Site icon Vistara News

Actress Leelavathi: ಅನ್ನ, ನೀರು ಬಿಟ್ಟಿದೆ ಲೀಲಾವತಿ ಅವರ ಪ್ರೀತಿಯ ಶ್ವಾನ; ಕಣ್ಣೀರಿಟ್ಟ ವಿನೋದ್‌!

Actress Leelavathi kariya Dog

ಬೆಂಗಳೂರು; ಹಿರಿಯ ನಟಿ ಲೀಲಾವತಿ (Actress Leelavathi) ಅವರ ಸೋಲದೇವನಹಳ್ಳಿ ನಿವಾಸದಲ್ಲಿ ನೀರವ ಆವರಿಸಿದೆ. ಅಮ್ಮನನ್ನು ಕಳೆದುಕೊಂಡ ಅವರ ಪ್ರೀತಿಯ ಶ್ವಾನ ‘ಕರಿಯ’ ಕಣ್ಣೀರನ್ನು ಹಾಕುತ್ತಿದೆ. ಮನೆಯ ಒಳಭಾಗಲ್ಲಿ ಇಟ್ಟಿರುವ ಲೀಲಾವತಿಯವರ ಪೋಟೊ ಮುಂದೆ ಕರಿಯ ವೇದನೆ ಅನುಭವಿಸುತ್ತಿರುವ ಫೋಟೊ ಇದೀಗ ವೈರಲ್‌ ಆಗಿದೆ. ರಾತ್ರಿಯಿಂದಲೇ ಮನೆಯಲ್ಲಿ ಅಮ್ಮ ಇಲ್ಲದಿರುವುದನ್ನು ಕಂಡು ಲೀಲಾವತಿಯವರು ಫೋಟೊ ಮುಂದೆ ಸುಮ್ಮನೆ ಕುಳಿತಿದ್ದ ಕರಿಯ ಇದೀಗ ಅಮ್ಮನ ಅಂತಿಮ ದರ್ಶನ ಪಡೆದಿದೆ.

ಕರಿಯ ಅನೇಕ ವರ್ಷಗಳಿಂದ ಲೀಲಾವತಿಯವರ ಅಚ್ಚುಮೆಚ್ಚಿನ ಶ್ವಾನ. ಎರಡು ಕಾಲುಗಳಲ್ಲಿ ಬಹುತೇಕ ಸ್ವಾಧೀನ ಕಳೆದುಕೊಂಡಿದ್ದರೂ ಲೀಲಾವತಿಯವರ ಫೋಟೊ ಮುಂದೆ ಕರಿಯ ರಾತ್ರಿಯೇ ಆಹಾರ ಬಿಟ್ಟು ಕುಳಿತಿತ್ತು. ಈ ದೃಶ್ಯ ಲೀಲಾವತಿ ಅವರ ಅಭಿಮಾನಿಗಳಿಗೂ ಕಣ್ಣೀರು ತರಿಸಿತ್ತು. ಇದೀಗ ಶ್ವಾನ ಅಮ್ಮನ ಅಂತಿಮ ದರ್ಶನ ಪಡೆದಿದೆ. ಈ ವೇಳೆ ವಿನೋದ್‌ ರಾಜ್‌ ಅವರು ಕಣ್ಣೀರಿಟ್ಟರು.

ಇದನ್ನೂ ಓದಿ: Actress Leelavathi: ಲೀಲಾವತಿ ಅಂತಿಮ ದರ್ಶನ ಪಡೆದ ಸೊಸೆ, ಮೊಮ್ಮಗ

ಅಂತ್ಯಕ್ರಿಯೆ ಎಲ್ಲಿ?
ಮಧ್ಯಾಹ್ನ 2 ಗಂಟೆಯ ವರೆಗೂ ರವೀಂದ್ರ ಕಲಾಕ್ಷೇತ್ರದಲ್ಲಿ ಚಿತ್ರರಂಗದ ಕಲಾವಿದರು ಹಾಗೂ ರಾಜಕೀಯ ಮುಖಂಡರು ಲೀಲಾವತಿ ಅವರ ಅಂತಿಮ ದರ್ಶನ ಪಡೆದುಕೊಳ್ಳಲಿದ್ದಾರೆ. 2 ಗಂಟೆಯ ನಂತರ ಸೋಲದೇವನಹಳ್ಳಿಯ ತೋಟದ ಮನೆಗೆ ಲೀಲಾವತಿಯವರ ಪಾರ್ಥಿವ ಶರೀರವನ್ನು ಕೊಂಡೊಯ್ದು ಅಲ್ಲಿ ಅಂತಿಮ ವಿಧಿವಿಧಾನಗಳನ್ನು ಪೂರೈಸಿ ಕುಟುಂಬಸ್ಥರು ಅಂತ್ಯ ಸಂಸ್ಕಾರ ಮಾಡಲಿದ್ದಾರೆ.

ಬೆಳಿಗ್ಗೆ 11 ಗಂಟೆಗೆ ಸಿಎಂ ಸಿದ್ದರಾಮಯ್ಯ ಅಂತಿಮ ನಮನ ಸಲ್ಲಿಸಲಿದ್ದಾರೆ. ಸೋಲದೇವನಹಳ್ಳಿಯಲ್ಲಿರುವ ಫಾರ್ಮ್​​ಹೌಸ್​ನಲ್ಲಿ ಬಂಟರ ಸಂಪ್ರದಾಯದಂತೆ ಮಧ್ಯಾಹ್ನ 3:30ಕ್ಕೆ ಅಂತಿಮ ಸಂಸ್ಕಾರ ನಡೆಯಲಿದೆ.

ನೆಲಮಂಗಲದ ಅತೀ ದೊಡ್ಡ ಕ್ರೀಡಾಂಗಣವಾದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿತ್ತು.

Exit mobile version