Site icon Vistara News

Kantara Movie | ʻಚಾನ್ಸೇ ಇಲ್ಲ, ನೋ ವೇʼ ಎಂದು ರೆಬೆಲ್‌ ಆಗಿ ಟ್ವೀಟ್‌ ಮಾಡಿದ ರಿಷಬ್‌ ಶೆಟ್ಟಿ: ವೈರಲ್‌ ಆಯ್ತು ಪೋಸ್ಟ್‌!

Kantara Movie

ಬೆಂಗಳೂರು: ಕಾಂತಾರ ಸಿನಿಮಾ (Kantara Movie) ಸಕ್ಸೆಸ್‌ ಯಾತ್ರೆಯನ್ನು ಮುಂದುವರಿಸುತ್ತಿದೆ. ಈಗಾಗಲೇ ಬಾಲಿವುಡ್‌, ಕಾಲಿವುಡ್‌, ಟಾಲಿವುಡ್‌ನಲ್ಲಿ ಹೆಸರು ಪಡೆದುಕೊಂಡು ಮಾಲಿವುಡ್‌ಗೆ ಎಂಟ್ರಿ ಕೊಡುತ್ತಿದೆ. ಇದೇ ತಿಂಗಳ 20ಕ್ಕೆ ಸಿನಿಮಾ ಕೇರಳದಲ್ಲಿ ರಿಲೀಸ್‌ ಆಗುತ್ತಿದೆ. ‘ರಿಷಬ್‌ ಶೆಟ್ಟಿ ಕೂಡ ಕನ್ನಡ ಚಿತ್ರರಂಗವನ್ನು ತೊರೆಯುತ್ತಿದ್ದಾರೆ’ ಎಂದು ನೆಟ್ಟಿಗರು ಟ್ವೀಟ್‌ ಮೂಲಕ ವ್ಯಕ್ತ ಪಡಿಸಿದ್ದಾರೆ. ಈ ಕುರಿತಂತೆ ರಿಷಬ್ ಶೆಟ್ಟಿ ಸ್ಪಷ್ಟನೆಯನ್ನು ನೀಡಿದ್ದು, ರೆಬೆಲ್‌ ಆಗಿ ಉತ್ತರ ನೀಡಿದ್ದಾರೆ.

ಹೈದರಾಬಾದ್‌ನಲ್ಲಿ ‘ಕಾಂತಾರ’ ತೆಲುಗು ಸಕ್ಸೆಲ್ ಮೀಟ್ ನಡೆದಿದೆ. ನಿರ್ಮಾಪಕ ಅಲ್ಲು ಅರವಿಂದ್ ಜತೆಗೆ ರಿಷಬ್ ಶೆಟ್ಟಿ ಹಾಗೂ ಸಪ್ತಮಿ ಗೌಡ ಭಾಗವಹಿಸಿ ತೆಲುಗು ಪ್ರೇಕ್ಷಕರು ನೀಡಿದ ಪ್ರೀತಿಗೆ ಧನ್ಯವಾದ ತಿಳಿಸಿದರು. ನಿರ್ಮಾಪಕ ಅಲ್ಲು ಅರವಿಂದ್ ಅವರ ರಿಷಬ್ ಶೆಟ್ಟಿ ಜತೆ ತಮ್ಮ ಗೀತಾ ಆರ್ಟ್ಸ್ ಬ್ಯಾನರ್‌ನಲ್ಲಿ ಸಿನಿಮಾ ಮಾಡುವ ಬಗ್ಗೆ ಮಾತನಾಡಿದ್ದೇನೆ, ಅವರು ಕೂಡ ಒಪ್ಪಿಕೊಂಡಿದ್ದಾರೆ ಎಂದು ಘೋಷಿಸಿದ್ದಾರೆ. ‘ಕಾಂತಾರ’ ಸೀಕ್ವೆಲ್ ಬರುತ್ತದೆ ಎಂದು ಕೆಲವರು ಹೇಳುತ್ತಿದ್ದಾರೆ. ಈ ಬಗ್ಗೆ ಕೇಳಿದ ಪ್ರಶ್ನೆಗೆ ರಿಷಬ್ ಶೆಟ್ಟಿ ಮಾತನಾಡಿ ʻʻಸದ್ಯಕ್ಕೆ ಸೀಕ್ವೆಲ್ ಬಗ್ಗೆ ಯಾವುದೇ ಆಲೋಚನೆ ಇಲ್ಲ. ನಾನೊಂದು ಸಣ್ಣ ಬ್ರೇಕ್ ತೆಗೆದುಕೊಳ್ಳುತ್ತೇನೆ. ಮುಂದೆ ನೋಡಬೇಕು ಯಾವ ಸಿನಿಮಾ ಮಾಡುವುದುʼʼ‌ ಎಂದು ಹೇಳಿದ್ದಾರೆ.

ಆಂಧ್ರ ಬಾಕ್ಸ್‌ ಆಫೀಸ್‌ ಪೇಜ್‌ನಲ್ಲಿ ಈ ಕುರಿತು ಪೊಸ್ಟ್‌ ಹಂಚಿಕೊಂಡಿತ್ತು. ”ಗೀತಾ ಆರ್ಟ್ಸ್‌ ಮೂಲಕ ಅಲ್ಲು ಅರವಿಂದ್‌ ಅವರು ರಿಷಬ್‌ ಶೆಟ್ಟಿ ಜತೆ ಚಿತ್ರವನ್ನು ಮಾಡುವುದಾಗಿ ಘೋಷಿಸಿದ್ದರು. ರಿಷಬ್‌ ಶೆಟ್ಟಿ ಸೀಕ್ವೆಲ್‌ ಬಗ್ಗೆ ಇನ್ನೂ ಏನೂ ಯೋಚನೆ ಮಾಡಿಲ್ಲ. ಹಾಗೆಯೇ ಸಣ್ಣ ಬ್ರೇಕ್‌ ತೆಗೆದುಕೊಳ್ಳಲಿದ್ದೇನೆ ಎಂಬುದಾಗಿ ಹೇಳಿದ್ದಾರೆʼʼ ಎಂದು ಬರೆದುಕೊಂಡಿದೆ.

ಇದನ್ನೂ ಓದಿ | Kantara Movie | ಕಾಂತಾರ ಕಲೆಕ್ಷನ್​ ನೋಡಿ ದೊಡ್ಡ ಬಜೆಟ್​​​ ಸಿನಿಮಾ ನಿರ್ಮಾಪಕರಿಗೆ ಹಾರ್ಟ್‌ ಅಟ್ಯಾಕ್‌: ಆರ್​ಜಿವಿ ಟ್ವೀಟ್​

ಈ ಟ್ವೀಟ್‌ಗೆ ಹಲವಾರು ಚರ್ಚೆಗಳು ಆಗುತ್ತಿದ್ದು, ಒಬ್ಬರು ಟ್ವೀಟ್‌ಗೆ ಕಮೆಂಟ್‌ ಮಾಡಿ ʻʻರಿಷಬ್‌ ಶೆಟ್ಟಿ ಕನ್ನಡ ಚಿತ್ರರಂಗವನ್ನು ತೊರೆಯುತ್ತಿದ್ದಾರೆʼʼಎಂಬರ್ಥದಲ್ಲಿ ಪ್ರತಿಕ್ರಿಯಿಸಿದ್ದಾರೆ. ಇದಕ್ಕೆ ರಿಷಬ್‌ ಶೆಟ್ಟಿ ನಟ ಅಂಬರೀಶ್‌ ಅವರ ಡೈಲಾಗ್‌ನಲ್ಲಿ ʻಚಾನ್ಸೇ ಇಲ್ಲ, ನೋ ವೇʼ ಎಂದು ಆಗಿ ಉತ್ತರ ನೀಡಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗದ ಬಗ್ಗೆ ಅವರಿಗಿರುವ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.

ಕಾಂತಾರ ಸಿನಿಮಾ ವಿಶ್ವಾದ್ಯಂತ 119 ಕೋಟಿ ಗಳಿಸುವ ಮೂಲಕ 100 ಕೋಟಿ ಕ್ಲಬ್‌ ಸೇರಿದ 6ನೇ ಕನ್ನಡ ಚಿತ್ರ ಆಗಿದೆ. ಕಾಂತಾರ ಟಾಲಿವುಡ್‌ನಲ್ಲಿ ಅಬ್ಬರಿಸುತ್ತಿದೆ. ಮೆಗಾಸ್ಟಾರ್ ಚಿರಂಜೀವಿ ಅಭಿನಯದ ʻಗಾಡ್‌ ಫಾದರ್‌ʼ ಸಿನಿಮಾಗೂ ಕೂಡ ಕಾಂತಾರದ ಬಿಸಿ ತಾಗುತ್ತಿದೆ. 

ಇದನ್ನೂ ಓದಿ |Kantara Movie | ಕಂಗನಾಗೆ ಕೆರಳಿದ ಕುತೂಹಲ; ‘ಕಾಂತಾರ ಯಾವಾಗ ನೋಡ್ತೀನೋ’ ಎಂದ ನಟಿ !

Exit mobile version