Site icon Vistara News

Kantara Movie | ನಟ ಅನುಪಮ್‌ ಖೇರ್‌ ಜತೆ ರಿಷಬ್‌ ಶೆಟ್ಟಿ: ನಿರ್ದೇಶಕ ಮಧುರ್ ಭಂಡಾರ್ಕರ್ ಹೇಳಿದ್ದೇನು?

Kantara Movie

ಬೆಂಗಳೂರು : ನಟ, ನಿರ್ದೇಶಕ ರಿಷಬ್‌ ಶೆಟ್ಟಿ (Kantara Movie) ದೆಹಲಿ ಪ್ರವಾಸದಲ್ಲಿ ಇದ್ದಾರೆ. ಕಾರ್ಯಕ್ರಮವೊಂದರಲ್ಲಿ ʻಕಾಶ್ಮೀರ್‌ ಫೈಲ್ಸ್‌ʼ ಸಿನಿಮಾ ನಟ ಅನುಪಮ್‌ ಖೇರ್‌ ಜತೆ ರಿಷಬ್‌ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ರಿಷಬ್‌ ಅವರು ಅನುಪಮ್‌ ಖೇರ್‌ ಅವರನ್ನು ಭೇಟಿ ಮಾಡಿರುವ ಫೋಟೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಈ ಬಗ್ಗೆ ನೆಟ್ಟಿಗರು ʻಇಬ್ಬರೂ ಒಟ್ಟಿಗೆ ಕೆಲಸ ಮಾಡುವ ಸಾಧ್ಯತೆ ಇದೆಯಾ’ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ರಿಷಬ್‌ ಶೆಟ್ಟಿ ಫೋಟೊವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದು ʻʻಎಲ್ಲರನ್ನೂ ನಗಿಸುವ ಅದ್ಭುತ ಮನುಷ್ಯ. ನಿಮ್ಮೊಂದಿಗೆ ಕಳೆದ ಸಂಜೆ ಅದ್ಭುತವಾಗಿತ್ತು’ ಎಂದು ಬರೆದುಕೊಂಡಿದ್ದಾರೆ. ಇದನ್ನು ಅನುಪಮ್‌ ಖೇರ್‌ ರಿಟ್ವೀಟ್‌ ಮಾಡಿದ್ದಾರೆ. ಫೋಸ್ಟ್‌ ನೋಡಿ ರಿಷಬ್‌ ಅಭಿಮಾನಿಗಳು ರಿಷಬ್‌ ಅವರ ನಗುವನ್ನು ಹೊಗಳಿದ್ದಾರೆ. ರಿಷಬ್‌ ಅವರ ಬಟ್ಟೆಯ ಬಗ್ಗೆ ಪಾಸಿಟಿವ್‌ ಕಮೆಂಟ್‌ಗಳನ್ನು ನೀಡುತ್ತಿದ್ದಾರೆ. ʻಅಷ್ಟು ದೊಡ್ಡ ಕಾರ್ಯಕ್ರಮದಲ್ಲಿ ರಿಷಬ್‌ ಅವರ ಸರಳತೆ ಇಷ್ಟವಾಯಿತುʼ ಎಂದು ರಿಷಬ್‌ ಅಭಿಮಾನಿಗಳು ಕಮೆಂಟ್‌ ಮಾಡುತ್ತಿದ್ದಾರೆ.

ಇದನ್ನೂ ಓದಿ | Kantara Movie | ಬೆಂಗಳೂರು ನಗರವೊಂದರಲ್ಲಿಯೇ 20 ಸಾವಿರ ಪ್ರದರ್ಶನ: ದಾಖಲೆ ಬರೆದ ʻಕಾಂತಾರʼ!

ಅದೇ ರೀತಿ ನಿರ್ದೇಶಕ ಮಧುರ್ ಭಂಡಾರ್ಕರ್ ಅವರನ್ನು ರಿಷಬ್‌ ಭೇಟಿಯಾಗಿದ್ದಾರೆ. ಮಧುರ್ ಭಂಡಾರ್ಕರ್ ಟ್ವೀಟ್‌ನಲ್ಲಿ ರಿಷಬ್‌ ಅವರ ಜತೆ ಇರುವ ಫೋಟೊ ಶೇರ್‌ ಮಾಡಿಕೊಂಡು ʻʻರಿಷಬ್‌ ಶೆಟ್ಟಿ ಅವರು ಅತ್ಯಂತ ಸರಳ, ಡೌನ್ ಟು ಅರ್ಥ್‌ ಮತ್ತು ವಿನಮ್ರ ವ್ಯಕ್ತಿ. ಅವರ ಜತೆ ದೆಹಲಿಯಲ್ಲಿ ಸಂವಾದ. ಡಿವೈನ್ ಬ್ಲಾಕ್ ಬಸ್ಟರ್ ಕಾಂತಾರ ಸಿನಿಮಾದ ನಿರ್ದೇಶನ ಮತ್ತು ಅವರ ನಟನೆ ಅದ್ಭುತವಾಗಿದೆʼʼ ಎಂದು ಬರೆದುಕೊಂಡಿದ್ದಾರೆ. 

ಈಗಾಗಲೇ ಕಾಂತಾರ ಸಿನಿಮಾ ಒಟಿಟಿಯಲ್ಲಿ ಲಗ್ಗೆ ಇಟ್ಟಿದೆ. ಸಿನಿಪ್ರೇಮಿಗಳು ಕಾಂತಾರ ಸಿನಿಮಾವನ್ನು ಕಣ್ತುಂಬಿಸಿಕೊಂಡು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಒಟಿಟಿಯಲ್ಲಿ ಸಿನಿಮಾ ಬಂದರೂ ಹಲವು ಚಿತ್ರಮಂದರಿಗಳಲ್ಲಿ ಸಿನಿಮಾ ನೋಡುತ್ತಿದ್ದಾರೆ ಪ್ರೇಕ್ಷಕರು.

ಇದನ್ನೂ ಓದಿ | Kantara Movie | ವರಾಹ ರೂಪಂ ಕೇಸಿನಲ್ಲಿ ಮೊದಲ ಯಶಸ್ಸು: ಹಾಡು ಬಳಸಲು ಅನುಮತಿ, ಆದರೆ ಷರತ್ತುಗಳು ಅನ್ವಯ!

Exit mobile version