Site icon Vistara News

Karan Johar: ‘ಕಳಪೆ’ ಮಿಮಿಕ್ರಿ ಕಂಡು ಕರಣ್ ಜೋಹರ್ ಗರಂ; ಕ್ಷಮೆಯಾಚಿಸಿದ ಹಾಸ್ಯನಟ!

Karan Johar upset with Kettan Singh's poor mimicry of him

ಬೆಂಗಳೂರು: ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ (Karan Johar) ಭಾನುವಾರ ರಾತ್ರಿ (ಮೇ.5) ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ತಮ್ಮನ್ನು ಅನುಕರಣೆ ಮಾಡಿದ ಕಾಮಿಡಿ ಶೋ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಕೆತನ್‌ ಸಿಂಗ್ (Comedian Kettan Singh ) ಅವರು `ಮ್ಯಾಡ್ನೆಸ್ ಮಚಾಯೆಂಗೆʼ ( Madness Machaenge) ಕಾರ್ಯಕ್ರಮದ ಪ್ರೋಮೊ ಪೋಸ್ಟ್‌ ಮಾಡಿದ್ದಾರೆ. ಕೆತನ್‌ ಸಿಂಗ್ ಅವರು ಕರಣ್‌ ಅವರ ರೀತಿ ಅನುಕರಣೆ ಮಾಡಿದ್ದಾರೆ. ಇದು ಕರಣ್‌ ಅವರಿಗೆ ಇಷ್ಟವಾಗಲಿಲ್ಲ. ಹೀಗಾಗಿ ಕರಣ್‌ ಬೇಸರದಲ್ಲಿ ಇನ್‌ಸ್ಟಾದಲ್ಲಿ ಈ ಬಗ್ಗೆ ಪೋಸ್ಟ್‌ ಮಾಡಿದ್ದಾರೆ. ಆದರೆ ಎಲ್ಲಿಯೂ ಕಾರ್ಯಕ್ರಮದ ಹೆಸರನ್ನು ಉಲ್ಲೇಖಿಸಿಲ್ಲ. ಹೀಗಾಗಿ ಇದು ʻಮ್ಯಾಡ್ನೆಸ್ ಮಚಾಯೆಂಗೆʼ ಕಾರ್ಯಕ್ರಮದ ಬಗ್ಗೆಯೇ ಕರಣ್ ಮಾತನಾಡಿರುವುದು ಎಂದು ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ. ಕರಣ್ ಟೀಕೆಗೆ ಇದೀಗ ಹಾಸ್ಯನಟ ಕೂಡ ಪ್ರತಿಕ್ರಿಯಿಸಿದ್ದಾರೆ.

ಕರಣ್ ಇನ್‌ಸ್ಟಾ ಪೋಸ್ಟ್‌ನಲ್ಲಿ ಹೀಗೆ ಬರೆದಿದ್ದಾರೆ, “ನಾನು ನನ್ನ ತಾಯಿಯೊಂದಿಗೆ ಕುಳಿತು ಟಿವಿ ನೋಡುತ್ತಿದ್ದೆ. ಒಳ್ಳೆಯ ಚಾನೆಲ್‌ನಲ್ಲಿ ಕಾಮಿಡಿ ರಿಯಾಲಿಟಿ ಶೋ ಹಾಸ್ಯದ ಪ್ರೋಮೊ ನೋಡಿದೆ. ನನ್ನ ಅನುಕರಣೆ ಅದರಲ್ಲಿತ್ತು. ಅತ್ಯಂತ ಕಳಪೆಯಾಗಿತ್ತು. ಈ ರೀತಿ ಕಳಪೆ ಮಟ್ಟದ ಮಿಮಿಕ್ರಿಯನ್ನು ನಾನು ಟ್ರೋಲ್‌ ಪೇಜ್‌ಗಳಿಂದ, ಫೇಮಸ್‌ ಇಲ್ಲದೇ ಇರುವ ಜನರಿಂದ ನಿರೀಕ್ಷಿಸುತ್ತೇನೆ. ಆದರೆ 25 ವರ್ಷಗಳಿಂದ ಒಳ್ಳೆಯ ಬಾಡಿಂಗ್‌ ಇರುವ ಚಾನೆಲ್‌ನಿಂದ ಈ ರೀತಿಯ ಕಳಪೆ ಮಟ್ಟದ ಪ್ರದರ್ಶನ ನಾನು ನಿರೀಕ್ಷಿಸರಲಿಲ್ಲ. ಈ ಪ್ರೋಮೊ ಕಂಡು ನನಗೆ ಕೋಪ ಬರಲಿಲ್ಲ. ಬಹಳ ದುಃಖವನ್ನುಂಟುಮಾಡಿತು!” ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್‌ವನ್ನು ನಿರ್ಮಾಪಕಿ ಏಕ್ತಾ ಕಪೂರ್ ಕೂಡ ರಿ ಪೋಸ್ಟ್‌ ಮಾಡಿ ಕರಣ್ ಬೆಂಬಲಕ್ಕೆ ನಿಂತರು. ಕಳಪೆ ಹಾಸ್ಯ ಎಂದು ಏಕ್ತಾ ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Karan Johar: ಉಪ ರಾಷ್ಟ್ರಪತಿಯಿಂದ ಪ್ರಶಸ್ತಿ ಸ್ವೀಕರಿಸಿದ ಕರಣ್ ಜೋಹರ್

ಏಕ್ತಾ ಕಪೂರ್‌ ರಿ ಪೋಸ್ಟ್‌ ಮಾಡಿ ʻʻಈ ರೀತಿ ಹಲವು ಬಾರಿ ಸಂಭವಿಸಿದೆ! ಕಳಪೆ ಹಾಸ್ಯವು ಕೆಲವೊಮ್ಮೆ ಕಾರ್ಯಕ್ರಮಗಳಲ್ಲಿ ಮತ್ತು ಪ್ರಶಸ್ತಿ ಸಮಾರಂಭಗಳಲ್ಲಿಯೂ ಇರುತ್ತದೆ. ಇದರ ಜತೆಗೆ ನೀವು ಹಾಜರಾಗಬೇಕೆಂದು ಅವರು ನಿರೀಕ್ಷಿಸುತ್ತಾರೆʼʼ ಎಂದು ಅವರು ಬರೆದಿದ್ದಾರೆ.

ಕರಣ್‌ ಜೋಹರ್ ಹೇಳಿಕೆಯ ನಂತರ, ಹಾಸ್ಯನಟ ಕೆತನ್‌ ಸಿಂಗ್ ಪ್ರತಿಕ್ರಿಯಿಸಿದರು ಮತ್ತು ಕ್ಷಮೆಯಾಚಿಸಿದರು. “ನಾನು ಕರಣ್ ಸರ್ ಅವರಲ್ಲಿ ಕ್ಷಮೆ ಕೇಳುತ್ತೇನೆ. ಮೊದಲನೇದಾಗಿ ಈ ರೀತಿ ಮಿಮಿಕ್ರಿ ಮಾಡಲು ಕಾರಣ ಕರಣ್ ಜೋಹರ್ ಅವರ ಕಾಫಿ ಶೋವನ್ನು ಬಹಳಷ್ಟು ಬಾರಿ ನೋಡಿದ್ದೇನೆ. ನಾನು ಅವರ ಕೆಲಸಕ್ಕೆ ಮತ್ತು ಆ ಕಾರ್ಯಕ್ರಮಕ್ಕೆ ನಾನು ದೊಡ್ಡ ಅಭಿಮಾನಿ. ಇತ್ತೀಚೆಗೆ ನಾನು ಕರಣ್‌ ಅವರ ಚಿತ್ರ ʻರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿʼ ಸಿನಿಮಾವನ್ನು 5 ರಿಂದ 6 ಬಾರಿ ನೋಡಿದ್ದೇನೆ. ನನ್ನ ಈ ನಟನೆಯಿಂದ ಕರಣ್‌ ಅವರಿಗೆ ನೋವಾಗಿದ್ದರೆ ದಯವಿಟ್ಟು ಕ್ಷಮೆ ಇರಲಿ. ನಿಮ್ಮನ್ನು ನೋವಿಸುವ ಉದ್ದೇಶ ನನ್ನದಾಗಿರಲಿಲ್ಲ. ನಾನು ಕೇವಲ ಪ್ರೇಕ್ಷಕರನ್ನು ರಂಜಿಸಲು ಬಯಸಿದ್ದೆʼʼಎಂದು ಹೇಳಿದ್ದಾರೆ.

ಕರಣ್‌ ಜೋಹರ್ ಅವರ ಕೊನೆಯ ಚಿತ್ರ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಕಮರ್ಷಿಯಲ್ ಹಿಟ್ ಆಗಿತ್ತು. ಪ್ರಸ್ತುತ ಅವರು ಹಲವಾರು ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ. ಮತ್ತೊಂದೆಡೆ, ಕರಣ್ ಜೋಹರ್ ಅವರ ಸಲ್ಮಾನ್ ಖಾನ್ ಅವರ ‘ದಿ ಬುಲ್’ ಶೀರ್ಷಿಕೆಯ ಚಿತ್ರ ಸೆಟ್ಟೇರಲು ಸಜ್ಜಾಗಿದೆ.

Exit mobile version