Site icon Vistara News

Karthik-Namratha: ಹಸೆಮಣೆ ಮೇಲೆ ಕಾರ್ತಿಕ್‌-ನಮ್ರತಾ: ಸಂಗೀತಾಗೆ `ಕರಿಮಣಿ ಮಾಲೀಕ’ ಯಾರು?

Karthik Mahesh And Namratha Gowda in wedding dress For Ad Shoot

ಬೆಂಗಳೂರು: ಕೆಲವು ಜೋಡಿಗಳು ʻಬಿಗ್​ಬಾಸ್​ʼ ಮನೆಗೆ ಹೋಗಿ ಪ್ರೇಮಿಗಳಾಗಿ ಹೊರಬಂದಿದ್ದೂ ಎಷ್ಟೋ ಉದಾಹರಣೆಗಳು ಇವೆ. ಬಿಗ್‌ ಬಾಸ್‌ ಸೀಸನ್‌ 10ರಲ್ಲಿಯೂ ನಮ್ರತಾ ಹಾಗೂ ಕಾರ್ತಿಕ್‌ (Karthik-Namratha) ಹೆಸರುಗಳು ಈ ಪಟ್ಟಿಯಲ್ಲಿ ಇತ್ತು. ಕಾರ್ತಿಕ್ ಹಾಗೂ ನಮ್ರತಾ ಬಿಗ್​ಬಾಸ್​ನ ಕೊನೆಯ ಕೆಲ ವಾರಗಳಲ್ಲಿ ತುಂಬ ಕ್ಲೋಸ್‌ ಕೂಡ ಆಗಿದ್ದರು. ಬಿಗ್‌ ಬಾಸ್‌ ಮನೆಗೆ ಮತ್ತೆ ಸ್ನೇಹಿತ್‌ ಎಂಟ್ರಿ ಕೊಟ್ಟಾಗ ಕಾರ್ತಿಕ್ ಹಾಗೂ ನಮ್ರತಾ ತಮಾಷೆಗೆ ಫ್ಲರ್ಟ್‌ ಮಾಡುತ್ತಿರುವ ವಿಷಯ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿರುವುದನ್ನ ನಮ್ರತಾಗೆ ತಿಳಿಸಿದ್ದರು. ಇದಾದ ಬಳಿಕ ಸೋಷಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಕೆಟ್ಟ ಅಭಿಪ್ರಾಯ ಇದೆ ಎಂದು ತಿಳಿದ ಮೇಲೆ ಕಾರ್ತಿಕ್‌-ನಮ್ರತಾ ದೂರಾದರು. ಆದರೀಗ ನಮ್ರತಾ ಹಾಗೂ ಕಾರ್ತಿಕ್ ಮಹೇಶ್ ಹಸೆಮಣೆ ಏರಿದ್ದಾರೆ. ಇಬ್ಬರೂ ಮದುವೆ ಆಗಿ ಬಿಟ್ಟಾರಾ? ಎಂದು ಫ್ಯಾನ್ಸ್‌ ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ.

ಇಬ್ಬರೂ ಹಸೆಮಣೆ ಏರಿರುವುದು ಜಾಹೀರಾತೊಂದರ ಚಿತ್ರೀಕರಣಕ್ಕಾಗಿ. ನಮ್ರತಾ ಹಾಗೂ ಕಾರ್ತಿಕ್ ಮಹೇಶ್ ಅವರುಗಳು ಚಿನ್ನಾಭರಣದ ಜಾಹೀರಾತು ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಜಾಹೀರಾತು ಚಿತ್ರೀಕರಣದ ವಿಡಿಯೊ ಹಾಗೂ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ.

ಇದನ್ನೂ ಓದಿ: Namratha Gowda: ವೃದ್ಧಾಶ್ರಮಕ್ಕೆ ನಮ್ರತಾ ಪೋಷಕರು ಸಹಾಯ ಹಸ್ತ; ವೋಟ್‌ಗೋಸ್ಕರ ಡ್ರಾಮ ಅಂದ್ರು ನೆಟ್ಟಿಗರು!

ವರದಿಯಂತೆ ಉದ್ಯಮಿ, ರಾಜಕಾರಣಿ ಟಿಎ ಶರವಣ ಅವರ ಚಿನ್ನದ ಮಳಿಗೆ ಶ್ರೀ ಸಾಯಿ ಗೋಲ್ಡ್ ಪ್ಯಾಲೆಸ್​ ಬ್ರ್ಯಾಂಡ್​ಗಾಗಿ ಕಾರ್ತಿಕ್ ಹಾಗೂ ನಮ್ರತಾ ಒಟ್ಟಿಗೆ ಈ ಜಾಹೀರಾತು ಚಿತ್ರೀಕರಣ ಮಾಡಿದ್ದಾರೆ. ವಧು-ವರರಂತೆ ಬಟ್ಟೆ ತೊಟ್ಟು ಪೋಸ್‌ ನೀಡಿದ್ದಾರೆ. ಟಿಎ ಶರವಣ ಸಹ ಜಾಹೀರಾತು ಚಿತ್ರೀಕರಣದಲ್ಲಿ ಭಾಗಿಯಾಗಿದ್ದು, ವಧು-ವರರಿಗೆ ಆಶೀರ್ವಾದ ಮಾಡುವ ದೃಶ್ಯದಲ್ಲಿ ಹಿರಿಯರಾಗಿ ಅವರು ಕಾಣಿಸಿಕೊಂಡಿದ್ದಾರೆ.

ಇದೀಗ ಈ ಫೋಟೊಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ನಿಜಜೀವನದಲ್ಲಿಯೂ ನೀವಿಬ್ಬರೂ ಮದುವೆಯಾಗಿ ಎಂದು ಫ್ಯಾನ್ಸ್‌ ಕಮೆಂಟ್‌ ಮಾಡುತ್ತಿದ್ದಾರೆ. ಕಾರ್ತಿಕ್ ಹಾಗೂ ನಮ್ರತಾ ಮದುವೆ ಲುಕ್​ನಲ್ಲಿರುವ ಫೋಟೊಗಳಿಗೆ ಲೈಕ್​ಗಳ ಸುರಿಮಳೆಯಾಗಿದೆ. ಜೋಡಿ ಸೂಪರ್​ ಎಂದು ಅನೇಕರು ಕಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಕಾರ್ತಿಕ್​ , ನಟಿ ಸಂಗೀತಾ ಶೃಂಗೇರಿಗೆ ಕೈ ಕೊಟ್ಟೇ ಬಿಟ್ರಾ?ಸಂಗೀತಾಗೆ ಕರಿಮಣಿ ಮಾಲೀಕ ಯಾರು? ಎಂದು ಕಮೆಂಟ್ ಮಾಡಿದ್ದಾರೆ.

ಕಾರ್ತಿಕ್‌ ಅವರು ಬಿಗ್‌ ಬಾಸ್‌ ಸೀಸನ್‌ 10ರ ವಿನ್ನರ್‌ ಆಗಿ, 50 ಲಕ್ಷ ರೂಪಾಯಿ, ಅದ್ಧೂರಿ ಕಾರು ಮತ್ತು ಎಲೆಕ್ಟ್ರಿಕ್ ಸ್ಕೂಟರ್ ಪಡೆದುಕೊಂಡಿದ್ದರು.

Exit mobile version