ್ಚಿಸಿದೆ.

ಇದನ್ನೂ ಓದಿ | Kantara Movie | ಕಾಂತಾರ ಸಿನಿಮಾ ಟೀಕಿಸಿದ ʻತುಂಬಾಡ್‌ʼ ಸಹ ನಿರ್ಮಾಪಕ ಹೇಳಿದ್ದೇನು?

Exit mobile version