Site icon Vistara News

Kantara Movie | ಕಾಂತಾರ ತುಳು ಟ್ರೈಲರ್‌ ಔಟ್‌: ಕಾಂತಾರ-2ಗೆ ಸಿದ್ಧತೆ ಮಾಡಿಕೊಳ್ತಿದ್ದಾರಾ ರಿಷಬ್‌ ಶೆಟ್ಟಿ?

Kantara Movie

ಬೆಂಗಳೂರು: ಕಾಂತಾರ ಸಿನಿಮಾ (Kantara Movie) ಈಗಾಗಲೇ ಒಟಿಟಿಯಲ್ಲಿ ಸ್ಟ್ರೀಮ್‌ ಆಗುತ್ತಿದ್ದು, ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಇದರ ಬೆನ್ನಲ್ಲೆ ಹೊಂಬಾಳೆ ಫಿಲ್ಮ್ಸ್‌ ಹೊಸ ಸುದ್ದಿಯೊಂದನ್ನು ನೀಡಿದೆ. ಕಾಂತಾರ ತುಳು ಟ್ರೈಲರ್‌ ಹೊಂಬಾಳೆ ಫಿಲ್ಮ್ಸ್‌ ಬಿಡುಗಡೆಗೊಳಿಸಿದೆ. ಅದೇ ರೀತಿ ಕಾಂತಾರ -2 ಬಿಡುಗಡೆಯಾಗುವ ಸಾಧ್ಯತೆಗಳಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ವರದಿ ಪ್ರಕಾರ ಕಾಂತಾರ ತಂಡಕ್ಕೆ ಈ ಸಿನಿಮಾ ಯಶಸ್ವಿಯಾಗುತ್ತದೆ ಎಂಬ ವಿಶ್ವಾಸವಿತ್ತು. ಆದರೆ ಈ ಮಟ್ಟದಲ್ಲಿ ಗೆಲ್ಲುತ್ತದೆ ಎಂದು ಎಣಿಸಿರಲಿಲ್ಲ. ತಂಡಕ್ಕೆ ಕಾಂತಾರ ಭಾಗ -2 ಮಾಡುವ ಯೋಚನೆ ಇದೆ. ರಿಷಬ್‌ ಅವರು ಕಾಂತಾರ-2ಗೆ ಸಿದ್ಧತೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ರಿಷಬ್‌ ಶೆಟ್ಟಿ ಸ್ಪಷ್ಟನೆ ನೀಡಬೇಕಿದೆ. ಕಾಂತಾರ ಬಹು ಭಾಷೆಯಲ್ಲಿ ರಿಲೀಸ್‌ ಆಗಿದ್ದು, ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಗಳಿಕೆ ಕಂಡಿದೆ. ಇದೀಗ ಹೊಂಬಾಳೆ ಫಿಲ್ಮ್ಸ್‌ ಕಾಂತಾರ ತುಳು ಟ್ರೈಲರ್‌ ಬಿಡುಗಡೆಗೊಳಿಸಿದೆ. ತುಳು ಟ್ರೈಲರ್​​ನಲ್ಲಿಯೂ ಮ್ಯೂಸಿಕ್, ಬಿಜಿಎಂಗಳಲ್ಲಿ ಬದಲಾವಣೆ ಮಾಡಲಾಗಿದೆ.

ಇದನ್ನೂ ಓದಿ | Kantara Movie | ವರಾಹ ರೂಪಂ ವಿವಾದ: ತಡೆಯಾಜ್ಞೆ ತೆರವು ಕೋರಿದ ಹೊಂಬಾಳೆ ಅರ್ಜಿ ವಜಾ

ಈಗಾಗಲೇ ಕಾಂತಾರ ಒಟಿಟಿಯಲ್ಲಿ ಜನರು ಬದಲಾದ ಮ್ಯೂಸಿಕ್ ಕೇಳಿದ್ದಾರೆ. ಈಗ ತುಳು ಟ್ರೈಲರ್​​ನಲ್ಲಿಯೂ ಮ್ಯೂಸಿಕ್, ಬಿಜಿಎಂಗಳಲ್ಲಿ ಬದಲಾವಣೆ ಮಾಡಲಾಗಿದೆ. ತುಳು ನಾಡಿನ ಸಿನಿಮಾ ಕುರಿತ ಕಥೆ ಆದ್ದರಿಂದ ಅದಕ್ಕೆ ಬೇಕಾದ ರೀತಿಯಲ್ಲಿ ಮ್ಯೂಸಿಕ್ ಸ್ವಲ್ಪ ಬದಲಾವಣೆ ಮಾಡಿದ್ದರೂ ಈ ಬದಲಾವಣೆ ಪ್ರೇಕ್ಷಕರಿಗೆ ಕಿರಿಕಿರಿಯಾಗುವಂತೆ ಇಲ್ಲ ಎಂದು ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತುಳು ಭಾಷೆಗೆ ಕಾಂತಾರ ಸಿನಿಮಾ ಡಬ್‌ ಆಗಿದ್ದು, ಡಿಸೆಂಬರ್‌ 2ರಂದು ಚಿತ್ರಮಂದಿರದಲ್ಲಿ ತೆರೆ ಕಾಣಲಿದೆ. ವಿದೇಶಗಳಲ್ಲಿ ನ.25ರಂದೇ ತುಳು ಭಾಷೆಯಲ್ಲಿ ಡಬ್‌ ಆದ ಕಾಂತರ ರಿಲೀಸ್‌ ಆಗಲಿದೆ.

ಇದನ್ನೂ ಓದಿ | Kantara Movie | ಒಟಿಟಿಯಲ್ಲಿ ಕಾಂತಾರ: ಪ್ರೇಕ್ಷಕರು ʻಸಿನಿಮಾ ನೋಡಲು ಮನಸ್ಸಾಗಲ್ಲʼ ಅಂದಿದ್ಯಾಕೆ?

Exit mobile version