ಬೆಂಗಳೂರು : ಬಾಲಿವುಡ್ ನಟಿ ಬಿಪಾಶಾ ಬಸು (Bipasha Basu) ಶನಿವಾರ ಜನವರಿ 7 ಜನುಮದಿನದ ಸಂಭ್ರಮ. ಪತಿ ಕರಣ್ ಸಿಂಗ್ ಗ್ರೋವರ್ ಅವರು ಬಿಪಾಶಾ ಬಸು ಜತೆ ಇರುವ ಹಾಟ್ ಫೋಟೊವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ವಿಶ್ ಮಾಡಿದ್ದಾರೆ.
ಬಿಪಾಶಾ ಬಸು ಹೆಣ್ಣು ಮಗುವಿಗೆ ನವೆಂಬರ್ 12ರಂದು ಜನ್ಮ ನೀಡಿದ್ದರು. 30 ಏಪ್ರಿಲ್ 2016ರಲ್ಲಿ ಮದುವೆಯಾಗಿರುವ ಬಿಪಾಶಾ ಅವರು ಕಳೆದ ಆಗಸ್ಟ್‌ನಲ್ಲಿ ತಾವು ಗರ್ಭಿಣಿಯಾಗಿರುವ ಸಂಗತಿ ತಿಳಿಸಿದ್ದರು. ಇದೀಗ ಕರಣ್ ಸಿಂಗ್ ಗ್ರೋವರ್ ಹಾಟ್ ಫೋಟೊ ಹಂಚಿಕೊಂಡಿದ್ದು “ಜನ್ಮದಿನದ ಶುಭಾಶಯಗಳು ಮೈ ಲವ್. ನಿಮ್ಮ ಜೀವನದ ಪ್ರತಿ ಕ್ಷಣವೂ ಸಂತೋಷದಿಂದ ತುಂಬಿರಲಿ, ಪ್ರತಿ ದಿನವೂ ಬೆಳಕು ಪ್ರಕಾಶಮಾನವಾಗಿ ಬೆಳಗಲಿ, ನಿಮ್ಮ ಎಲ್ಲಾ ಕನಸುಗಳು ನನಸಾಗಲಿ. ಇದು ಅತ್ಯುತ್ತಮ ದಿನವಾಗಿದೆ. ನಾನು ಹೇಳುವುದಕ್ಕಿಂತ ಹೆಚ್ಚು ನಿನ್ನನ್ನು ಪ್ರೀತಿಸುತ್ತೇನೆ. ಜನ್ಮದಿನದ ಶುಭಾಶಯಗಳು ನನ್ನ ಪ್ರೀತಿಯ ಬೇಬಿ ಪ್ರಿಯೆ! ನೀನೇ ನನ್ನ ಸರ್ವಸ್ವ ʼʼಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ | Bipasha Basu | ಮುದ್ದು ಮಗಳ ಜತೆ ಫೋಟೊ ಹಂಚಿಕೊಂಡ ಬಾಲಿವುಡ್ ನಟಿ ಬಿಪಾಶಾ ಬಸು
ತಮ್ಮ ಮಗಳಿಗೆ ದೇವಿಯ ಆಶೀರ್ವಾದ ಎಂದು ಕರೆಯುವ ಬಿಪಾಶಾ ಮಗಳಿಗೆ ‘ದೇವಿ’ ಎಂದೂ ನಾಮಕರಣ ಮಾಡಿದ್ದಾರೆ. ಮಗುವಿನ ಹೆಸರು ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಈ ಮೊದಲು ತಮ್ಮ ಪತಿ ಕರಣ್ ಸಿಂಗ್ ಗ್ರೋವರ್ ಜತೆ ಬೇಬಿ ಬಂಪ್ ಫೋಟೊ ತೆಗೆಸಿಕೊಂಡು ಅದನ್ನು ಪೋಸ್ಟ್ ಮಾಡಿದ್ದರು. ಫೋಟೊ ಕುರಿತು ನೆಟ್ಟಿಗರಿಂದ ಸಾಕಷ್ಟು ಚರ್ಚೆಗಳೂ ಆಗಿದ್ದವು.
ಇದನ್ನೂ ಓದಿ | Bipasha Basu | ಹೆಣ್ಣು ಮಗುವಿಗೆ ಜನ್ಮ ನೀಡಿದ ಬಾಲಿವುಡ್ ನಟಿ ಬಿಪಾಶಾ ಬಸು