Site icon Vistara News

Kantara Movie | ನಾಳೆಯಿಂದ ಒಟಿಟಿಯಲ್ಲಿ ಶುರುವಾಗಲಿದೆ ಕಾಂತಾರ ಅಬ್ಬರ!

Kantara Movie in OTT

ಬೆಂಗಳೂರು : ರಿಷಬ್‌ ಶೆಟ್ಟಿ ನಿರ್ದೇಶನ ಹಾಗೂ ನಟನೆಯ ಕಾಂತಾರ ಸಿನಿಮಾ (Kantara Movie ) ವಿಶ್ವಾದ್ಯಂತ 400 ಕೋಟಿ ರೂ. ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಮಾಡಿದೆ. ಸೆ.30ರಂದು ತೆರೆಕಂಡ ಈ ಸಿನಿಮಾ ಆಗಲೇ 50 ದಿನಗಳನ್ನು ಭರ್ಜರಿಯಾಗಿ ಪೂರೈಸಿದೆ. ಇದರ ಬೆನ್ನಲ್ಲೇ ಹೊಸ ಸುದ್ದಿಯೊಂದನ್ನು ನೀಡಿದೆ. ಇದೀಗ ಅಮೆಜಾನ್‌ ಪ್ರೈಮ್‌ ವಿಡಿಯೊ ಅಧಿಕೃತ ಮಾಹಿತಿ ಹಂಚಿಕೊಂಡಿದೆ. ನವೆಂಬರ್ 24ರಂದು ಒಟಿಟಿಯಲ್ಲಿ ‘ಕಾಂತಾರ’ ಸ್ಟ್ರೀಮಿಂಗ್ ಆಗಲಿದೆ. 

ಕೇವಲ 16 ಕೋಟಿ ರೂ.ನಲ್ಲಿ ನಿರ್ಮಾಣವಾದ ಸಿನಿಮಾ ಇದೀಗ 400 ಕೋಟಿ ಗಳಿಸುವ ಮೂಲಕ ದಾಖಲೆ ನಿರ್ಮಿಸಿದೆ. ಇಂದಿಗೂ ಕಾಂತಾರ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಕರ್ನಾಟಕದಲ್ಲಿ 168.50 ಕೋಟಿ ರೂ.
ಆಂಧ್ರಪ್ರದೇಶ /ತೆಲಂಗಾಣ 60 ಕೋಟಿ ರೂ. ತಮಿಳುನಾಡು 12.70 ಕೋಟಿ ರೂ. , ಕೇರಳ 19.20 ಕೋಟಿ,
ಉತ್ತರ ಭಾರತ 96 ಕೋಟಿ ರೂ. ಹೊರದೇಶದಲ್ಲಿ 44.50 ಕೋಟಿ ರೂ. ಹೀಗೆ ಒಟ್ಟು 400 ಕೋಟಿ ರೂ. ಗಳಿಕೆ ಕಂಡಿದೆ.

ಇದನ್ನೂ ಓದಿ | Kantara Movie | ನಟ ಚೇತನ್‌ ಅಹಿಂಸಾ ವಿರುದ್ಧದ ಕೇಸ್‌ ವಜಾಗೊಳಿಸಲು ಹೈಕೋರ್ಟ್‌ ನಕಾರ

ಕಾಂತಾರ ಸಿನಿಮಾ ಭಾರತೀಯ ಸಿನಿ ರಂಗದ ದಿಗ್ಗಜರಾದ ಸೂಪರ್‌ ಸ್ಟಾರ್‌ ರಜನಿಕಾಂತ, ಬಿಗ್ ಬಿ ಅಮಿತಾಭ್, ಸೇರಿದಂತೆ ಖ್ಯಾತ ನಟ, ನಟಿಯರು ಮತ್ತು ವಿಮರ್ಶಕರಿಂದ ಉತ್ತಮ ಪ್ರಶಂಸೆ ಪಡೆದುಕೊಂಡಿದೆ. ಕೆಜಿಎಫ್‌೧ ಹಾಗೂ ಚಾಪ್ಟರ್ ೨ ಹೊಂಬಾಳೆ ಫಿಲ್ಸ್ಮ್‌ ನಿರ್ಮಾಣ ಮಾಡಿತ್ತು. ಅದೇ ಸಿನಿಮಾ ಸಂಸ್ಥೆ ಮಾಡಿರುವ ಕಾಂತಾರ ಕೂಡ ಅಷ್ಟೇ ಖ್ಯಾತಿಯನ್ನು ಗಳಿಸಿಕೊಂಡಿದೆ.

ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಆವತ್ತು ಕಪಿಲ್‌ ದೇವ್‌ ಮೈಯಲ್ಲಿ ಆವೇಶ ಬಂದಿತ್ತು, ಥೇಟ್‌ ಕಾಂತಾರದ ರಿಷಬ್‌ ಶೆಟ್ಟಿ ಸ್ಟೈಲಲ್ಲಿ!

Exit mobile version