Site icon Vistara News

Kantara Movie | ʻವರಾಹ ರೂಪಂʼ ವಿವಾದಕ್ಕೆ ಕೊನೆಗೂ ಜಯ: ಟ್ವೀಟ್‌ನಲ್ಲಿ ರಿಷಬ್‌ ಹೇಳಿದ್ದೇನು?

Kantara Movie (varaha roopam win caase)

ಬೆಂಗಳೂರು: ಕಾಂತಾರ ಸಿನಿಮಾದ (Kantara Movie) ʻವರಾಹ ರೂಪಂʼ ಹಾಡಿನ ವಿವಾದಕ್ಕೆ ಕೊನೆಗೂ ಜಯ ಸಿಕ್ಕಿದೆ. ಈ ಸುದ್ದಿಯನ್ನು ನಟ ರಿಷಬ್‌ ಅವರು ಟ್ವೀಟ್‌ ಮೂಲಕ ಹಂಚಿಕೊಂಡಿದ್ದು, ಗೆದ್ದ ಖುಷಿಯನ್ನು ಹಂಚಿಕೊಂಡಿದ್ದಾರೆ.

“ವರಾಹ ರೂಪಂ” ಮಲಯಾಳಂ ಮೂಲ ಹಾಡನ್ನು ಕಾಂತಾರ ಚಿತ್ರದಲ್ಲಿ ನಕಲು ಮಾಡಲಾಗಿದೆ ಎಂದು ತೈಕುಡಂ ಬ್ರಿಜ್‌ ಮ್ಯೂಸಿಕ್‌ ತಂಡ ಆರೋಪಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದ ಕೇರಳದ ಕೋಯಿಕ್ಕೋಡ್ (ಕಲ್ಲಿಕೋಟೆ) ಜಿಲ್ಲಾ ನ್ಯಾಯಾಲಯದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿತ್ತು. ಇದೀಗ ಅಲ್ಲಿಯೂ ತಡೆಯಾಜ್ಞೆ ತೆರವುಗೊಂಡಿದೆ. ಹೀಗಾಗಿ ಕೇಸ್‌ ಗೆದ್ದ ವಿಚಾರವನ್ನು ಶನಿವಾರ (ಡಿಸೆಂಬರ್‌ 3) ಟ್ವೀಟ್‌ ಮೂಲಕ ಹಂಚಿಕೊಂಡಿರುವ ರಿಷಬ್‌, “ಒಟಿಟಿಯಲ್ಲಿಯೂ ಹಾಡನ್ನು ಬದಲಾಯಿಸಲಿದ್ದೇವೆ” ಎಂದು ಬಹಿರಂಗಪಡಿಸಿದ್ದಾರೆ.

ಹೊಂಬಾಳೆ ಫಿಲ್ಮ್ಸ್‌ ಬ್ಯಾನರ್, ರಿಷಬ್ ಶೆಟ್ಟಿ, ಪೃಥ್ವಿರಾಜ್ ಫಿಲ್ಮ್ಸ್, ಅಮೆಜಾನ್ ಸೆಲ್ಲರ್ ಸರ್ವಿಸ್ ಪ್ರೈವೇಟ್ ಲಿಮಿಟೆಡ್, ಗೂಗಲ್ ಇಂಡಿಯಾ ಹೆಡ್ ಆಫೀಸ್, ಪೃಥ್ವಿರಾಜ್ ಸುಕುಮಾರನ್ ಸೇರಿದಂತೆ ಇತರರಿಗೆ ಕೇರಳ ಹೈಕೋರ್ಟ್ ನೋಟಿಸ್ ಜಾರಿ ಮಾಡಿತ್ತು. ಇದೀಗ ಕಾಂತಾರ’ ಚಿತ್ರದ ವರಾಹ ರೂಪಂ ಹಾಡಿನ ಬಳಕೆಗೆ ಕೇರಳದ ಹೈಕೋರ್ಟ್ ಅನುಮತಿ ನೀಡಿದೆ. ಕೋಯಿಕ್ಕೋಡ್ (ಕಲ್ಲಿಕೋಟೆ) ನ್ಯಾಯಾಲಯ ಕೂಡ ಈ ಹಿಂದೆ ತಡೆಯಾಜ್ಞೆಯನ್ನು ತೆರವು ಮಾಡಿತ್ತು.

ಇದನ್ನೂ ಓದಿ | Kantara Movie | ವರಾಹ ರೂಪಂ ಹಾಡಿಗೆ ಗ್ರೀನ್‌ ಸಿಗ್ನಲ್‌ ನೀಡಿದ್ದ ಜಿಲ್ಲಾ ಕೋರ್ಟ್‌ ಆದೇಶಕ್ಕೆ ಕೇರಳ ಹೈಕೋರ್ಟ್‌ ತಡೆಯಾಜ್ಞೆ

ಇಂದು (ಡಿಸೆಂಬರ್‌ 3) ಶುಕ್ರವಾರ ಕೇರಳದ ಪಾಲಕ್ಕಾಡ್ ನ್ಯಾಯಾಲಯದಲ್ಲೂ ತಡೆಯಾಜ್ಞೆಗೆ ತೆರವುಗೊಂಡಿದೆ. ಇದರ ಬೆನ್ನಲ್ಲೇ ರಿಷಬ್‌ ಶೆಟ್ಟಿ ಟ್ವೀಟ್‌ ಮಾಡಿದ್ದು, ʻʻದೈವಾನು ದೈವಗಳ ಆಶೀರ್ವಾದ ಹಾಗೂ ಜನರ ಅಭಿಮಾನದಿಂದ ವರಾಹರೂಪಂ ಕೇಸ್ ಗೆದ್ದಿದ್ದೇವೆ. ಜನರ ಕೋರಿಕೆಯನ್ನು ಪರಿಗಣಿಸಿ ಅತಿ ಶೀಘ್ರದಲ್ಲಿ ಒಟಿಟಿಯಲ್ಲಿ ಹಾಡನ್ನು ಬದಲಾಯಿಸಲಿದ್ದೇವೆʼʼ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ | Kantara Movie | ಕೇರಳದಲ್ಲಿ ಭರ್ಜರಿ ಕಲೆಕ್ಷನ್‌ ಮಾಡಿದ ಕಾಂತಾರ!

Exit mobile version