Site icon Vistara News

Kantara Movie | ಜ್ಯೂನಿಯರ್‌ ಎನ್‌ಟಿಆರ್‌ ಊರು ನನ್ನ ಹುಟ್ಟೂರು: ಕಾಂತಾರ ಜರ್ನಿ ಹಂಚಿಕೊಂಡ ರಿಷಬ್‌!

Kantara Movie

ಬೆಂಗಳೂರು : ಕಾಂತಾರ ಸಿನಿಮಾ (Kantara Movie) ಎರಡು ವಾರಗಳ ನಂತರವೂ ಭರ್ಜರಿ ಕಲೆಕ್ಷನ್‌ ಮಾಡುತ್ತಿದೆ. ಈ ಬೆನ್ನಲ್ಲೇ ಸಿನಿಮಾ ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಡಬ್‌ ಆಗುತ್ತಿದೆ. ಹಿಂದಿ ಬಿಡುಗಡೆಯ ದಿನಾಂಕ ಅನೌನ್ಸ್‌ ಆಗಿರುವ ಬೆನ್ನಲ್ಲೇ ತೆಲುಗಿನ ಪ್ರಚಾರ ಆರಂಭಿಸಿದ್ದಾರೆ ರಿಷಬ್‌. ತೆಲುಗಿನ ಸಂದರ್ಶನವೊಂದರಲ್ಲಿ ಜ್ಯೂನಿಯರ್‌ ಎನ್‌ಟಿಆರ್‌ ಹಾಗೂ ಅವರ ತಾಯಿಯ ಹುಟ್ಟೂರಿನ ಕುರಿತು ಹೇಳಿಕೊಂಡಿದ್ದಾರೆ.

ನಿರೂಪಕಿ ತೆಲುಗು ಸ್ಟಾರ್‌ ಕುರಿತು ಕೇಳಿದಾಗ ರಿಷಬ್‌ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ʻʻಎನ್‌ಟಿಆರ್‌, ಬಾಲಯ್ಯ ಬಾಬು ಸಿನಿಮಾಗಳನ್ನು ನೋಡುತ್ತಿರುತ್ತೇನೆ. ಎನ್‌ಟಿಆರ್‌ ನನ್ನ ಫೇವರಿಟ್ ನಟ. ಏಕೆಂದರೆ ಅವರ ಅಮ್ಮನ ಹುಟ್ಟೂರು ನನ್ನ ಕುಂದಾಪುರ. ತುಂಬ ಅದ್ಭುತ ನಟʼʼ ಎಂದು ಹೇಳಿದ್ದಾರೆ. ಎನ್‌ಟಿಆರ್‌ ಜತೆ ಕೆಲಸ ಮಾಡುತ್ತೀರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ರಿಷಬ್‌ ʻʻನಾನು ತುಂಬಾ ಪ್ಲ್ಯಾನ್‌ ಮಾಡುವುದಿಲ್ಲ. ಫ್ಲೋನಲ್ಲಿ ಹೋಗುತ್ತಿರುತ್ತೇನೆ. ಎಲ್ಲ ಹೀರೊಗಳ ಜತೆ ಕೆಲಸ ಮಾಡುವುದು ಇಷ್ಟʼʼಎಂದರು.

ಇದನ್ನೂ ಓದಿ | Kantara Movie | ಕಾಂತಾರ ಹೆಸರು ಸೂಚಿಸಿದ್ದು ಈ ನಿರ್ದೇಶಕ; ಕಾಂತಾರ ಅಂದರೆ?

ಈ ಹಿಂದೆ ಕೂಡ ಜ್ಯೂನಿಯರ್‌ ಎನ್‌ಟಿಆರ್‌ ʻʻತನ್ನ ತಾಯಿ ಕುಂದಾಪುರ ಮೂಲದವರು. ಕುಂದಾಪುರಕ್ಕೆ ಆಗಾಗ ಬರುತ್ತೇನೆ. ಕರ್ನಾಟಕ ಮತ್ತು ಕನ್ನಡ ನನ್ನ ಜೀವನದ ಬಹು ಮುಖ್ಯ ಅಂಗʼʼ ಎಂದು ಹೇಳಿಕೊಂಡಿದ್ದರು. ಸಿನಿಮಾ ಕುರಿತಾಗಿ ರಿಷಬ್‌ ʻʻಈ ಸಿನಿಮಾದಲ್ಲಿ ಸಂಗೀತಕ್ಕೆ ಮಹತ್ವವನ್ನು ನೀಡಲಾಗಿದೆ. ಕರಾವಳಿ ಕಡೆಯ ಸಂಸ್ಕೃತಿ ಬಿಂಬಿಸುವ ವಾದ್ಯಗಳನ್ನು ತಂದು, ಹಾಡಿನಲ್ಲಿ ಅಳವಡಿಸುವ ಪ್ರಯತ್ನ ಮಾಡಿದ್ದೇವೆʼʼ ಎಂದರು.

‘ಕಾಂತಾರ’ ಜಗತ್ತಿನಾದ್ಯಂತ ₹85 ಕೋಟಿ ರೂ. ಹೆಚ್ಚು ಗಳಿಸಿರಬಹುದು ಎನ್ನುತ್ತಿದ್ದಾರೆ ಬಾಕ್ಸ್ ಆಫಿಸ್ ತಜ್ಞರು. ಇದೇ ವೇಳೆ ಭಾರತದ ಬೇರೆ ಬೇರೆ ಭಾಷೆಗೂ ಡಬ್ ಆಗಿ ಸಿನಿಮಾ ರಿಲೀಸ್ ಆಗುತ್ತಿದ್ದು, ₹100 ಕೋಟಿ ರೂ. ಕ್ಲಬ್ ಸೇರಿ ಇತಿಹಾಸ ಸೃಷ್ಟಿಸುವುದು ಪಕ್ಕಾ ಎನ್ನಲಾಗುತ್ತಿದೆ.

ಇದನ್ನೂ ಓದಿ | Kantara Movie | ಕಾಂತಾರ ಸಿನಿಮಾಗೆ ನಟ ಪ್ರಭಾಸ್‌ ಮೆಚ್ಚುಗೆ; ನಟ ಹೇಳಿದ್ದೇನು?

Exit mobile version