Site icon Vistara News

Kareena Kapoor : ʼಕರೀನಾ ನಿಂಗ್‌ ವಯಸ್ಸಾಯ್ತುʼ ಎನ್ನಲಾರಂಭಿಸಿದ ಟ್ರೋಲಿಗರು; ಕಾರಣವೇನು ಗೊತ್ತಾ?

#image_title

ಮುಂಬೈ: ಬಾಲಿವುಡ್‌ ಬೇಬೋ ಎಂದೇ ಪ್ರಸಿದ್ಧರಾಗಿದ್ದ ಕರೀನಾ ಕಪೂರ್‌ಗೆ (Kareena Kapoor) ಇದೀಗ ಟ್ರೋಲಿಗರು “ಕರೀನಾ ನಿಂಗ್‌ ವಯಸ್ಸಾಯ್ತು” ಎನ್ನಲಾರಂಭಿಸಿದ್ದಾರೆ. ಸೋಮವಾರ ಅವರು ಕಾಣಿಸಿಕೊಂಡ ಬಗೆಯು ಟ್ರೋಲಿಗರಿಗೆ ವಿಧ ವಿಧವಾಗಿ ಟ್ರೋಲ್‌ ಮಾಡುವುದಕ್ಕೆ ದಾರಿ ಮಾಡಿಕೊಟ್ಟಂತಾಗಿದೆ.

ಇದನ್ನೂ ಓದಿ: Kareena Kapoor | ಕಾಲೇಜಿನಲ್ಲಿ ಕರೀನಾ ಕಪೂರ್‌‌ಗೆ ಅಟೆಂಡೆನ್ಸ್‌ ಪ್ರಾಬ್ಲಮ್‌ ಇತ್ತು, ಅದನ್ನು ಕ್ಲಿಯರ್‌ ಮಾಡಿದ್ದು ನಟ ವಿವೇಕ್ ಒಬೆರಾಯ್ ಅಂತೆ
ಕರೀನಾ ಕಪೂರ್‌ ಸೋಮವಾರದಂದು ಬಾಲಿವುಡ್‌ನ ಮಾಧ್ಯಮದವರ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ. ಬಿಳಿ ಬಣ್ಣದ ಕುರ್ತಿ ಜತೆಗೆ ಬಿಳಿ ಬಣ್ಣದ ಪ್ಯಾಂಟ್‌ ಧರಿಸಿದ್ದ ಅವರು ನೋಡುವುದಕ್ಕೆ ಅತ್ಯಂತ ಸುಂದರವಾಗಿ ಕಂಡಿದ್ದಾರೆ. ಪೂರ್ತಿ ಬಿಳಿ ಬಣ್ಣದ ಉಡುಗೆಗೆ ಮ್ಯಾಚ್‌ ಆಗುವಂತೆ ಬೆಳ್ಳಿ ಬಣ್ಣದ ಬಳೆ ಹಾಗೂ ಓಲೆಗಳನ್ನು ಅವರು ತೊಟ್ಟಿದ್ದರು. ಹಾಗೆಯೇ ಬಿಳಿ ಬಣ್ಣದ ಶೂ ಅನ್ನೂ ಕೂಡ ಧರಿಸಿದ್ದರು.


ಕರೀನಾ ಅವರ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆಯೇ ಟ್ರೋಲಿಗರು ಟ್ರೋಲ್‌ ಮಾಡಲಾರಂಭಿಸಿದ್ದಾರೆ. “ಬಾಲಿವುಡ್‌ ಬೇಬೋಗೆ ವಯಸ್ಸಾಯ್ತು”, “ಕರೀನಾ ಅಜ್ಜಿಯಂತಾಗಿದ್ದಾರೆ”, “ಕರೀನಾ ಆಂಟಿ ರೀತಿ ಕಾಣಿಸುತ್ತಿದ್ದಾರೆ” ಎಂದು ಟ್ರೋಲಿಗರು ಟ್ರೋಲ್‌ ಮಾಡಲಾರಂಭಿಸಿದ್ದಾರೆ. ಕೆಲವು ಬಾಲಿವುಡ್‌ ಅಭಿಮಾನಿಗಳೂ ಕೂಡ ಟ್ರೋಲಿಗರ ಮಾತನ್ನು ನಿಜ ಎಂದು ಹೇಳಲಾರಂಭಿಸಿದ್ದಾರೆ.

ಇದನ್ನೂ ಓದಿ: Actor Saif Ali Khan | ಕರೀನಾ-ಸೈಫ್‌ ಅಲಿ ಖಾನ್‌ ಪುತ್ರ ತೈಮೂರ್‌ ಪ್ರೀಬರ್ತ್‌ಡೇ ಫೋಟೊ ವೈರಲ್‌!
ಕರೀನಾ ಈ ರೀತಿ ಟ್ರೋಲ್‌ಗೆ ಒಳಗಾಗುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಸಹ ಅನೇಕ ಬಾರಿ ಅವರ ಬಗ್ಗೆ ಹಲವು ರೀತಿಯಲ್ಲಿ ಟ್ರೋಲ್‌ ಮಾಡಲಾಗಿದೆ. ಆದರೆ ನಟಿ ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಸಿನಿಮಾಗಳಲ್ಲಿ ಬಿಜಿ ಆಗಿದ್ದಾರೆ. ಕೊನೆಯದಾಗಿ ಆಮಿರ್‌ ಖಾನ್‌ ಅವರ ʼಲಾಲ್‌ ಸಿಂಗ್‌ ಛಡ್ಡಾʼ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಕರೀನಾ ಈಗ ಸುಜೋಯ್‌ ಘೋಷ್‌ ಅವರ ʼಡಿವೋಷನ್‌ ಆಫ್‌ ಸಸ್ಪೆಕ್ಟ್‌ ಎಕ್ಸ್‌ʼ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

Exit mobile version