Site icon Vistara News

Kantara Movie | ಚೇತನ್‌ ಟೀಕೆಗೆ ಉತ್ತರ ಕೊಟ್ಟ ರಿಷಬ್‌ ಶೆಟ್ಟಿ: ಏನಂದರು ಗೊತ್ತೆ?

Kantara Movie

ಬೆಂಗಳೂರು : ಕಾಂತಾರ ಸಿನಿಮಾ (Kantara Movie) ಹಿಂದೂ ಧರ್ಮದ ಭಾಗವಲ್ಲ ಎಂದಿರುವುದು ಚರ್ಚೆಗೆ ಕಾರಣವಾಗಿದೆ. ತೆಲುಗು ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ರಿಷಬ್ ಶೆಟ್ಟಿ ಅವರಿಗೆ, ‘ನೀವು ಭೂತಾರಾಧನೆಯನ್ನು ತಿರುಚಿ ಪ್ರಸ್ತುತ ಪಡಿಸಿದ್ದೀರೆಂದು ಕರ್ನಾಟಕದ ನಟರೊಬ್ಬರು ಹೇಳಿದ್ದಾರೆ ಅದು ನಿಜವೇ?’ ಎಂದು ಸಂದರ್ಶಕರೊಬ್ಬರು ಪ್ರಶ್ನೆ ಕೇಳಿದ್ದಾರೆ.

‘ಯಾರವರು, ಅವರು ಚೆನ್ನಾಗಿದ್ದಾರಾ? ಅವರೇನು ಮಾಡುತ್ತಿದ್ದಾರೆ” ಎಂದು ವ್ಯಂಗ್ಯವಾಗಿ ನಗುತ್ತಲೇ ಪ್ರಶ್ನಿಸಿದ ರಿಷಬ್ ಶೆಟ್ಟಿ, ‘ಈ ವಿಷಯದಲ್ಲಿ ನನ್ನದು ನೋ ಕಮೆಂಟ್ಸ್’ ಎಂದಿದ್ದಾರೆ. ಹಾಗೇ ಇಂತಹಾ ವಿಷಯದಲ್ಲಿ ನಾನು ಉತ್ತರಿಸುವ ಅವಶ್ಯಕತೆ ನನಗಿಲ್ಲ. ಆ ಸಂಸ್ಕೃತಿಯನ್ನು ಆರಾಧಿಸುವವರೆ ಇದನ್ನು ಒಪ್ಪಿದ್ದಾರೆ. ನಾನು ಈ ಸಿನಿಮಾ ಮಾಡಬೇಕಾದರೆ ಈ ಬಗ್ಗೆಯೂ ಜಾಗೃತ ವಹಿಸಿ , ಆ ಸಂಸ್ಕೃತಿಯನ್ನು ಉಳಿಸಿ , ಬೆಳೆಸುತ್ತಿರುವವರೆ ನನ್ನ ಜತೆ ಇದ್ದರು. ನಾನೂ ಅಲ್ಲಿಯವನೆ. ಅದನ್ನು ನೋಡುತ್ತಾ ಬೆಳೆದವನು ʼʼಎಂದಿದ್ದಾರೆ ರಿಷಬ್‌.

ಇದನ್ನೂ ಓದಿ | Kantara Movie | ʻದೈವಾರಾಧನೆ ನಮ್ಮ ನಂಬಿಕೆʼ ಚೇತನ್‌ ಕಿವಿ ಹಿಂಡಿದ ಉಪ್ಪಿ

ಅದೇ ರೀತಿ ʻʻಸಿನಿಮಾ ಮಾಡುವ ಯೋಚನೆ ಬಂದಾಗಲೇ ಆ ದೈವ ಆರಾಧನೆ ಮಾಡುವವರ ಭಾವನೆಗಳಿಗೆ ದಕ್ಕೆ ಆಗಬಾರದೆಂಬ ಎಚ್ಚರಿಕೆ ಇತ್ತು. ದೈವಾರಾಧಕರನ್ನು ಜತೆಯಲ್ಲಿಯೇ ಇಟ್ಟುಕೊಂಡು ಪ್ರತಿಯೊಂದು ದೃಶ್ಯ ತೆಗೆಯುವಾಗಲೂ ಇದು ಸರಿಯಾ ಎಂದು ಕೇಳಿ ಚಿತ್ರೀಕರಣ ಮಾಡಿದ್ದೇನೆʼʼ ಎಂದು ಸ್ಪಷ್ಟನೆ ನೀಡಿದ್ದಾರೆ.

ಸಿನಿಮಾ ಮಾಡಿದ್ದೇನೆ. ಈ ಸಿನಿಮಾಕ್ಕಾಗಿ ರಕ್ತ ಸುರಿಸಿದ್ದೇನೆ. ಜನಕ್ಕೆ ಅದು ಇಷ್ಟವಾದರೆ ಅವರೇ ಸ್ವೀಕರಿಸುತ್ತಾರೆ. ಅಂತಿಮವಾಗಿ ಮಾತನಾಡಬೇಕಿರುವುದು ಸಿನಿಮಾ ವೀಕ್ಷಿಸಿದ ಜನ. ಭೂತಕೋಲಕ್ಕೆ ಅದರದ್ದೇ ಆದ ಭವ್ಯ ಇತಿಹಾಸವಿದೆ. ಗೊತ್ತಿಲ್ಲದೆ ಅದರ ಬಗ್ಗೆ ಮಾತನಾಡುವುದು ತಪ್ಪಾಗುತ್ತದೆ” ಎಂದಿದ್ದಾರೆ ರಿಷಬ್.

ʻʻಕಾಂತಾರ ಸಿನಿಮಾ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿರುವುದು ಖುಷಿ ಇದೆ. ಆದರೆ ಭೂತಕೋಲ ಹಿಂದೂ ಸಂಸ್ಕೃತಿ ಎಂದು ರಿಷಬ್‌ ಶೆಟ್ಟಿ ಹೇಳಿದ್ದಾರೆ. ಇದು ನಿಜವಲ್ಲ. ನಮ್ಮ ಪಂಬದ, ನಲಿಕೆ, ಪರವರ ಬಹುಜನ ಸಂಪ್ರದಾಯಗಳು, ವೈದಿಕ-ಬ್ರಾಹ್ಮಣೀಯ ಹಿಂದೂ ಧರ್ಮಕ್ಕಿಂತ ಹಿಂದಿನವು. ಮೂಲನಿವಾಸಿ ಸಂಸ್ಕೃತಿಗಳನ್ನು ಸಿನಿಮಾದಲ್ಲಿ ಸತ್ಯದೊಂದಿಗೆ ಪ್ರದರ್ಶಿಸಬೇಕು ಎಂದು ನಾನು ಕೋರುತ್ತೇನೆʼʼ ಎಂದು ಚೇತನ್‌ ಟ್ವೀಟ್‌ ಮಾಡಿದ್ದರು.

ಇದನ್ನೂ ಓದಿ | Kantara Movie | ರಿಷಬ್‌ ಶೆಟ್ಟಿಯ ನಿಜವಾದ ಹೆಸರಿಗೆ ನೆಟ್ಟಿಗರಿಂದ ಫುಲ್ ಟ್ರೋಲ್‌!

Exit mobile version