ಬೆಂಗಳೂರು: ಕನ್ನಡದ ಪ್ರತಿಭಾವಂತ ನಟ-ನಿರ್ದೇಶಕ ರಿಷಬ್ ಶೆಟ್ಟಿ ಕಾಂತಾರ ಸಿನಿಮಾ (Kantara Movie) ಮೂಲಕ ಜಾಗತಿಕ ಮನ್ನಣೆಯನ್ನು ಗಳಿಸಿದರು. 2022ರಲ್ಲಿ ತೆರೆ ಕಂಡ ಈ ಚಿತ್ರ 400 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡಿದೆ. ಕಾಂತಾರ ಥಿಯೇಟರ್‌ಗಳಲ್ಲಿ 100 ದಿನಗಳನ್ನು ಪೂರೈಸುತ್ತಿದ್ದಂತೆ, ನಿರ್ದೇಶಕ ರಿಷಬ್ ಶೆಟ್ಟಿ ಇತ್ತೀಚೆಗೆ ಬೆಂಗಳೂರಿನಲ್ಲಿ ಸಕ್ಸೆಸ್ ಇವೆಂಟ್ ಹಮ್ಮಿಕೊಂಡಿದ್ದರು. ಕಾಂತಾರ-1 ಸಿಕ್ವೆಲ್ ಆಗಿದ್ದರೆ, ಕಾಂತಾರ-2 ಪ್ರಿಕ್ವೆಲ್ (Prequel film) ಆಗಿ ಮೂಡಿಬರಲಿದೆ. ಕಾಂತಾರ-1ರ ಸ್ಕ್ರಿಪ್ಟಿಂಗ್ ಕೆಲಸ ಈಗಾಗಲೇ ಶುರುವಾಗಿದೆ ಎಂದು ರಿಷಬ್ ಖಚಿತಪಡಿಸಿದ್ದಾರೆ.
ಪ್ರಿಕ್ವೆಲ್ ಆಗಿ ಬರಲಿದೆ ಕಾಂತಾರ 2:
ಕಾಂತಾರ-1 ಸಿಕ್ವೆಲ್ ಆಗಿದ್ದರೆ, ಕಾಂತಾರ-2 ಪ್ರಿಕ್ವೆಲ್ (Prequel film) ಆಗಿ ಮೂಡಿಬರಲಿದೆ. ಕಾಂತಾರ-2 ಪೂರ್ವಭಾವಿ ಕತೆಯಾಗಿದ್ದು, ಇದು ಗ್ರಾಮಸ್ಥರು, ದೇವತೆ ಮತ್ತು ತೊಂದರೆಗೊಳಗಾದ ರಾಜನ ನಡುವಿನ ಸಂಬಂಧವನ್ನು ಅನ್ವೇಷಿಸುತ್ತದೆ. ರಾಜನು ಗ್ರಾಮಸ್ಥರನ್ನು ಮತ್ತು ತನ್ನ ಸುತ್ತಲಿನ ಭೂಮಿಯನ್ನು ರಕ್ಷಿಸಲು ದೇವತೆಯೊಂದಿಗೆ ಒಪ್ಪಂದ ಮಾಡಿಕೊಂಡಿರುತ್ತಾನೆ. ʻಮನುಷ್ಯ ಮತ್ತು ಪ್ರಕೃತಿಯ ಕದನʼ ಚಿತ್ರದ ತಿರುಳು ಇದಾಗಿದೆ. ಕಾಂತಾರ-2, 2024ರಲ್ಲಿ ಥಿಯೇಟರ್‌ಗೆ ಬರಲಿದೆ ಎಂದು ರಿಷಬ್ ಖಚಿತಪಡಿಸಿದ್ದಾರೆ.
“ಕಾಂತಾರ ಬಗ್ಗೆ ಅಪಾರ ಪ್ರೀತಿ ಮತ್ತು ಬೆಂಬಲವನ್ನು ತೋರಿದ ಪ್ರೇಕ್ಷಕರಿಗೆ ನಾವು ಆಭಾರಿ. ಹಾಗೂ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಸರ್ವಶಕ್ತ ದೈವದ ಆಶೀರ್ವಾದದಿಂದ, ಚಿತ್ರವು ಯಶಸ್ವಿಯಾಗಿ 100 ದಿನಗಳನ್ನು ಪೂರೈಸಿದೆ. ಚಿತ್ರದ ಪ್ರಿಕ್ವೆಲ್ ಅನ್ನು ಘೋಷಿಸಲು ಈ ಅವಕಾಶವನ್ನು ಬಳಸಿಕೊಳ್ಳಲು ಇಷ್ಟಪಡುತ್ತೇನೆ” ಎಂದು ರಿಷಬ್ ಶೆಟ್ಟಿ ಹೇಳಿದರು. “ನೀವು ನೋಡಿರುವುದು ಭಾಗ 2, ಭಾಗ 1 ಮುಂದಿನ ವರ್ಷ ಬರಲಿದೆ. ನಾನು ಕಾಂತಾರ ಚಿತ್ರದ ಶೂಟಿಂಗ್‌ನಲ್ಲಿದ್ದಾಗ ನನ್ನ ಮನಸ್ಸಿಗೆ ಈ ಆಲೋಚನೆ ಬಂದಿತು. ಏಕೆಂದರೆ ಕಾಂತಾರ ಇತಿಹಾಸವು ಅದರ ಆಳವನ್ನು ಹೊಂದಿದೆ. ಪ್ರಸ್ತುತ, ನಾವು ಮಧ್ಯದಲ್ಲಿದ್ದೇವೆ. ಹೆಚ್ಚಿನ ವಿವರಗಳನ್ನು ಅಗೆಯುವುದು. ಸಂಶೋಧನೆಯು ಇನ್ನೂ ನಡೆಯುತ್ತಿರುವುದರಿಂದ, ಚಿತ್ರದ ಬಗ್ಗೆ ವಿವರಗಳನ್ನು ಬಹಳ ಬೇಗನೆ ಬಹಿರಂಗಪಡಿಸುತ್ತೇನೆʼʼ ಎಂದರು.
ಇದನ್ನೂ ಓದಿ: Kantara Movie: ಹಿಂದಿಯಲ್ಲಿ ನೂರು ದಿನಗಳನ್ನು ಪೂರೈಸಿದ ʻಕಾಂತಾರʼ
ಇದನ್ನೂ ಓದಿ: Kantara Movie : ಸಮಸ್ಯೆ ಹೇಳಿಕೊಂಡು ಬಂದ ವಿವಾಹಿತೆಯನ್ನು ತಾನೇ ವರಿಸುವುದಾಗಿ ಹೇಳಿದ ದೈವ ಪಾತ್ರಿ!
ಚಿತ್ರದಲ್ಲಿ ನಾಯಕ ಶಿವ ಮತ್ತು ಅವರ ತಂದೆಯಾಗಿ ರಿಷಬ್ ಶೆಟ್ಟಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಪ್ರಕಾಶ್ ತೂಮಿನಾಡ್, ನವೀನ್ ಡಿ ಪಡೀಲ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಾಂತಾರ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿದ್ದಾರೆ. ಕಾಂತಾರ ಕನ್ನಡದಲ್ಲಿ ಬಿಡುಗಡೆಯಾಗಿ ಯಶಸ್ಸು ಕಂಡಾಗ ಹಿಂದಿ, ತಮಿಳು, ಮಲಯಾಳಂ ಮತ್ತು ತೆಲುಗು ಭಾಷೆಗಳಲ್ಲಿ ತೆರೆಕಂಡಿತು