ಬೆಂಗಳೂರು: ಕನ್ನಡ ಭಾಷೆಯಲ್ಲಿ ಸೆಪ್ಟೆಂಬರ್ 30ಕ್ಕೆ ತೆರೆಕಂಡ ‘ಕಾಂತಾರ’ ಸಿನಿಮಾ (Kantara Movie) ಜಗತ್ತಿನಾದ್ಯಂತ ಇತಿಹಾಸ ಬರೆದು, ₹100 ಕೋಟಿ ಕ್ಲಬ್ ಸೇರುವತ್ತ ದಾಪುಗಾಲು ಇಡುತ್ತಿದೆ. ಈ ಹೊತ್ತಲ್ಲೇ ಹಿಂದಿ, ತಮಿಳು, ತೆಲುಗು ಸೇರಿದಂತೆ ಇತರ ಭಾಷೆಗಳಿಗೆ ಡಬ್ ಆಗಿ ರಿಲೀಸ್ ಆಗಿರುವ ಕನ್ನಡಿಗರ ಸಿನಿಮಾ ನಿರೀಕ್ಷೆಗೂ ಮೀರಿ ದೊಡ್ಡ ಮಟ್ಟದಲ್ಲಿ ಯಶಸ್ಸು ಸಾಧಿಸಿದೆ. ಹಿಂದಿ ಸಿನಿಮಾಗಳ ಪ್ರಾಬಲ್ಯವಿರುವ ಪ್ರದೇಶದಲ್ಲಿ 2,500ಕ್ಕೂ ಹೆಚ್ಚು ಸ್ಕ್ರೀನ್ಗಳಲ್ಲಿ ‘ಕಾಂತಾರ’ ರಿಲೀಸ್ ಆಗಿದೆ. ಹಾಗೇ ತೆಲುಗು ರಾಜ್ಯಗಳಲ್ಲೂ ಕನ್ನಡ ನಾಡಿನ ಸಿನಿಮಾ ‘ಕಾಂತಾರ’ ಅಬ್ಬರಿಸುತ್ತಿದೆ.
ಹಿಂದೆ ಒಂದು ಕಾಲವಿತ್ತು ಹಿಂದಿ ಅಥವಾ ಬಾಲಿವುಡ್ ಸಿನಿಮಾಗಳಿಗೆ ಕನ್ನಡ ಚಿತ್ರಗಳು ಹೆದರುತ್ತಿದ್ದವು. ಕನ್ನಡ ಸಿನಿಮಾ ನಿರ್ಮಿಸಿದ ನಿರ್ಮಾಪಕರು ಬಾಲಿವುಡ್ ಸಿನಿಮಾಗಳ ಎದುರು ಕನ್ನಡ ಚಿತ್ರಗಳನ್ನು ರಿಲೀಸ್ ಮಾಡಲು ಹೆದರುತ್ತಿದ್ದರು. ಆದರೆ ಈಗ ಸೀನ್ ಚೇಂಜ್ ಆಗಿದ್ದು, ಕನ್ನಡ ಸಿನಿಮಾಗಳನ್ನು ಕಂಡು ಬಾಲಿವುಡ್ ಸ್ಟಾರ್ಗಳು ಬೆಚ್ಚಿಬೀಳುವ ಸಮಯ ಬಂದುಬಿಟ್ಟಿದೆ. ಹಾಕಿದ ಹಣ ವಾಪಸ್ ಬಂದರೆ ಸಾಕು ಎಂಬ ಸ್ಥಿತಿ ಬಾಲಿವುಡ್ ಅಂಗಳದಲ್ಲಿ ನಿರ್ಮಾಣವಾಗಿಬಿಟ್ಟಿದೆ.ಕಾಂತಾರ ಚಿತ್ರದ ಎದುರು ಹಿಂದಿ ಸಿನಿಮಾಗಳಿಗೆ ಜಾಗ ಸಿಗುತ್ತಿಲ್ಲ, ಇದು ಬಾಲಿವುಡ್ ಸ್ಟಾರ್ಗಳ ಭಯ ಹೆಚ್ಚುವಂತೆ ಮಾಡಿದೆ.
ಸ್ಯಾಂಡಲ್ವುಡ್ ಹವಾ!
ಈಗಾಗಲೇ ಜೇಮ್ಸ್, ಕೆಜಿಎಫ್-2, 777 ಚಾರ್ಲಿ, ವಿಕ್ರಾಂತ್ ರೋಣ ಜಗತ್ತಿನಾದ್ಯಂತ ಖದರ್ ತೋರಿಸಿವೆ. ಇದೀಗ ‘ಕಾಂತಾರ’ ಸರದಿ ಬಂದಿದ್ದು, ಬಾಲಿವುಡ್ ಸಿನಿಮಾಗಳಿಗೆ ಸ್ಕ್ರೀನ್ಸ್ ಸಿಗುತ್ತಿಲ್ಲ. ಕನ್ನಡ ಸಿನಿಮಾ ‘ಕಾಂತಾರ’ ಬಿಡುಗಡೆಯಾಗುತ್ತಿರುವ ದಿನವೇ ಬಾಲಿವುಡ್ನಲ್ಲಿ 9 ಸಿನಿಮಾಗಳು ರಿಲೀಸ್ ಆಗಿವೆ. ಆದರೆ ಬಾಲಿವುಡ್ ಸಿನಿಮಾಗಳಿಗೆ ಥಿಯೇಟರ್ ಸಿಗುವುದು ಸಿಕ್ಕಾಪಟ್ಟೆ ಕಷ್ಟವಾಗಿತ್ತು. ಸಿಕ್ಕ ಅಷ್ಟೋ, ಇಷ್ಟೋ ಥಿಯೇಟರ್ಗಳಲ್ಲಿ 9 ಹಿಂದಿ ಸಿನಿಮಾಗಳು ರಿಲೀಸ್ ಆಗಿವೆ. ಆದರೆ ಕನ್ನಡಿಗರ ಕಾಂತಾರ ಸಿನಿಮಾ 2,500 ಸ್ಕ್ರೀನ್ಗಳಲ್ಲಿ ಅಬ್ಬರಿಸುತ್ತಿದೆ.
ಒಟ್ಟಾರೆ ಹೇಳುವುದಾದರೆ ಸಮಯ ಬದಲಾಗಿದ್ದು, ಇಷ್ಟುದಿನ ಬೇರೆ ಸಿನಿಮಾಗಳು ನಮ್ಮ ಜಾಗದಲ್ಲಿ ಹವಾ ಎಬ್ಬಿಸಿದ್ದವು. ಆದರೆ ಈಗ ಕನ್ನಡ ಸಿನಿಮಾಗಳು ಪರಭಾಷೆಯ ಸಿನಿಮಾಗಳಿಗೆ ನಡುಕ ತರಿಸುತ್ತಿವೆ. ಹಾಗೇ ಜಗತ್ತಿನಾದ್ಯಂತ ಸ್ಯಾಂಡಲ್ವುಡ್ ಹವಾ ಬಲು ಜೋರಾಗಿದೆ. ಜೇಮ್ಸ್, ಕೆಜಿಎಫ್-2, 777 ಚಾರ್ಲಿ, ವಿಕ್ರಾಂತ್ ರೋಣ ರೀತಿಯೇ ‘ಕಾಂತಾರ’ ಜಾಗತಿಕ ಸಿನಿಮಾ ಮಾರುಕಟ್ಟೆಯನ್ನು ಸೆಳೆಯುತ್ತಿದೆ.
ಇದನ್ನೂ ಓದಿ: Kantara Hindi | ಕನ್ನಡಿಗರ ಕಾಂತಾರ ಕಂಡು ಬೆಚ್ಚಿಬಿದ್ದ ಬಾಲಿವುಡ್ ನಟರು!