ಬೆಂಗಳೂರು: ನಟಿ ಕರೀನಾ ಕಪೂರ್ (Kareena Kapoor) ಖಾನ್ ಅವರ ಸಮಕಾಲೀನರಲ್ಲಿ ಅತ್ಯಂತ ಸ್ಟೈಲಿಶ್ ನಟಿಯರಲ್ಲಿ ಒಬ್ಬರಾಗಿದ್ದಾರೆ. ಬಿ-ಟೌನ್‌ನ ಫ್ಯಾಶನ್ ದಿವಾ ಎಂತಲೇ ಅವರನ್ನು ಕರೆಯಲಾಗುತ್ತದೆ. ಮುಂಬೈ ನಿವಾಸದ ಹೊರಗೆ ನಟಿ ಮನೆಯಿಂದ ಕಾರಿನಲ್ಲಿ ಹೊರಟಾಗ ಗುಲಾಬಿ ಬಣ್ಣದ ಟ್ಯಾಂಕ್ ಟಾಪ್ ಮತ್ತು ಡೆನಿಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಎಂದಿನಂತೆ ತನ್ನ ಕ್ಯಾಶುಯಲ್ ಲುಕ್‌ನಲ್ಲಿ ಕಾಣಿಸಿಕೊಂಡ ನಟಿಗೆ ನೆಟಿಜನ್‌ಗಳು ಕರೀನಾ ಅವರ ಬಾಡಿ ಶೇಮಿಂಗ್ ಮಾಡಿದ್ದಾರೆ. ನಟಿ ಒಳಉಡುಪುಗಳನ್ನು ಧರಿಸದಿದ್ದಕ್ಕಾಗಿ ನಟಿಯ ವಿರುದ್ಧ ಕೆಟ್ಟದ್ದಾಗಿ ಮನಬಂದಂತೆ ಕಮೆಂಟ್ ಮಾಡಿದ್ದಾರೆ.
ಕರೀನಾ ಅವರು ಮನೆಯಿಂದ ಹೊರಡುವಾಗ ಕಾಫಿ ಮಗ್ ಹಿಡಿದುಕೊಂಡಿದ್ದರು. ನಟಿ ಎಂದಿನಂತೆ ತನ್ನ ಕ್ಯಾಶುಯಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೂ, ನೆಟಿಜನ್‌ಗಳು ಕರೀನಾ ಅವರ ಬಗ್ಗೆ ಮನಬಂದಂತೆ ಕಮೆಂಟ್ ಮಾಡಿದ್ದಾರೆ. ನಟಿ ಬ್ರಾ ಧರಿಸಿಲ್ಲ ಎಂದು ಒಬ್ಬರು ಕಮೆಂಟ್ ಮಾಡಿದರೆ, ಇನ್ನೊಬ್ಬರು ನಟಿಗೆ ಬಾಡಿಶೇಮ್ ಮಾಡಿದ್ದಾರೆ.
ಇದನ್ನೂ ಓದಿ: Kareena Kapoor: 14 ವರ್ಷಗಳ ನಂತರ ಕರೀನಾ ಕಪೂರ್ ಅಭಿನಯದ ʻ3 ಈಡಿಯಟ್ಸ್‌ನʼ ಲುಕ್ ಟೆಸ್ಟ್ ಫೋಟೊಗಳು ವೈರಲ್!
ಕರೀನಾ ಇತ್ತೀಚೆಗೆ ಫ್ಯಾಶನ್ ವಿಷಯಕ್ಕೆ ಬಂದಾಗ ಟ್ರೆಂಡಿಯಾಗಿ ಇರಿಸಿಕೊಂಡಿದ್ದಾರೆ. ಕರೀನಾ ವಾಟ್ ವುಮೆನ್ ವಾಂಟ್ (What Women Want) ನಾಲ್ಕನೇ ಸೀಸನ್ ಚಿತ್ರೀಕರಣ ಮಾಡುತ್ತಿದ್ದಾರೆ. ಇತ್ತೀಚೆಗೆ, ಅವರು ನಿರ್ದೇಶಕ ಹನ್ಸಲ್ ಮೆಹ್ತಾ ಅವರ ಮುಂಬರುವ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದರು. ಕರೀನಾ ಮಾರ್ಚ್‌ನಲ್ಲಿ ‘ದಿ ಕ್ರ್ಯೂ’ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಲಿದ್ದಾರೆ, ಕೃತಿ ಸನೋನ್ ಮತ್ತು ಟಬು ಕೂಡ ನಟಿಸಿದ್ದಾರೆ.