Site icon Vistara News

Karnataka Bandh: ನಾಳೆ ಸಂಜೆ ಚಿತ್ರಮಂದಿರಗಳು ಓಪನ್‌, ಬೆಳಗ್ಗೆ ಇರಲ್ಲ; ಕಾವೇರಿ ಹೋರಾಟಕ್ಕೆ ಚಿತ್ರರಂಗ ಸಾಥ್‌!

NM suresh

ಬೆಂಗಳೂರು: ಸೆ.29ರಂದು ಕರ್ನಾಟಕ ಬಂದ್ (Karnataka Band) ಹೋರಾಟಕ್ಕೆ ಕನ್ನಡ ಚಿತ್ರರಂಗ ಬೆಂಬಲ ನೀಡಿದೆ. ಬೆಳಗ್ಗೆಯಿಂದ ಚಿತ್ರಮಂದಿರಗಳು ಮುಚ್ಚಲಿದ್ದು, ಸಂಜೆ ಹೋರಾಟ ಮುಗಿದ ಬಳಿಕ ಮತ್ತೆ ಚಿತ್ರ ಪ್ರದರ್ಶನಗಳನ್ನು ಆರಂಭಿಸಲಿವೆ ಎಂದು ಕರ್ನಾಟಕ ಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ.ಚಂದ್ರಶೇಖರ್ (KV Chandrasekhar) ತಿಳಿಸಿದ್ದಾರೆ. ಸೆ.29ರಂದು 10 ಗಂಟೆಗೆ ಗುರುರಾಜ ಕಲ್ಯಾಣ ಮಂಟಪದಲ್ಲಿ ಪ್ರತ್ಯೇಕ ಹೋರಾಟವಿದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್ ​ಎಂ ಸುರೇಶ್ ಹೇಳಿದ್ದಾರೆ.

ʻʻನಾಳೆಯ ಕರ್ನಾಟಕ ಬಂದ್‌ಗೆ ನಮ್ಮ ಚಿತ್ರರಂಗದ ಬೆಂಬಲ ಇದೆ. ನಾಳೆ ಶಿವಣ್ಣ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ. ಸೆ.29ರಂದು 10 ಗಂಟೆಗೆ ಗುರುರಾಜ ಕಲ್ಯಾಣ ಮಂಟಪದಲ್ಲಿ ಪ್ರತ್ಯೇಕ ಹೋರಾಟವಿದೆ. ಅಲ್ಲಿಯೇ ಚಿತ್ರರಂಗದ ನಟ ನಟಿಯರು ಬರುತ್ತಾರೆ. ಶಿವಣ್ಣ, ರವಿಚಂದ್ರನ್, ಪ್ರೇಮ್, ಧ್ರುವಸರ್ಜಾ, ವಿಜಯ್ ರಾಘವೇಂದ್ರ, ಶ್ರೀಮುರುಳಿ ಸೇರಿದಂತೆ ಹಲವು ಕಲಾವಿದರಿಗೂ ತಿಳಿಸಿದ್ದೇವೆ. ನಾಳೆ ನಡೆಯುವ ಪ್ರತಿಭಟನೆಯನ್ನು ಹಬ್ಬದ ರೀತಿಯಲ್ಲಿ ಮಾಡಲಾಗುತ್ತದೆ. ನಮ್ಮದು ರೈತರ ಪರ ಹೋರಾಟ. ಬಂದ್‌ಗೆ ಇಡೀ ಚಿತ್ರೋದ್ಯಮದ ಬೆಂಬಲವಿದೆʼʼ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್ ​ಎಂ ಸುರೇಶ್ ಹೇಳಿದ್ದಾರೆ.

ಇದನ್ನೂ ಓದಿ: Karnataka Bandh : ನಾಳೆ ಪ್ರತಿಭಟನೆಗೆ ಅಡ್ಡಿಯಿಲ್ಲ, ಬಂದ್‌ಗೆ ಮಾಡೋ ಹಾಗಿಲ್ಲ; ಡಿ.ಕೆ. ಶಿವಕುಮಾರ್ ವಾರ್ನಿಂಗ್

“ಕರ್ನಾಟಕ ಬಂದ್‌’ಗೆ ರಾಜ್ಯದ ಚಿತ್ರಮಂದಿರಗಳ ಬೆಂಬಲ

ʻʻʻದಿನಾಂಕ 29-9-2023 ಶುಕ್ರವಾರ ನಡೆಯಲಿರುವ ‘ಕರ್ನಾಟಕ ಬಂದ್‌” ಗೆ ರಾಜ್ಯದ ಎಲ್ಲಾ ಚಿತ್ರಮಂದಿರಗಳು ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತಾ ಸಂಜೆಯವರೆಗೆ ಪ್ರದರ್ಶನಗಳನ್ನು ಸ್ಥಗಿತಗೊಳಿಸಿ ಸಂಜೆಯ ನಂತರ ಪ್ರದರ್ಶನಗಳು ಮಾಮೂಲಿನಂತೆ ಪ್ರದರ್ಶನಗೊಳ್ಳುತ್ತವೆ. “ಕಾವೇರಿ ನಮ್ಮದು” ರಾಜ್ಯದ ಭಾಷೆ, ನೀರು ಮತ್ತು ನೆಲದ ವಿಷಯದಲ್ಲಿ ಯಾವುದೇ ರಾಜಿ ಇಲ್ಲದೆ ಸರ್ಕಾರ, ರೈತರ ಮತ್ತು ಹೋರಾಟಗಾರರ ಬೆಂಬಲಕ್ಕೆ ಸದಾ ಸಿದ್ದರಿದ್ದೇವೆʼʼ. ಎಂದು ಕರ್ನಾಟಕ ಚಿತ್ರ ಪ್ರದರ್ಶಕರ ವಲಯದ ಅಧ್ಯಕ್ಷ ಕೆ ವಿ ಚಂದ್ರಶೇಖರ್ ಸ್ಪಷ್ಟನೆ ನೀಡಿದ್ದಾರೆ.

ನಿಖಿಲ್‌ ಕುಮಾರಸ್ವಾಮಿ ಭೇಟಿ ಮಾಡಿದ ವಾಣಿಜ್ಯ ಮಂಡಳಿ ಅಧ್ಯಕ್ಷರು

ನಾಳೆ ರಾಜ್ಯಾದ್ಯಂತ ನಡೆಯಲಿರುವ ಕರ್ನಾಟಕ ಬಂದ್ ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಬೆಂಬಲ ಸೂಚಿಸಿದ್ದು ನಿಖಿಲ್ ಕುಮಾರಸ್ವಾಮಿ (Nikhil Kumar) ಅವರನ್ನು ಭೇಟಿ ಮಾಡಿ, ಬಂದ್‌ನಲ್ಲಿ ಭಾಗಿಯಾಗುವಂತೆ ವಾಣಿಜ್ಯ ಮಂಡಳಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಚರ್ಚಿಸಿದ್ದಾರೆ. ನೂತನ ಅಧ್ಯಕ್ಷರು ಹಾಗೂ ಕಾರ್ಯಕರ್ತರಿಂದ ನಿಖಿಲ್‌ ಅವರಿಗೆ ಮನವಿ ಮಾಡಿದ್ದಾರೆ. ಶಿವಣ್ಣ ಅವರಿಗೆ ಬೆಂಬಲ ಸೂಚಿಸಲು ಮಾತುಕತೆ ಬಳಿಕ ನಟ ನಿಖಿಲ್ ಅವರನ್ನು ಭೇಟಿ ಮಾಡಿದ್ದಾರೆ.

Exit mobile version