Site icon Vistara News

Kantara Movie | ಕೇರಳದಲ್ಲಿ ಭರ್ಜರಿ ಕಲೆಕ್ಷನ್‌ ಮಾಡಿದ ಕಾಂತಾರ!

Kantara Movie

ಬೆಂಗಳೂರು : ಕಾಂತಾರ ಸಿನಿಮಾ (Kantara Movie) ಕೇರಳದಲ್ಲಿ ಭರ್ಜರಿ ಪ್ರದರ್ಶನ ಕಂಡಿದೆ. ತೆಲುಗು, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಗಳಿಗೂ ಕಾಂತಾರ ಡಬ್ ಆಗಿದ್ದು ಮೆಚ್ಚುಗೆಗೆ ಪಾತ್ರವಾಗಿತ್ತು. ಎಲ್ಲಕ್ಕಿಂತ ಅಂತಿಮವಾಗಿ ಕಾಂತಾರ ಮಲಯಾಳಂ ವರ್ಷನ್ ತೆರೆಗೆ ಬಂದಿತ್ತು. ಕಾಂತಾರ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಮಲಯಾಳಂನ ಹಿಟ್ ಚಿತ್ರ ‘ಜಯ ಜಯ ಜಯ ಜಯ ಹೇ’ ಬಿಡುಗಡೆಯಾದರೂ ಸಹ ಕಾಂತಾರ ಸೋಲದೇ ಒಳ್ಳೆಯ ಗಳಿಕೆಯನ್ನು ಮಾಡಿದೆ.

ಅಕ್ಟೋಬರ್‌ 20ರಂದು ಕಾಂತಾರದ ಮಲಯಾಳಂ ವರ್ಷನ್‌ ಅನ್ನು ಮಲಯಾಳಂ ಸ್ಟಾರ್‌ ನಟ ಪೃಥ್ವಿರಾಜ್‌ ಸುಕುಮಾರನ್‌ ಕೇರಳ ರಾಜ್ಯಾದ್ಯಂತ ವಿತರಿಸಿದ್ದರು. ಅಮೆಜಾನ್ ಪ್ರೈಮ್ ವಿಡಿಯೊ ಅಪ್ಲಿಕೇಶನ್‌ನಲ್ಲಿ ಒಟಿಟಿ ಬಿಡುಗಡೆಗೊಂಡಿರುವ ಕಾಂತಾರ ಚಿತ್ರ ಕೇರಳದಲ್ಲಿ ಒಟ್ಟು 19.45 ಕೋಟಿ ಗಳಿಸಿದೆ. ಹದಿನಾರು ಕೋಟಿ ರೂ. ವೆಚ್ಚದಲ್ಲಿ ತಯಾರಾಗಿದ್ದ ಕಾಂತಾರ ಸಿನಿಮಾ ಕೇರಳದ ಕಲೆಕ್ಷನ್‌ ಮೂಲಕ ಬಜೆಟ್‌ ವಾಪಾಸ್ಸು ಪಡೆದುಕೊಂಡಿದೆ.

ಇದನ್ನೂ ಓದಿ | Kantara Movie | ಕರಾವಳಿಯಲ್ಲಿ ಇಂದಿನಿಂದ ತುಳು ಕಾಂತಾರ: ದೈವದ ಕುರಿತು ರಿಷಬ್‌ ಹೇಳಿದ್ದೇನು?

ಸದ್ಯ ಒಟಿಟಿಯಲ್ಲಿ ಕಾಂತಾರ ಬಿಡುಗಡೆಗೊಂಡಿದ್ದು ಡಿಸೆಂಬರ್‌ 2 ಚಿತ್ರಮಂದಿರಗಳಲ್ಲಿ ಕಾಂತಾರ ತುಳು ವರ್ಷನ್‌ನಲ್ಲಿ ತೆರೆ ಕಂಡಿದೆ. ಕರ್ನಾಟಕದಲ್ಲಿ 170 ಕೋಟಿ ರೂ. ಆಂಧ್ರ ಪ್ರದೇಶ ಹಾಗೂ ತೆಲಂಗಾಣ 61 ಕೋಟಿ ರೂ. ತಮಿಳುನಾಡು 12.90 ಕೋಟಿ ರೂ. ಕೇರಳ 19.45 ಕೋಟಿ ರೂ. ವಿದೇಶದಲ್ಲಿ 45 ಕೋಟಿ ರೂ. ಹಾಗೂ ಉತ್ತರಭಾರತದಲ್ಲಿ 101 ಕೋಟಿ ರೂ. ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಮಾಡಿದೆ.

ಇದನ್ನೂ ಓದಿ | Kantara Movie | ವರಾಹ ರೂಪಂ ಹಾಡಿಗೆ ಗ್ರೀನ್‌ ಸಿಗ್ನಲ್‌ ನೀಡಿದ್ದ ಜಿಲ್ಲಾ ಕೋರ್ಟ್‌ ಆದೇಶಕ್ಕೆ ಕೇರಳ ಹೈಕೋರ್ಟ್‌ ತಡೆಯಾಜ್ಞೆ

Exit mobile version