ಬೆಂಗಳೂರು : ಕಾಂತಾರ ಸಿನಿಮಾ (Kantara Movie) ಇನ್ನೂ ಹಲವೆಡೆ ಹೌಸ್ಫುಲ್ ಪ್ರದರ್ಶನಗಳು ಕಾಣುತ್ತಿವೆ. ಹದಿನಾರು ಕೋಟಿ ಬಜೆಟ್ನಲ್ಲಿ ತಯಾರಾದ ಈ ಚಿತ್ರ ಇದೀಗ 400 ಕೋಟಿ ರೂ. ಕ್ಲಬ್ ಸೇರುವತ್ತ ದಾಪುಗಾಲು ಇಟ್ಟಿದೆ. ಈ ಹಿಂದೆಯಷ್ಟೇ ಕಾಂತಾರ ತಂಡ ಶಿವುನ ಪಾತ್ರಕ್ಕೆ ಪುನೀತ್ ರಾಜಕುಮಾರ್ ಅವರನ್ನು ನಟಿಸಲು ಕೇಳಲಾಗಿತ್ತು ಎಂದು ಹೇಳಿಕೊಂಡಿತ್ತು. ಆದರೆ ಅಪ್ಪು ಅವರು ಚಿತ್ರದಲ್ಲಿ ನಟಿಸಿಲ್ಲ.
ಒಂದು ವೇಳೆ ಅಪ್ಪು ನಟಿಸಿದ್ದರೆ ಹೇಗಿರುತ್ತಿತ್ತು ಎಂಬ ಪರಿಕಲ್ಪನೆಯಲ್ಲಿ ಪುನೀತ್ ಪೋಸ್ಟರ್ ಒಂದನ್ನು ಕಲಾವಿದರೊಬ್ಬರು ರಚಿಸಿದ್ದಾರೆ. ಇದೀಗ ಪುನೀತ್ ಶಿವನಾಗಿ ಕಾಣಿಸಿಕೊಂಡಿದ್ದು, ಅವರ ಪೋಸ್ಟರ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಇದನ್ನೂ ಓದಿ | Kantara Movie | ಕಾಂತಾರ ಸಿನಿಮಾ ನನ್ನದೇ: ರಾಕಿಂಗ್ ಸ್ಟಾರ್ ಯಶ್!
ಕುಶಾಲ್ ಹಿರೇಮಠ್ ಎಂಬವರು ನಟ ಪುನೀತ್ ರಾಜ್ಕುಮಾರ್ ಅವರ ಸಾಮಾನ್ಯ ಫೋಟೊವೊಂದನ್ನು ಎಡಿಟ್ ಮಾಡಿದ್ದು ಅದಕ್ಕೆ ದೈವನರ್ತಕರ ಟಚ್ ನೀಡಿದ್ದಾರೆ. ಈ ಪೋಸ್ಟರ್ಗೆ ಅಪ್ಪು ಅಭಿಮಾನಿಗಳು ಕಮೆಂಟ್ ಮಾಡಿ, ಅಪ್ಪು ಅವರು ನಟಿಸಬೇಕಿತ್ತು ಎಂದು ವ್ಯಕ್ತಪಡಿಸುತ್ತಿದ್ದಾರೆ. ಕುಶಾಲ್ ಅವರು ʻಕಾಂತಾರ’ ಚಿತ್ರದ ಹೀರೊ ಶಿವನ ಪಾತ್ರವನ್ನು ಪುನೀತ್ ನಿರ್ವಹಿಸಿದ್ದರೆ ಅವರ ಗೆಟಪ್ ಹೇಗಿರುತ್ತಿತ್ತು ಎಂದು ಈ ರೀತಿಯಾಗಿ ಕಲ್ಪಿಸಿಕೊಂಡು ಡಿಸೈನ್ ಮಾಡಿದ್ದಾರೆ. ಈ ಕಲೆಗೆ ನೋಡುಗರು ಮೆಚ್ಚುಗೆ ಸೂಚಿಸಿದ್ದಾರೆ.
ಕಾಂತಾರ ಚಿತ್ರ ಐವತ್ತು ದಿನಗಳ ಸನಿಹದಲ್ಲಿದ್ದರೂ ಇನ್ನೂ ಹಲವೆಡೆ ಹೌಸ್ಫುಲ್ ಪ್ರದರ್ಶನಗಳನ್ನು ಕಾಣುತ್ತಿದೆ. ದಕ್ಷಿಣ ಭಾರತದ ನಟರು ಟ್ವೀಟ್ ಮೂಲಕ ಕಾಂತಾರ ಸಿನಿಮಾವನ್ನು ಹೊಗಳಿದ್ದರು. ಕರ್ನಾಟಕದಲ್ಲಿ ಕಾಂತಾರ ಸಿನಿಮಾದ 1 ಕೋಟಿ ಟಿಕೆಟ್ ಮಾರಾಟವಾಗಿದೆ. ಈ ಮೂಲಕ ಅತಿ ಹೆಚ್ಚು ಟಿಕೆಟ್ ಮಾರಾಟವಾದ ಸಿನಿಮಾ ಕಾಂತಾರ ಎನ್ನುವ ಹೆಗ್ಗಳಿಕೆ ಗಳಿಸಿದೆ.
ಇದನ್ನೂ ಓದಿ | Kantara Movie | ತುಳುವಿನಲ್ಲಿ ಬರ್ತಾ ಇದೆ ಕಾಂತಾರ: ರಿಷಬ್ ಹೇಳಿದ್ದೇನು?