Site icon Vistara News

Kantara Movie | ಹಿಂದಿ ʻಕಾಂತಾರʼ ಒಟಿಟಿ ದಿನಾಂಕ ಪ್ರಕಟ: ವಿಶೇಷ ವಿಡಿಯೊ ಹಂಚಿಕೊಂಡ ರಿಷಬ್‌ ಶೆಟ್ಟಿ

Kantara Movie in netflix

ಬೆಂಗಳೂರು : ನಟ, ನಿರ್ದೇಶಕ ರಿಷಬ್‌ ಶೆಟ್ಟಿ (Kantara Movie ) ಸಿನಿಪ್ರಿಯರಿಗೆ ಹೊಸ ಸುದ್ದಿಯೊಂದನ್ನು ನೀಡಿದ್ದಾರೆ. ಹಿಂದಿ ವರ್ಷನ್‌ ಒಟಿಟಿಯಲ್ಲಿ ಬರುತ್ತಿದೆ ಕಾಂತಾರ. ವಿಭಿನ್ನ ವಿಡಿಯೊ ಹಂಚಿಕೊಳ್ಳುವುದರ ಮೂಲಕ ಹಿಂದಿ ವರ್ಷನ್‌ ಒಟಿಟಿ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿದ್ದಾರೆ.

400 ಕೋಟಿ ರೂ.ಗೂ ಅಧಿಕ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಮಾಡಿ ಯಶಸ್ವಿ ಪ್ರದರ್ಶನ ಕಂಡಿದೆ ಕಾಂತಾರ. ಒಟಿಟಿಗೆ ಬಿಡುಗಡೆಯಾದಾಗ ʻವರಾಹ ರೂಪಂʼ ಹಾಡಿನ ಕುರಿತು ನೋಡುಗರು ಅಸಮಾಧಾನ ಹೊರಹಾಕಿದ್ದರು. ಕೋರ್ಟ್‌ನಲ್ಲಿ ಕೇಸ್‌ ಗೆದ್ದ ಬಳಿಕ ಒರಿಜಿನಲ್‌ ಹಾಡು ಪ್ರಸಾರವಾಗಿದೆ. ಈ ಸಿಹಿ ಸುದ್ದಿ ಬೆನ್ನಲ್ಲೇ ಹಿಂದಿ ವರ್ಷನ್ ಒಟಿಟಿಗೆ ರಿಲೀಸ್ ಯಾವಾಗ ಎಂದು ಹಿಂದಿ ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದರು. ಅದಕ್ಕೀಗ ಉತ್ತರ ಸಿಕ್ಕಿದೆ.

ಇದನ್ನೂ ಓದಿ | Kantara Movie | ಕಾಂತಾರ ಸಿನಿಮಾ ಟೀಕಿಸಿದ ʻತುಂಬಾಡ್‌ʼ ಸಹ ನಿರ್ಮಾಪಕ ಹೇಳಿದ್ದೇನು?

ʻಕಾಂತಾರ’ ಅಮೆಜಾನ್ ಪ್ರೈಮ್‌ನಲ್ಲಿ ಈಗಾಗಲೇ ರಿಲೀಸ್ ಆಗಿದೆ. ಹಿಂದಿ ವರ್ಷನ್ ʻಕಾಂತಾರʼ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ನೆಟ್‌ಫ್ಲಿಕ್ಸ್ ʻಕಾಂತಾರ’ ಸ್ಟ್ರೀಮಿಂಗ್ ಬಗ್ಗೆ ರಿಷಬ್ ಶೆಟ್ಟಿ ದಿನಾಂಕ ಬಹಿರಂಗಪಡಿಸಿದ್ದಾರೆ. ʻಕಾಂತಾರ’ ಹಿಂದಿ ವರ್ಷನ್ ನೆಟ್‌ಫ್ಲಿಕ್ಸ್‌ನಲ್ಲಿ ಡಿಸೆಂಬರ್ 9ಕ್ಕೆ ತೆರೆಗೆ ಬರಲಿದೆ. 

ಇದನ್ನೂ ಓದಿ | Kantara movie | ವಿಶ್ವಾದ್ಯಂತ ಕಾಂತಾರ ಸಿನಿಮಾ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಹೀಗಿದೆ

Exit mobile version