Site icon Vistara News

Kantara Movie | ಸಿನಿಪ್ರಿಯರನ್ನು ಸೆಳೆಯುತ್ತಿದೆ ಕಾಂತಾರ ಪ್ರಮೋಷನ್‌ ಪೋಸ್ಟರ್‌: ಇಲ್ಲಿವೆ ಫೋಟೊಗಳು!

Kantara Movie

ಬೆಂಗಳೂರು ಹೊಂಬಾಳೆ ಫಿ‌ಲ್ಮ್ಸ್‌ ನಿರ್ಮಿಸಿರುವ‌, ರಿಷಭ್‌ ಶೆಟ್ಟಿ ನಿರ್ದೇಶಿಸಿ, ನಾಯಕನಾಗಿ ನಟಿಸಿರುವ ಕಾಂತಾರ ಚಿತ್ರದ (Kantara Movie) ಸೆ.30ಕ್ಕೆ ರಾಜ್ಯಾದ್ಯಂತ ಬಿಡುಗಡೆಗೊಳ್ಳುತ್ತಿದೆ. ಈಗಾಗಲೇ ಸಿನಿಮಾ ಪ್ರಮೋಷನ್‌ ಶುರು ಮಾಡಿದ್ದು, ಹಲವು ಫೋಟೊಗಳನ್ನು ಹಂಚಿಕೊಂಡಿದೆ. ಈ ಹಿಂದೆಯೇ ಸಿನಿಮಾ ಟ್ರೈಲರ್‌ ಬಿಡುಗಡೆಗೊಂಡಿತ್ತು. ಕಾಂತಾರ ಟ್ರೈಲರ್‌ನಲ್ಲಿ ಕುಂದಾಪುರದ ಜಾನಪದ ಹಾಡು ಮತ್ತು ತುಳು ನಾಡಿನ ದೈವ ಕೋಲ ಮತ್ತು ಕಂಬಳ ಕ್ರೀಡೆ ಹೈಲೈಟ್ ಆಗಿದೆ. ದಕ್ಷಿಣ ಕನ್ನಡದ ಆಚರಣೆಯ ಚಿತ್ರಣವನ್ನು ಕಟ್ಟಿಕೊಡುವಂತಿದೆ.

ಈ ಹಿಂದೆ ಕಾಂತಾರ ಸಿನಿಮಾದ ಪೋಸ್ಟರ್‌ ನೋಡುವಾಗಲೇ ʻಕಾಂತಾರʼ ಶೀರ್ಷಿಕೆಯೇ ಜನರನ್ನು ಕುತೂಹಲಕ್ಕೆ ಕೊಂಡೊಯ್ದಿತ್ತು. ಒಂದು ದಂತ ಕಥೆ ಎಂಬ ಟ್ಯಾಗ್‌ಲೈನ್‌ ಮೂಲಕ ಜನರನ್ನು ಸೆಳೆದಿತ್ತು.
ಕಾಂತಾರ ಚಿತ್ರಕ್ಕೆ ಅಜನೀಶ್ ಬಿ ಲೋಕನಾಥ್ ಸಂಗೀತ ಮತ್ತು ಅರವಿಂದ್ ಎಸ್ ಕಶ್ಯಪ್ ಅವರ ಛಾಯಾಗ್ರಹಣವಿದೆ.
ಇದು ಕಂಬಳದೊಂದಿಗೆ ಬೆಸೆದುಕೊಂಡು ರೂಪಿಸಲಾದ ಕಾಡುಗಳ್ಳರ ಕಥೆ ಇರಬಹುದು ಎಂದು ಹೇಳಲಾಗಿದೆ.
ಈ ಚಿತ್ರದಲ್ಲಿ ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್ ಮತ್ತು ಪ್ರಮೋದ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಕರಾವಳಿಯಿಂದಲೇ ಬಂದಿರುವ ರಿಷಭ್‌ ಶೆಟ್ಟಿ ಅಲ್ಲಿನ ನೇಟಿವಿಟಿಯನ್ನೇ ಬಳಸಿಕೊಂಡು ಕಥೆ ಮಾಡಿದ್ದಾರೆ. ಈ ಸಿನಿಮಾ ಸೆಪ್ಟಂಬರ್ 30ಕ್ಕೆ ದೇಶದಾದ್ಯಂತ ತೆರೆ ಕಾಣುತ್ತಿದೆ.
ಅಜನೀಶ್ ಲೋಕನಾಥ್ ಸಂಗೀತ ನೀಡಿರುವ, ವಿಜಯಪ್ರಕಾಶ್, ಅನನ್ಯ ಭಟ್ ಹಾಡಿರುವ ‘ಸಿಂಗಾರ ಸಿರಿಯೆ’ ಹಾಡು ಮೆಚ್ಚುಗೆ ವ್ಯಕ್ತವಾಗಿತ್ತು.
Exit mobile version