Site icon Vistara News

Karan Deol-Drisha Wedding: ಅದ್ಧೂರಿಯಾಗಿ ನೆರವೇರಿತು ಸನ್ನಿ ಡಿಯೋಲ್‌ ಮಗನ ಮದುವೆ!

Karan Deol-Drisha Wedding

ಬೆಂಗಳೂರು: ಬಾಲಿವುಡ್‌ ನಟ ಸನ್ನಿ ಡಿಯೋಲ್‌ (Sunny Deol) ಅವರ ಪುತ್ರ ಕರಣ್‌ ಡಿಯೋಲ್‌ (Karan Deol-Drisha Wedding) ಅವರು ತಮ್ಮ ಪ್ರಿಯತಮೆ ದ್ರಿಶಾ ಆಚಾರ್ಯರೊಂದಿಗೆ ಜೂನ್‌ 18ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಕುಟುಂಬಗಳು ಮತ್ತು ಆಪ್ತ ಸ್ನೇಹಿತರು ಹಾಜರಿದ್ದರು. ಸಂಗೀತ, ಮೆಹೆಂದಿ ಮತ್ತು ಹಳದಿ ಕಾರ್ಯಕ್ರಮ ಜೂನ್ 15 ರಿಂದ 17ರವರೆಗೆ ನಡೆಯಿತು.

27 ವರ್ಷದ ಕರಣ್ ಡಿಯೋಲ್ ತಮ್ಮ ಕುಟುಂಬದ ಹೋಮ್ ಪ್ರೊಡಕ್ಷನ್ ಅಡಿಯಲ್ಲಿ ಬಾಲಿವುಡ್‌ನ ವಿವಿಧ ಯೋಜನೆಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ‘ಪಲ್ ಪಾಲ್ ದಿಲ್ ಕೆ ಪಾಸ್’ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಡುತ್ತಿದ್ದಾರೆ. 1990ರಲ್ಲಿ ಜನಿಸಿರುವ ಕರಣ್​ ಅವರನ್ನು ಕುಟುಂಬ ಸದಸ್ಯರು ಮತ್ತು ಆಪ್ತರು ರಾಕಿ ಎಂದು ಕರೆಯುತ್ತಾರೆ. ಕೆಂಪು ಲೆಹೆಂಗಾದಲ್ಲಿ ದ್ರಿಶಾ ಆಚಾರ್ಯ ಮಿಂಚಿದರೆ, ಕರಣ್ ಶೇರ್ವಾನಿಯಲ್ಲಿ ಕಂಡಿದ್ದಾರೆ. ಡಿಯೋಲ್ ಕುಟುಂಬವು ಜೂನ್ 18ರ ಸಂಜೆ ತಮ್ಮ ಸ್ನೇಹಿತರಿಗಾಗಿ ಆರತಕ್ಷತೆಯನ್ನು ಆಯೋಜಿಸಿದೆ.

ಇದನ್ನೂ ಓದಿ: Dharmendra Singh: ಮೊಮ್ಮಗನ ಸಂಗೀತ ಕಾರ್ಯಕ್ರಮದಲ್ಲಿ ಮಸ್ತ್‌ ಡ್ಯಾನ್ಸ್‌ ಮಾಡಿದ ಧರ್ಮೇಂದ್ರ ಸಿಂಗ್‌, ವಿಡಿಯೊ ವೈರಲ್

ಮದುವೆಯ ವಿಧಿವಿಧಾನಗಳು ಅಜ್ಜ ಧರ್ಮೇಂದ್ರ ಅವರ ಮನೆಯಿಂದಲೇ ನಡೆದಿದೆ. ದಂಪತಿ ಜೂನ್ 18 ರಂದು ಬಾಂದ್ರಾದ ತಾಜ್ ಲ್ಯಾಂಡ್ಸ್ ಎಂಡ್‌ನಲ್ಲಿ ಸ್ಟಾರ್ -ಸ್ಟಡ್ ರಿಸೆಪ್ಶನ್ ಪಾರ್ಟಿಯನ್ನು ಆಯೋಜಿಸಿದೆ. ಇನ್ನು ದ್ರಿಶಾ ಅವರು, ಚಲನಚಿತ್ರ ನಿರ್ಮಾಪಕ ಬಿಮಲ್ ರಾಯ್ ಅವರ ಮೊಮ್ಮಗಳು ಮತ್ತು ಅವರು ಪ್ರಸ್ತುತ ದುಬೈನಲ್ಲಿ ಟ್ರಾವೆಲ್ ಏಜೆನ್ಸಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ.

Exit mobile version