Site icon Vistara News

Kantara Movie | ಕಾಂತಾರ ʻಮೈಂಡ್‌ ಬ್ಲೋಯಿಂಗ್‌ʼಎಂದ ನಟ ಧನುಷ್‌: ರಿಷಬ್‌ ಸ್ಫೂರ್ತಿ ಅಂದ್ರು ರಾಣಾ!

Kantara Movie (dhanush,rana daggubati)

ಬೆಂಗಳೂರು : ಕಾಂತಾರ ಸಿನಿಮಾಗೆ (Kantara Movie) ಕನ್ನಡ ಮಾತ್ರವಲ್ಲದೇ ಪರಭಾಷೆಯಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಟಾಲಿವುಡ್‌ ನಟ ಪ್ರಭಾಸ್ ʻಸಿನಿಮಾದ ಕ್ಲೈಮ್ಯಾಕ್ಸ್‌ ಬಹಳ ಇಷ್ಟವಾಯಿತುʼ ಎಂದು ಸೋಷಿಯಲ್‌ ಮೀಡಿಯಾ ಮೂಲಕ ಹೇಳಿಕೊಂಡಿದ್ದರು. ಹಾಗೇ ನಟ ಕಿಚ್ಚ ಸುದೀಪ್‌ ಮತ್ತು ನಟ ಪೃಥ್ವಿರಾಜ್‌ ಸುಕುಮಾರನ್‌ ಕೂಡ ಪಾಸಿಟಿವ್‌ ಮಾತುಗಳನ್ನು ಹಂಚಿಕೊಂಡಿದ್ದರು. ಇದೀಗ ತಮಿಳು ಸ್ಟಾರ್‌ ನಟ ಧನುಷ್‌ ಹಾಗೂ ಟಾಲಿವುಡ್‌ ನಟ ರಾಣಾ ದಗ್ಗುಬಾಟಿ ಟ್ವೀಟ್‌ ಮಾಡಿ ಹೊಗಳಿದ್ದಾರೆ.

ʻʻಕಾಂತಾರ ಮೈಂಡ್‌ ಬ್ಲೋಯಿಂಗ್‌! ನೋಡಲೇಬೇಕಾದ ಸಿನಿಮಾ. ರಿಷಬ್ ಶೆಟ್ಟಿ ನೀವು ನಿಮ್ಮ ಬಗ್ಗೆ ತುಂಬಾ ಹೆಮ್ಮೆ ಪಡಬೇಕು. ಬೌಂಡರಿಗಳನ್ನು ದಾಟಿ ಸಿನಿಮಾ ಮಾಡುತ್ತಿರುವ ಹೊಂಬಾಳೆಗೆ ಅಭಿನಂದನೆಗಳು. ಚಿತ್ರದ ಎಲ್ಲ ನಟರು ಮತ್ತು ತಂತ್ರಜ್ಞರಿಗೆ ನನ್ನ ಅಪ್ಪುಗೆ. ದೇವರು ಒಳ್ಳೆಯದು ಮಾಡಲಿʼʼ ಎಂದು ಹೇಳಿಕೊಂಡಿದ್ದಾರೆ.

ಧನುಷ್‌ ಟ್ವೀಟ್‌ಗೆ ಕನ್ನಡಿಗರು ಕಮೆಂಟ್‌ ಮೂಲಕ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಬಾಹುಬಲಿ ಖ್ಯಾತಿಯ ರಾಣಾ ದಗ್ಗುಬಾಟಿ ”ಕಾಂತಾರ ಒಂದು ಅದ್ಭುತವಾದ ಸಿನಿಮಾ. ಚಿತ್ರ ತಂಡದ ಪ್ರತಿಯೊಬ್ಬರಿಗೂ ಅಭಿನಂದನೆಗಳು. ರಿಷಬ್‌ ನೀವು ನಿಜವಾಗಿಯೂ ನಮಗೆ ಸ್ಫೂರ್ತಿʼʼ ಎಂದು ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ | Kantara Movie | ಜ್ಯೂನಿಯರ್‌ ಎನ್‌ಟಿಆರ್‌ ಊರು ನನ್ನ ಹುಟ್ಟೂರು: ಕಾಂತಾರ ಜರ್ನಿ ಹಂಚಿಕೊಂಡ ರಿಷಬ್‌!

ಈ ಹಿಂದೆ ನಟ ಪ್ರಭಾಸ್‌ ತಮ್ಮ ಇನ್‌ಸ್ಟಾ ಸ್ಟೋರಿಯಲ್ಲಿ ಅನಿಸಿಕೆಯನ್ನು ಹಾಕಿಕೊಂಡಿದ್ದರು, ʻʻಕಾಂತಾರ ಸಿನಿಮಾ ನೋಡಿ ಎಂಜಾಯ್‌ ಮಾಡಿದೆ. ವಿಶೇಷವಾಗಿ ಕ್ಲೈಮ್ಯಾಕ್ಸ್. ಚಿತ್ರತಂಡಕ್ಕೆ ನನ್ನ ಶುಭಾಶಯಗಳು, ಸಿನಿಮಾಗೆ ಇನ್ನಷ್ಟು ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆʼʼ ಎಂದು ಬರೆದುಕೊಂಡಿದ್ದರು.

ಅಜನೀಶ್ ಬಿ. ಲೋಕನಾಥ್ ಸಂಗೀತ ಮತ್ತು ಅರವಿಂದ್ ಕಶ್ಯಪ್ ಛಾಯಾಗ್ರಹಣವಿದೆ. ಕಾಂತಾರ ಸಿನಿಮಾದಲ್ಲಿ ಸಪ್ತಮಿ ಗೌಡ, ಕಿಶೋರ್ ಮತ್ತು ಅಚ್ಯುತ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ | Kantara Movie | ಮೂಗುತಿ ಸುಂದರಿಗೆ ಮೀನು ಕಟ್‌ ಮಾಡೋದು ತುಂಬಾ ಸುಲಭ; ಸಪ್ತಮಿಯ ಮೀನಿನ ನಡೆ!

Exit mobile version