Site icon Vistara News

Kantara Movie | ಆಸ್ಕರ್‌ ಅವಾರ್ಡ್‌ಗೆ ಕಾಂತಾರ ನಾಮಿನೇಟ್ ಮಾಡಿ: ಶುರುವಾಯ್ತು ಟ್ವಿಟರ್ ಆಂದೋಲನ!

Kantara Movie

ಬೆಂಗಳೂರು: ಕಾಂತಾರ ಸಿನಿಮಾಗೆ (Kantara Movie) ನೂರಾರು ಕೋಟಿ ಕ್ಲಬ್‌ ಸೇರಿ ಮುನ್ನುಗ್ಗುತ್ತಿದೆ. ಕಾಂತಾರ ನೋಡಿದ ಪ್ರೇಕ್ಷಕರು ಈ ಸಿನಿಮಾಗೆ ಆಸ್ಕರ್‌ ಅವಾರ್ಡ್‌ಗೆ ನಿರ್ದೇಶನ ಮಾಡಬೇಕು ಎಂದು ಟ್ವೀಟ್‌ನಲ್ಲಿ ಆಂದೋಲನ ನಡೆಸಿದ್ದಾರೆ. ಈ ಬಗ್ಗೆ ಟ್ವಿಟರ್‌ನಲ್ಲಿ ಸಿನಿರಸಿಕರು ಬರೆದುಕೊಂಡಿದ್ದಾರೆ.

ʻʻಕಾಂತಾರ ಚಿತ್ರದಲ್ಲಿ ಕಾಡಿನ ರಕ್ಷಣೆಯ ಜಾಗೃತಿ ಮೂಡಿಸಲಾಗಿದೆ. ಅಷ್ಟೇ ಅಲ್ಲ ದೈವಗಳ ಬಗ್ಗೆ ಪರಿಚಯಿಸಲಾಗಿದೆ. ಹಿನ್ನೆಲೆ ಸಂಗೀತ, ಸಿನಿಮಾದ ಛಾಯಾಗ್ರಹಣದ ಮೂಲಕವೂ ಸಿನಿಮಾ ಗಮನ ಸೆಳೆದಿದೆ. ಕಾಂತಾರ ಚಿತ್ರವನ್ನು ಆಸ್ಕ್‌ರ್‌ಗೆ ನಾಮನಿರ್ದೇಶನ ಮಾಡಬೇಕುʼʼ ಎಂದು ಅನೇಕರು ಟ್ವಿಟರ್‌ನಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಇದನ್ನೂ ಓದಿ | Kantara Movie | ಚೇತನ್‌ ಟೀಕೆಗೆ ಉತ್ತರ ಕೊಟ್ಟ ರಿಷಬ್‌ ಶೆಟ್ಟಿ: ಏನಂದರು ಗೊತ್ತೆ?

KantaraForOscars ಹ್ಯಾಶ್‌ಟ್ಯಾಗ್‌ ಅಡಿಯಲ್ಲಿ ಅನೇಕರು ಈ ಬಗ್ಗೆ ಟ್ವೀಟ್‌ ಮಾಡುತ್ತಿದ್ದಾರೆ. ಈ ಮಧ್ಯೆ ಕಾಂತಾರ ಸಿನಿಮಾ ರಾಷ್ಟ್ರ ಪ್ರಶಸ್ತಿಯೂ ಸಿಗಬೇಕು ಎನ್ನುವ ಮಾತುಗಳು ಕೇಳಿ ಬರುತ್ತಿದೆ. ʻಆರ್‌ಆರ್‌ಆರ್‌ʼ ಸಿನಿಮಾ ಹಾಗೂ ʻದಿ ಕಾಶ್ಮೀರ್‌ ಫೈಲ್ಸ್‌ʼ ಸಿನಿಮಾ ಆಸ್ಕರ್‌ಗೆ ನಾಮ ನಿರ್ದೇಶನಗೊಂಡಿಲ್ಲ. ಈ ಕಾರಣಕ್ಕೆ ಸೋಷಿಯಲ್‌ ಮೀಡಿಯಾದಲ್ಲಿ ಕಾಂತಾರ ಸಿನಿಮಾ ಆಸ್ಕರ್‌ಗೆ ನಾಮ ನಿರ್ದೇಶನ ಮಾಡಬೇಕು ಎಂದು ಕೆಲವರು ಟ್ವೀಟ್‌ ಮಾಡುತ್ತಿದ್ದಾರೆ.

ಇದನ್ನೂ ಓದಿ | Kantara Movie | ನಟ ಚೇತನ್‌ಗೆ ಭೂತಕೋಲ ಸಂಕಷ್ಟ; ಕಾರ್ಕಳದಲ್ಲಿ ದೂರು ದಾಖಲು

Exit mobile version