Site icon Vistara News

Kareena Kapoor: 14 ವರ್ಷಗಳ ನಂತರ ಕರೀನಾ ಕಪೂರ್‌ ಅಭಿನಯದ ʻ3 ಈಡಿಯಟ್ಸ್‌ನʼ ಲುಕ್ ಟೆಸ್ಟ್ ಫೋಟೊಗಳು ವೈರಲ್‌!

Kareena Kapoor's look test pics from 3 Idiots

ಬೆಂಗಳೂರು: ಕರೀನಾ ಕಪೂರ್ (Kareena Kapoor) ಅವರ ವೃತ್ತಿಜೀವನದಲ್ಲಿ ಅಭಿಮಾನಿಗಳಿಗೆ ಅತ್ಯಂತ ಮೆಚ್ಚುಗೆಯ ಅಭಿನಯದ ಸಿನಿಮಾ ಅಂದರೆ ರಾಜ್‌ಕುಮಾರ್ ಹಿರಾನಿ (Rajkumar Hirani) ಅವರ 3 ಈಡಿಯಟ್ಸ್‌ (3 idiots). ಆಮೀರ್‌ ಖಾನ್ ಅಭಿನಯದ ಈ ಚಿತ್ರದಲ್ಲಿ ಕರೀನಾ ವೈದ್ಯಕೀಯ ವಿದ್ಯಾರ್ಥಿನಿಯಾಗಿ ನಟಿಸಿದ್ದಾರೆ. ಇದೀಗ, ಚಿತ್ರ ಬಿಡುಗಡೆಯಾಗಿ ಸುಮಾರು 14 ವರ್ಷಗಳ ನಂತರ, ಕರೀನಾ ಕಪೂರ್ ಅವರ 3 ಈಡಿಯಟ್ಸ್‌ನ ಲುಕ್ ಟೆಸ್ಟ್ ಫೋಟೊಗಳು ಬಹಿರಂಗವಾಗಿವೆ. ವಿಧು ವಿನೋದ್ ಚೋಪ್ರಾ ಫೆ.25ರಂದು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೊಗಳನ್ನು ಬಿಡುಗಡೆ ಮಾಡಿದ್ದಾರೆ.

ಮೊದಲ ಫೋಟೊದಲ್ಲಿ ಕರೀನಾ ಹಸಿರು ಕುರ್ತಾದಲ್ಲಿ ಮತ್ತು ಪೋನಿಟೇಲ್‌ನಲ್ಲಿ ಕೂದಲನ್ನು ಕಟ್ಟಿದ್ದಾರೆ. ಮುಂದಿನ ಚಿತ್ರವು ಕೆಲವು ಆಭರಣಗಳು ಮತ್ತು ಕೆಂಪು ಬ್ಲೌಸ್‌ ಮತ್ತು ಕನ್ನಡಕಗಳೊಂದಿಗೆ ನೇರಳೆ ಬಣ್ಣದ ಸೀರೆಯಲ್ಲಿ ಮಹಾರಾಷ್ಟ್ರದ ಲುಕ್‌ನಲ್ಲಿ ಮಿಂಚಿದ್ದಾರೆ ಕರೀನಾ. ಮೂರನೇ ಫೋಟೊದಲ್ಲಿ ಕರೀನಾ ಕಾಲೇಜು ವಿದ್ಯಾರ್ಥಿನಿಯಾಗಿದ್ದು, ಗುಲಾಬಿ ಬಣ್ಣದ ಟಾಪ್, ನೀಲಿ ಸ್ಕಾರ್ಫ್ ಧರಿಸಿ ಹೆಗಲ ಮೇಲೆ ಬ್ಯಾಗ್ ಹಾಕಿಕೊಂಡಿದ್ದಾರೆ. ನಾಲ್ಕನೇ ಚಿತ್ರದಲ್ಲಿ ಕರೀನಾ ಬಾಬ್ ಕಟ್‌ನಲ್ಲಿ ಗುಲಾಬಿ ಮತ್ತು ಬಿಳಿ ಕುರ್ತಿ ಧರಿಸಿದ್ದಾರೆ. ಬಳಿಕ PKಗಾಗಿ ಅನುಷ್ಕಾ ಶರ್ಮಾಗೆ ಈ ಬಾಬ್‌ಕಟ್‌ ಲುಕ್ ಅನ್ನು ವರ್ಗಾಯಿಸಲಾಗಿದೆಯಂತೆ. ಅಂತಿಮವಾಗಿ, ಕರೀನಾ ಕಿತ್ತಳೆ ಬಣ್ಣದ ಟಾಪ್‌ನಲ್ಲಿ, ಕೆಂಪು ಹೆಲ್ಮೆಟ್ ಧರಿಸಿರುವ ಐಕಾನಿಕ್ ಲುಕ್‌ನಲ್ಲಿ ಕಂಡಿದ್ದಾರೆ.

ಇದನ್ನೂ ಓದಿ: Kareena Kapoor: ಒಟ್ಟಿಗೆ ಕಾಣಿಸಿಕೊಂಡ ರಣಬೀರ್-ಕರೀನಾ, ಸ್ಟನ್ನಿಂಗ್‌ ಲುಕ್‌ ಅಂದ್ರು ಫ್ಯಾನ್ಸ್‌!

ಕರೀನಾ ಕಪೂರ್‌ ಅಭಿನಯದ ʻ3 ಈಡಿಯಟ್ಸ್‌ನʼ ಲುಕ್ ಟೆಸ್ಟ್ ಫೋಟೊಗಳು

ಇದನ್ನೂ ಓದಿ: Viral News: ಬಹಳ ವಿಶೇಷವಾಗಿತ್ತು ಕರೀನಾ ಮಗನ ಬರ್ತ್ ಡೇ ಕೇಕ್; ಇಲ್ಲಿದೆ ನೋಡಿ ವಿಶೇಷ ಫೋಟೋ

ಫೋಟೊಗಳನ್ನು ನೋಡಿದ ಅಭಿಮಾನಿಗಳು ಕಮೆಂಟ್‌ ಮೂಲಕ “ಕಾಣದ ಕೆಲವು ಫೋಟೊಗಳನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು” ಎಂದು ಬರೆದಿದ್ದಾರೆ. ಕರೀನಾ ಚಿತ್ರದಲ್ಲಿ ವೈದ್ಯಕೀಯ ವಿದ್ಯಾರ್ಥಿಯಾಗಿದ್ದರು ಮತ್ತು ಎಂಜಿನಿಯರಿಂಗ್ ಕಾಲೇಜಿನ ಡೀನ್ ಬೋಮನ್ ಇರಾನಿಯ ಮೂವರು ಮಕ್ಕಳಲ್ಲಿ ಕಿರಿಯವರಾಗಿದ್ದರು.

Exit mobile version