Site icon Vistara News

Karnataka Bandh: ಸ್ಯಾಂಡಲ್‌ವುಡ್‌ ಒಗ್ಗಟ್ಟಿನ ಮಂತ್ರ; ದರ್ಶನ್‌, ಶಿವಣ್ಣ ಸೇರಿ ನಟ ನಟಿಯರು ಸಾಥ್‌!

sandalwood stars

ಬೆಂಗಳೂರು: ಕನ್ನಡದ ಪರ ಹೋರಾಟಗಾರರು ಕರ್ನಾಟಕ ಬಂದ್‌ಗೆ (Karnataka Bandh) ಕರೆ ನೀಡಿದ್ದು, ಸ್ಯಾಂಡಲ್‌ವುಡ್ ನಟ-ನಟಿಯರು ಸಾಥ್‌ ನೀಡಿದ್ದಾರೆ. ಈ ವೇಳೆ ಸ್ಯಾಂಡಲ್‌ವುಡ್‌ ನಟ ನಟಿಯರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಈ ಕಾವೇರಿ ಹೋರಾಟ ರೈತರ ಜೀವನಾಡಿಗಾಗಿ ಮಾಡುತ್ತಿರುವ ಹೋರಾಟವಾಗಿದ್ದು, ನಮ್ಮೆಲ್ಲರಿಗೂ ಜೀವನಾಡಿಯಾಗಿದೆ. ನಮ್ಮ ಕಾವೇರಿ ಸಮಸ್ಯೆ ಇಂದಿಗೂ ಬಗೆಹರಿಯುತ್ತಿಲ್ಲ. ಇದು ದೊಡ್ಡವರು ತೀರ್ಮಾನ ಮಾಡಬೇಕುʼʼ ಎಂದು ಶ್ರೀನಾಥ್ ಕೇಳಿಕೊಂಡಿದ್ದಾರೆ.

ಪೂಜಾ ಗಾಂಧಿ ಮಾತನಾಡಿ ʻʻಎರಡು ರಾಜ್ಯದ ರೈತರಿಗೂ ಒಳ್ಳೆದಾಗಲಿ. ಕನ್ನಡಿಗರಿಗೆ ತುಂಬ ಸಹನೆಯಿದೆ. ಅದನ್ನು ಪರೀಕ್ಷಿಸಬೇಡಿ. ಭುವನೇಶ್ವರಿ ಆಶೀರ್ವಾದದಿಂದ ಜಾಸ್ತಿ ಮಳೆ ಬರಲಿ. ನಮ್ಮ ನೀರು ನಮ್ಮ ಹಕ್ಕುʼʼಎಂದರು. ವಿಜಯ ರಾಘವೇಂದ್ರ ಮಾತನಾಡಿ ʻʻಇದು ಸಹಜವಾಗಿ ಮಳೆಯಿಂದ ಸಿಗುವ ಪರಿಹಾರ. ಎರಡೂ ಸರ್ಕಾರಗಳೂ ಒಮ್ಮತದಿಂದ ಪರಿಹಾರ ಮಾಡಿಕೊಳ್ಳಬೇಕುʼ ಎಂದರು. ನಟಿ ಶ್ರುತಿ ಮಾತನಾಡಿ ʻʻಕಾವೇರಿ ನಮ್ಮವಳು. ನಮ್ಮ ರೈತರ ಕಷ್ಟಕ್ಕೆ ನಾವೆಲ್ಲ ಆಗೋಣ. ನಾವೆಲ್ಲ ಕನ್ನಡಿಗರು ಕನ್ನಡಕ್ಕಾಗಿ ಬದುಕಿದ್ದೇವೆ. ನಾವೆಲ್ಲರೂ ಪ್ರಕೃತಿಯನ್ನು ಜವಾಬ್ದಾರಿಯಿಂದ ನೋಡಿಕೊಂಡರೆ ಈ ಸಮಸ್ಯೆ ಬರುವುದಿಲ್ಲ. ಇವತ್ತಿನ ಪ್ರತಿಭಟನೆ ಒಗ್ಗಟ್ಟಿನ ಪ್ರತಿಭಟನೆ. ರಾಜ್ಯದಲ್ಲಿ ಎಲ್ಲರೂ ಪ್ರತಿಭಟನೆಯಲ್ಲಿ ಭಾಗವಹಿಸಬೇಕುʼʼ ಎಂದರು.

ಇದನ್ನೂ ಓದಿ: Karnataka Bandh : ಟೌನ್‌ಹಾಲ್‌ ಬಳಿ ಪ್ರತಿಭಟನೆ ಹತ್ತಿಕ್ಕಿದ ಪೊಲೀಸರು; ಹೋರಾಟಗಾರರು ಫ್ರೀಡಂ ಪಾರ್ಕ್‌ಗೆ

ಹಿರಿಯ ನಟ ಶ್ರೀನಾಥ್‌ ಮಾತನಾಡಿ, ʻʻನಮಗೆ ನೀರಿಲ್ಲ, ತಮಿಳುನಾಡಿಗೆ ನೀರು ಬಿಡೋದು ಹೇಗೆ? ರೈತರು ಇಲ್ಲದೇ ಹೋದರೆ ನಾವಿಲ್ಲ. ಆ ರೈತರು ಉಳಿಸೋದಕ್ಕಾಗಿ ಹೋರಾಟ ಮಾಡಬೇಕು. ಇವತ್ತು ಕಾವೇರಿ ನದಿ ಉತ್ತರ ಕರ್ನಾಟಕದಲ್ಲಿ ಇಲ್ಲದೇ ಹೋದರೂ, ತುಂಬು ಮನಸ್ಸಿನಿಂದ ಈ ಹೋರಾಟಕ್ಕೆ ಅವರೆಲ್ಲರೂ ಸಾಥ್ ನೀಡಿದ್ದಾರೆ. ಈ ಸಮಯದಲ್ಲಿ ಡಾ.ರಾಜ್‌ಕುಮಾರ್ ಅವರನ್ನ ನೆನಪು ಸ್ಮರಿಸುತ್ತೇನೆ. ಅಂದು ಕಾವೇರಿ ಸಮಸ್ಯೆಯಿದ್ದಾಗ ಮುನ್ನುಗ್ಗಿ ಡಾ.ರಾಜ್ ಸಾಥ್ ನೀಡಿದ್ದರುʼʼ ಎಂದರು.

ನಟ ವಸಿಷ್ಠ ಸಿಂಹ ಮಾತನಾಡಿ ʻʻಕಾವೇರಿ ವಿಷಯಕ್ಕೆ ಬೇಗ ಅಂತ್ಯ ಸಿಗಲಿ. ಹೋರಾಟದಲ್ಲಿ ಯಾರು ಬಂದರೂ ಬಂದಿಲ್ಲ ಎನ್ನುವ ಪ್ರಶ್ನೆ ಬೇಡ. ಕಾವೇರಿ ವಿಚಾರ ಅಂತ್ಯವಾಗುವರೆಗೆ ಜತೆಗೆ ಇರುತ್ತೇವೆʼʼಎಂದರು. ದುನಿಯಾ ವಿಜಯ್‌ ಮಾತನಾಡಿ ʻʻಕನ್ನಡ ನಾಡು ನುಡಿ ಬಗ್ಗೆ ನಾವು ಯಾವಾಗಲೂ ಜತೆ ಇರುತ್ತೇವೆ. ಕಾವೇರಿ ವಿಷಯಕ್ಕೆ ಮೂರು ಪಕ್ಷಗಳು ಒಂದಾಗಿ ತಾರ್ಕಿಕ ಅಂತ್ಯ ಕಾಣಿಸಬೇಕು. ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕುʼʼಎಂದರು.

Exit mobile version