Site icon Vistara News

Prajwal Devaraj: ಕೋಣದ ಮೇಲೆ ಪ್ರಜ್ವಲ್ ಸವಾರಿ; ‘ಕರಾವಳಿ’ ಟೀಸರ್ ಔಟ್‌!

Karavali prajwal devaraj

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ (Prajwal Devaraj) ಕರಾವಳಿ ಭಾಗದ ಸಂಸ್ಕೃತಿ ಸಾರುವ ಮತ್ತೊಂದು ಸಿನಿಮಾ ಸಖತ್ ಸದ್ದು ಮಾಡುತ್ತಿದೆ. ‘ಕರಾವಳಿ’ ಹೆಸರಿನಲ್ಲೇ ಹೊಸ ಸಿನಿಮಾ ಅನೌನ್ಸ್ ಆಗಿದ್ದು ಸದ್ಯ ಚಿತ್ರದ ಫಸ್ಟ್ ಲುಕ್ ಟೀಸರ್ ರಿಲೀಸ್ ಆಗಿದೆ. ವಿಶೇಷ ಎಂದರೆ ಕರಾವಳಿ ಭಾಗದ ಬಗ್ಗೆಯೇ ಇರುವ ಈ ಸಿನಿಮಾದ ಟೀಸರ್ ಅ ಮಂಗಳೂರಿನಲ್ಲಿ ಅದ್ಧೂರಿಯಾಗಿ ಲಾಂಚ್ ಮಾಡಲಾಯಿತು. ಅಂದಹಾಗೆ ‘ಕರಾವಳಿ’ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ (Prajwal Devaraj) ನಾಯಕನಾಗಿ ನಟಿಸುತ್ತಿರುವ ಸಿನಿಮಾ. ಈ ಚಿತ್ರಕ್ಕೆ ಗುರುದತ್ ಗಾಣಿಗ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ‘ಅಂಬಿ ನಿಂಗೆ ವಯಸ್ಸಾಯ್ತೋ’ ಸಿನಿಮಾಗೆ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದ ಗುರುದತ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 2ನೇ ಸಿನಿಮಾ ಇದಾಗಿದೆ.

ಸದ್ಯ ರಿಲೀಸ್ ಆಗಿರುವ ಟೀಸರ್‌ನಲ್ಲಿ ಜಗತ್ತಿಗೆ ಎಂಟ್ರಿ ಕೊಡುವ ಎರಡು ಹೊಸ ಜೀವಗಳನ್ನು ನೋಡಬಹುದು. ತಾಯಿ ಮಗುವಿಗೆ ಜನ್ಮ ನೀಡುತ್ತಿರುವ ದೃಶ್ಯದ ಜತೆಗೆಯೇ ಕೋಣ ಕೂಡ ತನ್ನ ಮಗುವಿಗೆ ಜನ್ಮ ನೀಡುತ್ತಿದೆ. ಈ ಟೀಸರ್ ನೋಡುತ್ತಿದ್ದರೆ ಮನುಷ್ಯ ಮತ್ತು ಪ್ರಾಣಿ ನಡುವಿನ ಸಂಘರ್ಷದ ಬಗ್ಗೆ ಇರುವ ಸಿನಿಮಾ ಎನ್ನುವುದು ಮೇಲ್ನೋಟಕ್ಕೆ ಗೋತ್ತಾಗುತ್ತಿದೆ. ಬ್ಯಾಗ್ರೌಂಡ್‌ನಲ್ಲಿ ಬರುವ ಯಕ್ಷಗಾನದ ಧ್ವನಿ ಟೀಸರ್‌ನ ತೂಕವನ್ನು ಹೆಚ್ಚಿಸುವ ಜೊತೆಗೆ ಕುತೂಹಲ ದುಪ್ಪಟ್ಟು ಮಾಡಿದೆ.

ಕರಾವಳಿ ಎಂದಮೇಲೆ ಆ ಭಾಗದ ಸಂಸ್ಕೃತಿ, ದೈವ, ಯಕ್ಷಗಾನ ಮುಖ್ಯವಾಗಿ ಕಂಬಳ ಸೇರಿದಂತೆ ಅಲ್ಲಿನ ಆಚಾರ ವಿಚಾರ ಎಲ್ಲವನ್ನು ಈ ಸಿನಿಮಾದಲ್ಲಿ ನೋಡುವ ಕಾತರದಲ್ಲಿದ್ದಾರೆ ಅಭಿಮಾನಿಗಳು. ಇನ್ನು ಕರಾವಳಿ ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ. ಅಭಿಮನ್ಯೂ ಸದಾನಂದನ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

ಇದನ್ನೂ ಓದಿ; Prajwal Devaraj: ಸೋನಾ ಬೇಬಿ ಜತೆ ಹೆಜ್ಜೆ ಹಾಕಿದ ಪ್ರಜ್ವಲ್ ದೇವರಾಜ್!

ಸದ್ಯ ರಿಲೀಸ್ ಆಗಿರುವ ಟೀಸರ್ ಅಭಿಮಾನಿಗಳ ನಿರೀಕ್ಷೆಯನ್ನು ಹೆಚ್ಚಿಸಿದೆ. ಈ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಅವರ ಪಾತ್ರ ನೋಡಿದ್ರೆ ಇದುವರೆಗೂ ಅವರು ಮಾಡಿರುವ ಪಾತ್ರಗಳಲ್ಲಿಯೇ ಅತ್ಯಂತ ವಿಭಿನ್ನವಾಗಿದೆ. ಟೀಸರ್ ನೋಡ್ತಿದ್ರೆ ಪ್ರಜ್ವಲ್ 40ನೇ ಸಿನಿಮಾ ತುಂಬಾ ವಿಶೇಷವಾಗಿ ಮೂಡಿ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುದರಲ್ಲಿ ಎರಡು ಮಾತಿಲ್ಲ. ಇದೀಗ ಟೀಸರ್ ಮೂಲಕ ಸದ್ದು ಮಾಡುತ್ತಿರುವ ‘ಕರಾವಳಿ’ ಈ ತಿಂಗಳ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಪ್ರಾರಂಭದಲ್ಲಿ ಶೂಟಿಂಗ್‌ಗೆ ಹೊರಡಲಿದೆ. ಮಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ.

Exit mobile version