Site icon Vistara News

Kareena Kapoor: ಕರೀನಾ ಕಪೂರ್‌ಗೆ ಪ್ರಭಾಸ್, ರಾಮ್ ಚರಣ್‌, ಅಲ್ಲು ಬೇಡ್ವಂತೆ; ಯಶ್‌ ಬೇಕಂತೆ!

Kareena Kapoor chooses Yash over south stars

ಬೆಂಗಳೂರು: ಕಾಫಿ ವಿತ್ ಕರಣ್ ಸೀಸನ್ 8ರ ಇತ್ತೀಚಿನ ಸಂಚಿಕೆಯಲ್ಲಿ (kareena kapoor) ಕರೀನಾ ಕಪೂರ್ ಮತ್ತು ಆಲಿಯಾ ಭಟ್ ಕಾಣಿಸಿಕೊಂಡರು. ಪ್ರಭಾಸ್, ರಾಮ್‌ಚರಣ್, ಅಲ್ಲು ಅರ್ಜುನ್, ವಿಜಯ್ ದೇವರಕೊಂಡ ಹಾಗೂ ಯಶ್ ಈ ಸೌತ್ ನಟರಲ್ಲಿ ಯಾರೊಟ್ಟಿಗೆ ನಟಿಸೋಕೆ ಇಷ್ಟ ಎನ್ನುವ ಪ್ರಶ್ನೆಗೆ ಕರೀನಾ, ಯಶ್ ಎಂದಿದ್ದಾರೆ.

ರ‍್ಯಾಪಿಡ್ ಫೈರ್ ರೌಂಡ್ ಸಮಯದಲ್ಲಿ ಕರಣ್ ಜೋಹರ್ ಅವರು ಕರೀನಾ ಅವರನ್ನು ಕೇಳಿದರು, “ನೀವು ಯಾವ ಸೌತ್‌ ಸ್ಟಾರ್‌ ನಟರ ಜತೆ ಜೋಡಿಯಾಗಲು ಬಯಸುತ್ತೀರಿ?” ಎಂದು ಪ್ರಭಾಸ್, ರಾಮ್ ಚರಣ್, ವಿಜಯ್ ದೇವರಕೊಂಡ, ಅಲ್ಲು ಅರ್ಜುನ್ ಮತ್ತು ಯಶ್ ಆಪ್ಷನ್‌ ಕೊಟ್ಟರು. ಆಗ ನಟಿ, ಯಶ್‌ ಉತ್ತರ ಕೊಟ್ಟಿದ್ದಾರೆ.

“ಎಲ್ಲರೂ ಸೂಪರ್. ಆದರೆ ನಾನು ‘KGF’ ಹುಡುಗಿ. ನನಗೆ ‘KGF’ ಸಿನಿಮಾ ಅಂದ್ರೆ ಬಹಳ ಇಷ್ಟ. ಹಾಗಾಗಿ ಯಶ್ ಜತೆ ನಟಿಸೋಕೆ ಇಷ್ಟ” ಎಂದು ಕರೀನಾ ವಿವರಿಸಿದ್ದಾರೆ. ನೀವು ‘KGF’ ಸಿನಿಮಾ ನೋಡಿದ್ದೀರಾ ಎನ್ನುವ ಕರಣ್ ಪ್ರಶ್ನೆಗೆ ಹೌದು ಎಂದು ಕರೀನಾ ತಲೆ ಆಡಿಸಿದ್ದಾರೆ.

ಸುಮಾರು ಒಂದೂವರೆ ವರ್ಷವಾದರೂ ಯಶ್‌ ತಮ್ಮ ಮುಂದಿನ ಸಿನಿಮಾದ ಬಗ್ಗೆ ಸಣ್ಣ ಸುಳಿವನ್ನೂ ಬಿಟ್ಟು ಕೊಟ್ಟಿಲ್ಲ. ಈ ಮಧ್ಯೆ ಅವರು ಬಾಲಿವುಡ್‌ ನಿರ್ದೇಶಕ ನಿತೇಶ್‌ ತಿವಾರಿ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ʼರಾಮಾಯಣʼ (Ramayana) ಚಿತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಅದಕ್ಕಾಗಿ ಯಶ್‌ ದಾಖಲೆಯ ಬರೋಬ್ಬರಿ 150 ಕೋಟಿ ರೂ. ಸಂಭಾವನೆ ಪಡಯುತ್ತಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ.

ಇದನ್ನೂ ಓದಿ: Kareena Kapoor: ಉರ್ಫಿ ತುಂಬ ಧೈರ್ಯಶಾಲಿ ಎಂದು ಹಾಡಿ ಹೊಗಳಿದ ಕರೀನಾ ಕಪೂರ್‌

ಮೂಲಗಳ ಪ್ರಕಾರ ರಣಬೀರ್‌ ಕಪೂರ್‌ ರಾಮನಾಗಿ, ದಕ್ಷಿಣ ಭಾರತದ ನಾಯಕಿ ಸಾಯಿ ಪಲ್ಲವಿ ಸೀತೆಯಾಗಿ ಅಭಿನಯಿಸಲಿದ್ದಾರೆ. ಇನ್ನೊಂದು ಮುಖ್ಯ ಪಾತ್ರ ರಾವಣನಾಗಿ ಯಶ್‌ ಅಬ್ಬರಿಸಲಿದ್ದಾರೆ ಎನ್ನಲಾಗುತ್ತಿದೆ. ಮುಂದಿನ ವರ್ಷದ ಫೆಬ್ರವರಿಯಲ್ಲಿ ಚಿತ್ರ ಸೆಟ್ಟೇರಲಿದೆ ಎನ್ನುವ ಮಾತು ಕೂಡ ಕೇಳಿ ಬಂದಿದೆ.

ಯಶ್‌ ಆಪ್ತರು ಹೇಳಿದ್ದೇನು?
ಯಶ್‌ ʼರಾಮಾಯಣʼ ಚಿತ್ರದ ಮೂಲಕ ಬಾಲಿವುಡ್‌ ಪ್ರವೇಶಿಸಲು ನಿರ್ಧರಿಸಿದ್ದಾರೆ ಎಂದು ಅವರ ಆಪ್ತರು ತಿಳಿಸಿದ್ದಾರೆ ಎನ್ನುತ್ತದೆ ಒಂದು ಮೂಲ. ಈ ಮಧ್ಯೆ ʼಕೆಜಿಎಫ್‌ʼ ಚಿತ್ರದ 3ನೇ ಭಾಗ ಆರಂಭವಾಗಲಿದೆ ಎನ್ನುವ ಸುದ್ದಿಯೂ ತೇಲಿ ಬಂದಿದೆ. ಯಶ್‌ ಈ ಎರಡೂ ಚಿತ್ರಗಳ ಭಾಗವಾಗಲಿದ್ದು, ಅದಕ್ಕಾಗಿ ಡೇಟ್‌ ಹೊಂದಿಸಲಿದ್ದಾರಂತೆ.

Exit mobile version