Site icon Vistara News

Ashok Kashyap | ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಅಶೋಕ್‌ ಕಶ್ಯಪ್‌ಗೆ ಬ್ಲಡ್ ಕ್ಯಾನ್ಸರ್!

Ashok Kashyap

ಬೆಂಗಳೂರು : ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಅಶೋಕ್ ಕಶ್ಯಪ್ (Ashok Kashyap) ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಟ ಅವಿನಾಶ್ ಅವರಿಗೆ ಶುಕ್ರವಾರ ನವೆಂಬರ್‌ 18 ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಡೆಯಿಂದ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದೆ ವೇಳೆ ಅಶೋಕ್ ಕಶ್ಯಪ್‌ರವರು ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿರುವುದರ ಬಗ್ಗೆ ನಟ ಸುಂದರ್‌ರಾಜ್‌ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.

ʻʻಪ್ರತಿ ಬಾರಿ ಒಂದು ಇಂಜೆಕ್ಷನ್‌ಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡುವ ದುರ್ವಿಧಿ ಅಶೋಕ್ ಕಶ್ಯಪ್‌ ಕುಟುಂಬಕ್ಕೆ ಬಂದಿದೆ. ಒಳ್ಳೆ ಮನುಷ್ಯನಿಗೆ ಆರೋಗ್ಯ ಭಾಗ್ಯ ಇಲ್ಲʼʼಎಂದು ಸುಂದರ್‌ ರಾಜ್‌ ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ .

ಇದನ್ನೂ ಓದಿ | ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ ಅಶೋಕ್ ಕಶ್ಯಪ್ ಪದಗ್ರಹಣ

ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಅಶೋಕ್ ಕಶ್ಯಪ್ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಟ ಅವಿನಾಶ್ ಅವರಿಗೆ ವಾಣಿಜ್ಯ ಮಂಡಳಿ ಸನ್ಮಾನ ಮಾಡಿದ್ದಾರೆ. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅಶೋಕ್ ಕಶ್ಯಪ್ ʻʻನನಗೆ ಕನ್ನಡ ಚಿತ್ರರಂಗವನ್ನು ಹಾಲಿವುಡ್‌ವರೆಗೂ ತೆಗೆದುಕೊಂಡು ಹೋಗಬೇಕು ಎನ್ನುವ ಕನಸಿತ್ತು. ಕರ್ನಾಟಕ ಸರ್ಕಾರ ನನಗೆ ಜವಾಬ್ದಾರಿ ಕೊಟ್ಟಿದೆ. ನಿರ್ದೇಶಕನಾಗಿ, ಸಿನಿಮಾಟೋಗ್ರಾಫರ್ ಆಗಿ ಕನ್ನಡ ಚಿತ್ರರಂಗ ಹೇಗಿರಬೇಕು ಎನ್ನುವ ಆಲೋಚನೆ ನನಗೆ ಇದೆ. ನಾನು ಇನ್ನೂ 3 ದಿನ ಇರುತ್ತಿನೋ ಅಥವಾ 3 ತಿಂಗಳು ಇರುತ್ತೀನೋ ಗೊತ್ತಿಲ್ಲ. ಪ್ರತಿ ವರ್ಷ ಬೆಂಗಳೂರು ಇಂಟರ್‌ನ್ಯಾಷನಲ್‌ ಫಿಲ್ಮ್ ಫೆಸ್ಟ್ ಮಾರ್ಚ್ 3ಕ್ಕೆ ಆಗಬೇಕು. ಈ ಕುರಿತು ಸಿಎಂ ಅವರೊಂದಿಗೆ ಚರ್ಚೆ ನಡೆದಿತ್ತು. ವಿಕೆ ಮೂರ್ತಿ ಅವರಿಗೆ 100ನೇ ವರ್ಷದ ಶ್ರದ್ಧಾಂಜಲಿ ಸನ್ಮಾನ ಮಾಡಬೇಕು ಎನ್ನುವ ಆಸೆ ನನಗೆ ಇದೆ. ವಾಣಿಜ್ಯ ಮಂಡಳಿ ಈ ಆಸೆಯನ್ನು ಪೂರೈಸಬೇಕುʼʼ ಎಂದು ಹೇಳಿಕೆ ನೀಡಿದರು.

50ಕ್ಕೂ ಹೆಚ್ಚು ಚಿತ್ರಗಳಿಗೆ ಸಿನಿಮಾಟೋಗ್ರಫಿ ಮಾಡಿರುವ ಅಶೋಕ್‌ ಅವರು ಕನ್ನಡದ ʻಉಲ್ಟಾ ಪಲ್ಟಾʼ ಚಿತ್ರಕ್ಕೆ 2 ಬಾರಿ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ಈ ಹಿಂದೆ ಅಶೋಕ್‌ ಅವರು ಕರ್ನಾಟಕ ಚಲನಚಿತ್ರ ಅಕಾಡಮಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ʻತಲೆದಂಡʼ ಸಿನಿಮಾಗೆ ಅಶೋಕ್‌ ಕಶ್ಯಪ್‌ ಅವರು ಛಾಯಾಗ್ರಹಣ ಮಾಡಿದ್ದರು.

ಇದನ್ನೂ ಓದಿ | Ashok Kashyap | ಛಾಯಾಗ್ರಾಹಕ ಅಶೋಕ್‌ ಕಶ್ಯಪ್‌ ಕರ್ನಾಟಕ ಚಲನಚಿತ್ರ ಅಕಾಡೆಮಿ ನೂತನ ಅಧ್ಯಕ್ಷ

Exit mobile version