Site icon Vistara News

Kantara Movie | ಎರಡನೇ ಬಾರಿ ಕಾಂತಾರ ವೀಕ್ಷಿಸಿದ ಪ್ರಭಾಸ್‌: ಸ್ಟಾರ್‌ ನಟರ ಮೆಚ್ಚುಗೆ!

Kantara Movie

ಬೆಂಗಳೂರು: ‘ಕಾಂತಾರ’ ಸಿನಿಮಾ (Kantara Movie) ಜಗತ್ತಿನಾದ್ಯಂತ ಇತಿಹಾಸ ಬರೆದು ₹ 100 ಕೋಟಿ ಕ್ಲಬ್ ಸೇರುವತ್ತ ದಾಪುಗಾಲು ಇಡುತ್ತಿದೆ. ಕಾಂತಾರ ಸಿನಿಮಾಗೆ ಕನ್ನಡ ಮಾತ್ರವಲ್ಲದೆ ಪರಭಾಷೆಯಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಟಾಲಿವುಡ್‌ ನಟ ಪ್ರಭಾಸ್‌ ʻಈ ಸಿನಿಮಾದ ಕ್ಲೈಮ್ಯಾಕ್ಸ್‌ ಬಹಳ ಇಷ್ಟವಾಯಿತುʼ ಎಂದು ಸೋಷಿಯಲ್‌ ಮೀಡಿಯಾ ಮೂಲಕ ಈ ಹಿಂದೆ ಹೇಳಿಕೊಂಡಿದ್ದರು. ಇದೀಗ ಎರಡನೇ ಬಾರಿ ಸಿನಿಮಾ ನೋಡಿದ ಬಳಿಕ ಪೋಸ್ಟ್‌ ಶೇರ್‌ ಮಾಡಿಕೊಂಡಿದ್ದಾರೆ.

ಎರಡನೇ ಬಾರಿ ಕಾಂತಾರ ಸಿನಿಮಾವನ್ನು ವೀಕ್ಷಿಸಿದ ಪ್ರಭಾಸ್‌ ಇನ್ಸ್‌ಸ್ಟಾ ಮೂಲಕ ಅಭಿಪ್ರಾಯ ಹಂಚಿಕೊಂಡಿದ್ದಾರೆ. ʻʻಕಾಂತಾರ ಸಿನಿಮಾವನ್ನು ಎರನೇ ಬಾರಿ ವೀಕ್ಷಿಸಿದೆ. ವಾಹ್‌! ಎಂತಹ ಅನುಭವ!! ಉತ್ತಮ ಪರಿಕಲ್ಪನೆ ಮತ್ತು ರೋಮಾಂಚಕ ಕ್ಲೈಮ್ಯಾಕ್ಸ್. ಚಿತ್ರಮಂದಿರದಲ್ಲಿ ನೋಡಲೇಬೇಕಾದ ಚಿತ್ರʼʼ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ | Kantara Movie | ಕಾಂತಾರ ʻಮೈಂಡ್‌ ಬ್ಲೋಯಿಂಗ್‌ʼಎಂದ ನಟ ಧನುಷ್‌: ರಿಷಬ್‌ ಸ್ಫೂರ್ತಿ ಅಂದ್ರು ರಾಣಾ!

ಈ ಹಿಂದೆ ನಟ ಪ್ರಭಾಸ್‌ ತಮ್ಮ ಇನ್‌ಸ್ಟಾ ಸ್ಟೋರಿಯಲ್ಲಿ ಅನಿಸಿಕೆಯನ್ನು ಹಾಕಿಕೊಂಡಿದ್ದರು, ʻʻಕಾಂತಾರ ಸಿನಿಮಾ ನೋಡಿ ಎಂಜಾಯ್‌ ಮಾಡಿದೆ. ವಿಶೇಷವಾಗಿ ಕ್ಲೈಮ್ಯಾಕ್ಸ್‌. ಚಿತ್ರತಂಡಕ್ಕೆ ನನ್ನ ಶುಭಾಶಯಗಳು, ಸಿನಿಮಾಗೆ ಇನ್ನಷ್ಟು ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆʼʼ ಎಂದು ಬರೆದುಕೊಂಡಿದ್ದರು.

ಈ ಹಿಂದೆ ನಟ ಕಿಚ್ಚ ಸುದೀಪ್‌ ಮತ್ತು ನಟ ಪೃಥ್ವಿರಾಜ್‌ ಸುಕುಮಾರನ್‌ ಕೂಡ ಪಾಸಿಟಿವ್‌ ಮಾತುಗಳನ್ನು ಹಂಚಿಕೊಂಡಿದ್ದರು. ತಮಿಳು ಸ್ಟಾರ್‌ ನಟ ಧನುಷ್‌ ಹಾಗೂ ಟಾಲಿವುಡ್‌ ನಟ ರಾಣಾ ದಗ್ಗುಬಾಟಿ ಟ್ವೀಟ್‌ ಮಾಡಿ ಹೊಗಳಿದ್ದರು. ʻʻಕಾಂತಾರ ಮೈಂಡ್‌ ಬ್ಲೋಯಿಂಗ್‌! ನೋಡಲೇಬೇಕಾದ ಸಿನಿಮಾ. ರಿಷಬ್ ಶೆಟ್ಟಿ ನೀವು ನಿಮ್ಮ ಬಗ್ಗೆ ತುಂಬಾ ಹೆಮ್ಮೆ ಪಡಬೇಕು. ಬೌಂಡರಿಗಳನ್ನು ದಾಟಿ ಸಿನಿಮಾ ಮಾಡುತ್ತಿರುವ ಹೊಂಬಾಳೆಗೆ ಅಭಿನಂದನೆಗಳು. ಚಿತ್ರದ ಎಲ್ಲ ನಟರು ಮತ್ತು ತಂತ್ರಜ್ಞರಿಗೆ ನನ್ನ ಅಪ್ಪುಗೆ. ದೇವರು ಒಳ್ಳೆಯದು ಮಾಡಲಿʼʼ ಎಂದು ಹೇಳಿಕೊಂಡಿದ್ದರು.

ಧನುಷ್‌ ಟ್ವೀಟ್‌ಗೆ ಕನ್ನಡಿಗರು ಕಮೆಂಟ್‌ ಮೂಲಕ ಉತ್ತಮ ಪ್ರತಿಕ್ರಿಯೆ ನೀಡಿದ್ದರು. ಬಾಹುಬಲಿ ಖ್ಯಾತಿಯ ರಾಣಾ ದಗ್ಗುಬಾಟಿ ”ಕಾಂತಾರ ಒಂದು ಅದ್ಭುತವಾದ ಸಿನಿಮಾ. ಚಿತ್ರ ತಂಡದ ಪ್ರತಿಯೊಬ್ಬರಿಗೂ ಅಭಿನಂದನೆಗಳು. ರಿಷಬ್‌ ನೀವು ನಿಜವಾಗಿಯೂ ನಮಗೆ ಸ್ಫೂರ್ತಿʼʼ ಎಂದು ಟ್ವೀಟ್‌ ಮಾಡಿದ್ದರು.

ಈ ಚಿತ್ರಕ್ಕೆ ಅಜನೀಶ್ ಬಿ. ಲೋಕನಾಥ್ ಸಂಗೀತ ಮತ್ತು ಅರವಿಂದ್ ಕಶ್ಯಪ್ ಛಾಯಾಗ್ರಹಣವಿದೆ. ಸಪ್ತಮಿ ಗೌಡ, ಕಿಶೋರ್ ಮತ್ತು ಅಚ್ಯುತ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ | Kantara Movie | ಹೊರ ರಾಜ್ಯಗಳಲ್ಲೂ ಕನ್ನಡಿಗರ ಕಾಂತಾರ ಹವಾ ಜೋರು!

Exit mobile version