ಮುಂಬೈ: ಬಾಲಿವುಡ್ ಖ್ಯಾತ ನಿರ್ಮಾಪಕ, ನಿರೂಪಕ ಎಲ್ಲಕ್ಕಿಂತ ಹೆಚ್ಚಾಗಿ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರಾದ ಕರಣ್ ಜೋಹರ್ ಇತ್ತೀಚೆಗಷ್ಟೇ (ಮೇ 25ರಂದು) ತಮ್ಮ 50ನೇ ವರ್ಷದ ಹುಟ್ಟುಹಬ್ಬ (Karan Johar Birth Day Party)ವನ್ನು ಅದ್ದೂರಿಯಾಗಿ, ಪಶ್ಚಿಮ ಮುಂಬೈನ ಅಂಧೇರಿಯಲ್ಲಿರುವ ಯಶ್ ರಾಜ್ ಫಿಲ್ಮ್ ಸ್ಟುಡಿಯೋದಲ್ಲಿ ಆಚರಿಸಿಕೊಂಡಿದ್ದಾರೆ. ಈ ಸಂಭ್ರಮದ ಪಾರ್ಟಿಗೆ ಹಿಂದಿ ಚಿತ್ರರಂಗದ ಗಣ್ಯರ ದಂಡು ಬಂದಿತ್ತು. ಶಾರೂಖ್ ಖಾನ್, ಹೃತಿಕ್ ರೋಷನ್, ಕತ್ರೀನಾ ಕೈಫ್, ಕಿಯಾರಾ ಅಡ್ವಾಣಿ, ಜಾಹ್ನವಿ ಕಪೂರ್, ಮಲೈಕಾ ಅರೋರಾ, ಕರೀನಾ ಕಪೂರ್ ಖಾನ್, ಟ್ವಿಂಕಲ್ ಖನ್ನಾ, ರವೀನಾ ಟಂಡನ್ ಹೀಗೆ ಅನೇಕ ದಿಗ್ಗಜ ನಟ-ನಟಿಯರು ಬರ್ತ್ ಡೇ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು.
ಆದರೆ ಈ ಬರ್ತ್ ಡೇ ಪಾರ್ಟಿಗೆ ಸಂಬಂಧಪಟ್ಟಂತೆ ಈಗೊಂದು ಶಾಕಿಂಗ್ ವಿಷಯ ಹೊರಬಿದ್ದಿದೆ. ಕರಣ್ ಜೋಹರ್ 50 ನೇ ವರ್ಷದ ಬರ್ತ್ ಡೇ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಸುಮಾರು 50-55 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ ಎಂದು ಬಾಲಿವುಡ್ ಹಂಗಾಮಾ ವರದಿ ಮಾಡಿದೆ. ಭರ್ಜರಿಯಾಗಿ ನಡೆದ ಪಾರ್ಟಿಯೀಗ ಕೊರೊನಾ ಸೂಪರ್ ಸ್ಪ್ರೆಡ್ಡರ್ ಆಯ್ತಾ ಎಂಬ ಚರ್ಚೆಯೂ ನಡೆಯುತ್ತಿದೆ. ಆದರೆ ಕರಣ್ ಜೋಹರ್ ಈ ಬಗ್ಗೆ ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ.
ಇದನ್ನೂ ಓದಿ: ಕರಣ್ ಜೋಹರ್ @ 50: ಯಶ್ ರಾಜ್ ಸ್ಟುಡಿಯೋದಲ್ಲಿ ಬಾಲಿವುಡ್ ನೈಟ್ಸ್
ಕರಣ್ ಜೋಹರ್ ಹುಟ್ಟುಹಬ್ಬದ ಪಾರ್ಟಿಯಲ್ಲಿ ಪಾಲ್ಗೊಂಡ 50ಕ್ಕೂ ಹೆಚ್ಚು ಮಂದಿಯಲ್ಲಿ ಕೊರೊನಾ ದೃಢಪಟ್ಟಿದೆ. ಆದರೆ ಅವರು ಅದನ್ನು ಬಹಿರಂಗಪಡಿಸುತ್ತಿಲ್ಲ. ಕಾರ್ತೀಕ್ ಆರ್ಯನ್ ಕೂಡ ಕೊರೊನಾ ಸೋಂಕಿತರಾಗಿದ್ದಾರೆ. ಆದರೆ ಅವರು ಬರ್ತ್ ಡೇ ಪಾರ್ಟಿಯಲ್ಲಿ ಪಾಲ್ಗೊಂಡಿರಲಿಲ್ಲ. ಅದರ ಬದಲು ಪಾರ್ಟಿಗೆ ಹೋಗಿದ್ದ ಬಾಲಿವುಡ್ ಹಿರೋಯಿನ್ ಒಬ್ಬರಿಗೆ ಕೊರೊನಾ ತಗುಲಿ, ಅವರ ಸಂಪರ್ಕಕ್ಕೆ ಹೋದ ಕಾರ್ತೀಕ್ ಆರ್ಯನ್‌ಗೆ ಹಬ್ಬಿದೆ. ಯಾಕೆಂದರೆ ಇವರಿಬ್ಬರೂ ಜತೆಯಾಗಿ ಸಿನಿಮಾವೊಂದನ್ನು ಪ್ರಮೋಟ್ ಮಾಡುತ್ತಿದ್ದರು ಎಂದು ಮೂಲಗಳಿಂದ ತಿಳಿದುಬಂದಿದ್ದಾಗಿ ವರದಿಯಾಗಿದೆ.
ಇದನ್ನೂ ಓದಿ: ಬಾಲಿವುಡ್ ನ ಜನ ಮೆಚ್ಚಿದ ಗಾಯಕ ಕೆಕೆ, ಶಾಸ್ತ್ರೀಯ ಸಂಗೀತ ಕಲಿಯದಿದ್ದರೂ, 3,000 ಜಿಂಗಲ್ಸ್ ಹಾಡಿದ್ದರು!