Site icon Vistara News

Kantara Movie | ಕಿರುತೆರೆಯಲ್ಲಿ ಕಾಂತಾರ: ಡೇಟ್‌ ರಿವೀಲ್‌, ಸಂಕ್ರಾಂತಿ ಹಬ್ಬದ ಸಂಭ್ರಮಕ್ಕೆ ಸಿನಿಮಾ ಅಬ್ಬರ

Kantara Movie

ಬೆಂಗಳೂರು: ರಿಷಬ್‌ ಶೆಟ್ಟಿ ನಿರ್ದೇಶನ ಹಾಗೂ ನಟನೆಯ ʻಕಾಂತಾರʼ ಸಿನಿಮಾ (Kantara Movie) ಜನವರಿ 15 ರಂದು ಸಂಜೆ 6 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸಿನಿಮಾ ಪ್ರಸಾರವಾಗಲಿದೆ. ʻಕಾಂತಾರ’ ಸಿನಿಮಾವು ಚಿತ್ರಮಂದಿರಗಳಲ್ಲಿ ಸುಮಾರು 400 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಅಮೆಜಾನ್ ಹಾಗೂ ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ಈ ಸಿನಿಮಾ ಬಿಡುಗಡೆ ಆಗಿದ್ದು ಅಲ್ಲಿಯೂ ಒಳ್ಳೆಯ ಪ್ರದರ್ಶನ ಕಂಡಿದೆ.

ಸಿನಿಮಾವನ್ನು ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿದ್ದು, ಹೊಂಬಾಳೆ ಪ್ರೊಡಕ್ಷನ್‌ನವರು ನಿರ್ಮಾಣ ಮಾಡಿದ್ದಾರೆ. ಸಿನಿಮಾದಲ್ಲಿ ರಿಷಬ್ ಜತೆಗೆ ಸಪ್ತಮಿ ಗೌಡ ನಾಯಕಿಯಾಗಿ ನಟಿಸಿದ್ದಾರೆ. ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಇನ್ನೂ ಮುಂತಾದವರು ನಟಿಸಿದ್ದಾರೆ. ರಾಣಾ ದಗ್ಗುಬಾಟಿ, ಧನುಷ್, ಪ್ರಭಾಸ್‌, ಪೃಥ್ವಿರಾಜ್‌ ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗದ ಸಾಕಷ್ಟು ಜನ ಸ್ಟಾರ್‌ಗಳು ಸಿನಿಮಾ ನೋಡಿ ಮೆಚ್ಚುಗೆ ಸೂಚಿಸಿದ್ದರು.

ಇದನ್ನೂ ಓದಿ | Rishab Shetty | 400 ಕೋಟಿ ರೂ. ಗಳಿಕೆ ಕಂಡ ಕಾಂತಾರ ಸಿನಿಮಾಗೆ ರಿಷಬ್‌ ಪಡೆದುಕೊಂಡ ಸಂಭಾವನೆ ಎಷ್ಟು?

ಈಗಾಗಲೇ ಕಾಂತಾರ ಚಿತ್ರವನ್ನು 2023ನೇ ಆಸ್ಕರ್‌ಗೆ ನಾಮನಿರ್ದೇಶನ ಮಾಡುವಂತೆ ಅರ್ಜಿ ಸಲ್ಲಿಸಿರುವುದಾಗಿ ಹೊಂಬಾಳೆ ಫಿಲ್ಮ್ಸ್ ಅಧಿಕೃತವಾಗಿ ತಿಳಿಸಿದೆ. ಚಿತ್ರದ ನಿರ್ಮಾಪಕರಾದ ಹೊಂಬಾಳೆ ಪ್ರೊಡಕ್ಷನ್ಸ್‌ ಇದನ್ನು ಖಾತ್ರಿಪಡಿಸಿದ್ದು, ಕಾಂತಾರ- ೨ ನಿರ್ಮಿಸುವ ಸುಳಿವನ್ನೂ ನೀಡಿದೆ. ಹೊಂಬಾಳೆ ಪ್ರೊಡಕ್ಷನ್ಸ್ ಸಂಸ್ಥಾಪಕ ವಿಜಯ್ ಕಿರಗಂದೂರ್ ಈ ಬಗ್ಗೆ ಖಾಸಗಿ ವಾಹಿನಿಯೊಂದಿಗೆ ಮಾತನಾಡಿದ್ದು, ಕೊನೆಯ ಕ್ಷಣದಲ್ಲಿ ಅರ್ಜಿ ಕಳುಹಿಸಿದ್ದು, ನಾಮನಿರ್ದೇಶನಕ್ಕೆ ಪರಿಗಣಿಸುವ ಬಗ್ಗೆ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ | Kantara movie | ಪಡುಬಿದ್ರಿ ದೈವಸ್ಥಾನದಲ್ಲಿ ಕಾಂತಾರ ಮಾದರಿ ಕಾಳಗ: ಕೋರ್ಟ್‌ಗೆ ಹೋಗಿದ್ದ ವ್ಯಕ್ತಿ ಸಾವಿನ ಬಳಿಕ ಆತಂಕ

Exit mobile version