ಬೆಂಗಳೂರು: ರಿಷಬ್ ಶೆಟ್ಟಿ ನಟನೆ ಹಾಗೂ ನಿರ್ದೇಶನದ ಕಾಂತಾರ ಸಿನಿಮಾ (Kantara Movie) ಸೆ.30ರಂದು ತೆರೆ ಕಾಣುತ್ತಿದೆ. ರಾಜ್ಯಾದ್ಯಂತ 250 ಥಿಯೇಟರ್‌ಗಳಲ್ಲಿ ಗ್ರ್ಯಾಂಡ್ ರಿಲೀಸ್ ಆಗುತ್ತಿದೆ. ಯುಎಸ್, ಯುಕೆ, ಯುರೋಪ್, ಮಧ್ಯಪ್ರಾಚ್ಯ ಮತ್ತು ಆಸ್ಟ್ರೇಲಿಯಾ ಸೇರಿದಂತೆ ಹಲವು ಕಡೆ ಏಕಕಾಲದಲ್ಲಿ ಬಿಡುಗಡೆಗೊಳ್ಳಲಿದೆ. ಇದೀಗ ಕಾಂತಾರ ಶೀರ್ಷಿಕೆಯ ಅರ್ಥ ಹಾಗೂ ಹೆಸರನ್ನು ಯಾರು ಸೂಚಿಸಿದರು ಎಂಬುದರ ಬಗ್ಗೆ ರಿವೀಲ್ ಆಗಿದೆ.
ಈ ಸಿನಿಮಾ ಕೊಚ್ಚಿ, ಕಾಸರಗೋಡು, ಹೈದರಾಬಾದ್ ಮತ್ತು ಚೆನ್ನೈನಲ್ಲಿ ಪ್ರೀಮಿಯರ್ ಶೋಗಳನ್ನು ನಡೆಸಲಿದೆ. ಸಿನಿಮಾದ ಟ್ರೈಲರ್ ಹಾಗೂ ಮೇಕಿಂಗ್ ವಿಡಿಯೊ ಮತ್ತು ಪೋಸ್ಟರ್‌ಗಳು ಸಿನಿಮಾದ ಬಗ್ಗೆ ಇದ್ದ ಕುತೂಹಲ ಸಿನಿಪ್ರಿಯರಿಗೆ ಹೆಚ್ಚಾಗುತ್ತಿದೆ.
ಇದನ್ನೂ ಓದಿ | Kantara Movie | ಸಿನಿಪ್ರಿಯರನ್ನು ಸೆಳೆಯುತ್ತಿದೆ ಕಾಂತಾರ ಪ್ರಮೋಷನ್ ಪೋಸ್ಟರ್: ಇಲ್ಲಿವೆ ಫೋಟೊಗಳು!
ಕಾಂತಾರ ಎಂದರೆ?
ಕಾಂತ ಎಂದರೆ ʻಪತಿʼ, ʻಪ್ರಿಯಕರʼ ಎಂಬ ಅರ್ಥವಿದೆ. ಕರಾವಳಿ ಭಾಗದಲ್ಲಿ ʻಖಂಡಿತಾʼ ಎಂತಲೂ ರೂಢಿಗತವಾಗಿದೆ. ಕಾಂತಾರ ಎಂದರೆ ಕಾಡು. ಬರೀ ಕಾಡಲ್ಲ, ನಿಗೂಢಗಳನ್ನು ಒಳಗಿಟ್ಟುಕೊಂಡಿರುವ ಕಾಡು. ಈ ಸಿನಿಮಾಗೆ ಕಾಂತಾರ ಎಂದು ಹೆಸರಿಟ್ಟಿದ್ದು ನಟ, ನಿರ್ದೇಶಕ ರಾಜ್ ಬಿ. ಶೆಟ್ಟಿ ಎಂದು ಚಿತ್ರತಂಡ ಹೇಳಿಕೊಂಡಿದೆ.
ರಿಷಬ್ ಶೆಟ್ಟಿ ಕಾಂತಾರ ಚಿತ್ರದ ಕಥೆಯನ್ನು ಹೇಳಿದಾಗ ರಾಜ್ ಬಿ. ಶೆಟ್ಟಿ ಈ ಹೆಸರು ಸೂಚಿಸಿದ್ದರಂತೆ. ʻಕಾಂತಾರ ಒಂದು ದಂತಕಥೆʼ ಎಂಬ ಟ್ಯಾಗ್‌ಲೈನ್ ನೀಡಿದ್ದು, ಇದನ್ನು ರಕ್ಷಿತ್ ಶೆಟ್ಟಿ ಸೂಚಿಸಿದ್ದಾರೆ ಎಂಬ ಮಾತುಗಳೂ ಕೇಳಿ ಬಂದಿವೆ. ಈ ಸಿನಿಮಾಗೆ ನಾಯಕನ ಹೆಸರು ಶಿವ ಎಂದು ಚಿತ್ರತಂಡ ಈಗಾಗಲೇ ರಿವೀಲ್ ಮಾಡಿದೆ.
ಇದನ್ನೂ ಓದಿ | Kantara Movie | ವರ್ಲ್ಡ್ ಆಫ್ ಕಾಂತಾರ -ಭಾಗ 1 ವಿಡಿಯೊ ಹಂಚಿಕೊಂಡ ಹೊಂಬಾಳೆ : ಕಂಬಳ ಪ್ರಮುಖ ಹೈಲೈಟ್!
ಅಜನೀಶ್ ಬಿ. ಲೋಕನಾಥ್ ಅವರ ಸಂಗೀತ ಮತ್ತು ಅರವಿಂದ್ ಕಶ್ಯಪ್ ಛಾಯಾಗ್ರಹಣವಿದೆ. ಕಾಂತಾರ ಸಿನಿಮಾದಲ್ಲಿ ಸಪ್ತಮಿ ಗೌಡ, ಕಿಶೋರ್ ಮತ್ತು ಅಚ್ಯುತ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.