Site icon Vistara News

Karthikeya 2 | ನಿಖಿಲ್ ಸಿದ್ಧಾರ್ಥ್ ನಟನೆಯ ಕಾರ್ತಿಕೇಯ-2 ಸಿನಿಮಾದ ಟೀಸರ್ ರಿಲೀಸ್

Karthikeya 2

ಬೆಂಗಳೂರು : ಟಾಲಿವುಡ್ ಚಿತ್ರರಂಗದ ಯುವ ಪ್ರತಿಭಾನ್ವಿತ ನಟ ನಿಖಿಲ್ ಸಿದ್ಧಾರ್ಥ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ಕಾರ್ತಿಕೇಯ-2 ಚಿತ್ರದ ಟೀಸರ್ ರಿಲೀಸ್ ಆಗಿದೆ. ಎಪಿಕ್ ಅಡ್ವೆಂಚರ್ಸ್ ಜರ್ನಿಯ ಕಥಾ ಹಂದರ ಹೊಂದಿದೆ. ತೆಲುಗು, ತಮಿಳು, ಹಿಂದಿ, ಮಲಯಾಳಂ ಜತೆಗೆ ಕನ್ನಡದಲ್ಲಿಯೂ ಟೀಸರ್ ಬಿಡುಗಡೆಯಾಗಿದೆ.

ಅನುಪಮ ಪರಮೇಶ್ವರನ್, ಅನುಪಮ್ ಖೇರ್, ಶ್ರೀನಿವಾಸ್ ರೆಡ್ಡಿ, ಹರ್ಷ, ಆದಿತ್ಯ ಮೆನನ್ ಸೇರಿದಂತೆ ಹಲವರು ನಟಿಸಿದ್ದಾರೆ. ಕಾರ್ತಿಕೇಯ 2 ಚಂದೂ ಮೊಂಡೇಟಿ ನಿರ್ದೇಶಿಸಿದ್ದು, ಪೀಪಲ್ ಮೀಡಿಯಾ ಫ್ಯಾಕ್ಟರಿ ಮತ್ತು ಅಭಿಷೇಕ್ ಅಗರ್ವಾಲ್ ಆರ್ಟ್ಸ್ ಬ್ಯಾನರ್‌ನಡಿ ಸಿನಿಮಾ ನಿರ್ಮಿಸಲಾಗಿದೆ.

ಇದನ್ನೂ ಓದಿ | ʼಹ್ಯಾಪಿ ಬರ್ತ್‌ಡೇʼ ದಿನವೇ ʻಹ್ಯಾಪಿ ಡೇಸ್‌ʼ ನಿಖಿಲ್‌ ಕೊಟ್ಟ ಗುಡ್‌ ನ್ಯೂಸ್‌?

ಕಾಲ ಭೈರವ ಸಂಗೀತವಿರುವ ಕಾರ್ತಿಕೇಯ-2 ಸಿನಿಮಾ ಇದೇ ತಿಂಗಳ 22ಕ್ಕೆ ವರ್ಲ್ಡ್ ವೈಡ್ ರಿಲೀಸ್ ಪ್ಲ್ಯಾನ್ ಮಾಡಿಕೊಂಡಿತ್ತು. ಆದರೆ ಅದೇ ದಿನ ನಾಗ ಚೈತನ್ಯ ನಟನೆಯ ʻಥ್ಯಾಂಕ್ಯೂʼ ಸಿನಿಮಾ ಬರುತ್ತಿರುವುದರಿಂದ ಚಿತ್ರತಂಡ ಸಿನಿಮಾ ಪೋಸ್ಟ್ ಪೋನ್ ಮಾಡಿದೆ. ಈ ಬಗ್ಗೆ ಕೆಲ ದಿನಗಳ ಹಿಂದಷ್ಟೇ ನಿಖಿಲ್ ಸಿದ್ಧಾರ್ಥ್ ಮಾಹಿತಿ‌ ನೀಡಿ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದರು. ಆಗಸ್ಟ್ 12ಕ್ಕೆ ಕಾರ್ತಿಕೇಯ-2 ವೈಡ್ ರಿಲೀಸ್ ಆಗಲಿದೆ.

Exit mobile version