Site icon Vistara News

Kantara Movie | ರಿಷಬ್‌ ಶೆಟ್ಟಿಯ ನಿಜವಾದ ಹೆಸರಿಗೆ ನೆಟ್ಟಿಗರಿಂದ ಫುಲ್ ಟ್ರೋಲ್‌!

Kantara Movie

ಬೆಂಗಳೂರು : ಕಾಂತಾರ ಸಿನಿಮಾ (Kantara Movie) ದೇಶವ್ಯಾಪಿ ಅಬ್ಬರಿಸುತ್ತಿದೆ. ಬಿಡುಗಡೆ ನಂತರ ವೀಕ್ಷಕರಿಂದ ಪ್ರಶಂಸೆ ಪಡೆದುಕೊಂಡ ಈ ಚಿತ್ರ ಪ್ಯಾನ್‌ ಇಂಡಿಯಾ ಚಿತ್ರವಾಗಿ ಮಾರ್ಪಟ್ಟಿದೆ. ಬಾಲಿವುಡ್‌, ಟಾಲಿವುಡ್‌, ಸ್ಯಾಂಡಲ್‌ವುಡ್‌, ಕಾಲಿವುಡ್‌ನಲ್ಲಿ ಈಗಾಗಲೇ ಚಿತ್ರ ಬಿಡುಗಡೆಗೊಂಡಿದ್ದು, ಮಾಲಿವುಡ್‌ಗೂ ಎಂಟ್ರಿ ಕೊಡುತ್ತಿದೆ. ಇದರ ಬೆನ್ನಲ್ಲೇ ರಿಷಬ್‌ ಶೆಟ್ಟಿ ಹೆಸರಿನ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ನೆಟ್ಟಿಗರು ಟ್ರೋಲ್‌ ಮಾಡಿದ್ದಾರೆ.

ಸಂದರ್ಶನವೊಂದರಲ್ಲಿ ರಿಷಬ್‌ ಶೆಟ್ಟಿ ತಂದೆ ಭಾಸ್ಕರ್‌ ಶೆಟ್ಟಿ ರಿಷಬ್‌ ಬಾಲ್ಯದ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ʻʻರಿಷಬ್‌‌ಗೆ ಪ್ರಶಾಂತ್‌ ಎಂದು ನಾಮಕರಣ ಮಾಡಲಾಗಿತ್ತು. ನಮ್ಮ ಅಣ್ಣನ ಮಗನಿಗೆ ಪ್ರವೀಣ್‌ ಹಾಗೂ ಮಗಳಿಗೆ ಪ್ರತಿಭಾ ಎಂದು ಹೆಸರಿಡಲಾಗಿತ್ತು. ಅದರಂತೆ ರಿಷಬ್‌ ಅವರಿಗೂ ʻಪʼ ದಿಂದ ಆರಂಭವಾಗುವ ಹೆಸರು ಹುಡುಕಿದೆವು. ಕೊನೆಗೆ ಪ್ರಶಾಂತ್‌ ಎಂದು ನಾಮಕರಣ ಮಾಡಿದೆವು,ʼʼ ಎಂದು ಹೇಳಿದ್ದಾರೆ.

ಇದನ್ನೂ ಓದಿ | Kantara Movie | ʻಚಾನ್ಸೇ ಇಲ್ಲ, ನೋ ವೇʼ ಎಂದು ರೆಬೆಲ್‌ ಆಗಿ ಟ್ವೀಟ್‌ ಮಾಡಿದ ರಿಷಬ್‌ ಶೆಟ್ಟಿ: ವೈರಲ್‌ ಆಯ್ತು ಪೋಸ್ಟ್‌!

ʻʻರಿಷಬ್‌ ಚಿತ್ರರಂಗಕ್ಕೆ ಹೋಗಬೇಕು ಎನ್ನುವ ಆಸೆ ಹೊಂದಿದ್ದಾಗ ಹೆಸರನ್ನು ಬದಲಾಯಿಸಿಕೊಳ್ಳುವಂತೆ ಸಂಖ್ಯಾ ಶಾಸ್ತ್ರಜ್ಞನಾದ ನಾನೆ ಸೂಚಿಸಿದೆ. ಆರ್‌ ಅಕ್ಷರದಿಂದ ಪ್ರಾರಂಭವಾಗುವ ಆರು ಅಕ್ಷರವನ್ನು ಇಟ್ಟುಕೊಳ್ಳುವಂತೆ ಸೂಚಿಸಿದೆ. ಹೀಗಾಗಿಯೇ ರಿಷಬ್‌ ಎಂದು ಹೆಸರನ್ನು ಬದಲಾಯಿಸಲಾಯಿತು,ʼʼ ಎಂದರು.

ಪ್ರಶಾಂತ್‌ ಎಂದು ಹೆಸರು ತಿಳಿಯುತ್ತಿದ್ದಂತೆ ಸೋಷಿಯಲ್‌ ಮೀಡಿಯಾದಲ್ಲಿ ಕನ್ನಡ ಚಿತ್ರರಂಗಕ್ಕೆ ಒಬ್ಬರು ಪ್ರಶಾಂತ್‌ ನೀಲ್‌ ಇನ್ನೊಬ್ಬರು ಪ್ರಶಾಂತ್‌ ಶೆಟ್ಟಿ ಎಂದು ನೆಟ್ಟಿಗರು ಟ್ರೋಲ್‌ ಮಾಡುತ್ತಿದ್ದಾರೆ.

ಇದನ್ನೂ ಓದಿ | Kantara Movie | ಕಾಂತಾರ ಕಲೆಕ್ಷನ್​ ನೋಡಿ ದೊಡ್ಡ ಬಜೆಟ್​​​ ಸಿನಿಮಾ ನಿರ್ಮಾಪಕರಿಗೆ ಹಾರ್ಟ್‌ ಅಟ್ಯಾಕ್‌: ಆರ್​ಜಿವಿ ಟ್ವೀಟ್​

Exit mobile version