ಬೆಂಗಳೂರು : ಬಾಲಿವುಡ್ ಪ್ರಸಿದ್ಧ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ (Karan Johar) ನಿರ್ದೇಶನದ ʻರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿʼ ಚಿತ್ರದ ಬಿಡುಗಡೆಯ ದಿನಾಂಕ ಪ್ರಕಟವಾಗಿದೆ. ಈ ಚಿತ್ರಕ್ಕೆ ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಏಳು ವರ್ಷಗಳ ನಂತರ ಕರಣ್ ಜೋಹರ್ ನಿರ್ದೇಶನದತ್ತ ಮುಖ ಮಾಡಿದ್ದು, 2023 ಏಪ್ರಿಲ್ 28ರಂದು ಚಿತ್ರ ಬಿಡುಗಡೆಯಾಗಲಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಘೋಷಿಸಿದ್ದಾರೆ.
ಚಿತ್ರದ ಕುರಿತು ಕರಣ ಜೋಹರ್ ಪೋಸ್ಟ್ ಶೇರ್ ಮಾಡಿದ್ದು “7 ವರ್ಷಗಳ ನಂತರ ಮತ್ತೆ ಚಿತ್ರರಂಗಕ್ಕೆ ಮರಳುತ್ತಿದ್ದೇನೆ. ನನ್ನ ಚಿತ್ರದ ಸೆಟ್‌ನಲ್ಲಿ ಅನೇಕ ಪ್ರಸಿದ್ಧ ನಟರೊಂದಿಗೆ ಕೆಲಸ ಮಾಡುವ ಸಮಯ ಸಿಕ್ಕಿದೆ. ನಮ್ಮ ಕುಟುಂಬ ಸಂಪ್ರದಾಯಗಳಲ್ಲಿ ಸಾಗುವ ಕಥೆಯೊಂದಿಗೆ ಬರುತ್ತಿದ್ದೇನೆ. 28ನೇ ಏಪ್ರಿಲ್ 2023ರಂದು ಚಿತ್ರಮಂದಿರಗಳಲ್ಲಿ ʻರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿʼ ಬಿಡುಗಡೆಯಾಗುತ್ತಿದೆʼʼಎಂದು ಬರೆದುಕೊಂಡಿದ್ದಾರೆ. ಸೈಫ್ ಅಲಿ ಖಾನ್ ಅವರ ಪುತ್ರ ಇಬ್ರಾಹಿಂ ಸಹ ಈ ಫಿಲ್ಮ್‌ನಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ ಎಂಬ ವರದಿ ಕೂಡ ಇದೆ.
ಇದನ್ನೂ ಓದಿ | ಕರಣ್ ಜೋಹರ್ ಬರ್ತ್ ಡೇ ಪಾರ್ಟಿಗೆ ಹೋಗಿದ್ದ 50ಕ್ಕೂ ಹೆಚ್ಚು ಮಂದಿಗೆ ಏನಾಯ್ತು?; ಜೋರಾಗಿದೆ ಚರ್ಚೆ
ಈ ಹಿಂದೆ ಈ ಸಿನಿಮಾ ಕುರಿತು ಮಾಹಿತಿ ನೀಡಿದ್ದ ಕರಣ್ ಜೋಹರ್ ಚಿತ್ರದಲ್ಲಿ ಜಯಾ ಬಚ್ಚನ್, ಶಬಾನಾ ಅಜ್ಮಿ ಮತ್ತು ಧರ್ಮೇಂದ್ರ ಕೂಡ ಇದ್ದಾರೆ ಎಂದು ಹೇಳಿಕೊಂಡಿದ್ದರು. ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ಕೂಡ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ. ರಣಬೀರ್ ಕಪೂರ್, ಅನುಷ್ಕಾ ಶರ್ಮಾ, ಐಶ್ವರ್ಯಾ ರೈ ಬಚ್ಚನ್ ನಟಿಸಿದ ʻಏ ದಿಲ್ ಹೇ ಮುಷ್ಕಿಲ್ʼ ಚಿತ್ರವನ್ನು ಕರಣ್ ಕೊನೆಯದಾಗಿ ನಿರ್ದೇಶಿಸಿದ್ದರು.
ಇದನ್ನೂ ಓದಿ | Star Week | ದೀಪಾವಳಿ ಪಾರ್ಟಿಗೆ ಬಾಲಿವುಡ್ ತಾರೆಯರ ಪ್ರಭಾವಳಿ