Site icon Vistara News

Kartik Aaryan: ಕಾರ್ತಿಕ್ ಆರ್ಯನ್ ಅಭಿನಯದ ʻಶಹಜಾದಾʼ ಸಿನಿಮಾ ಮೂರನೇ ದಿನದ ಕಲೆಕ್ಷನ್‌ ಎಷ್ಟು?

Kartik Aaryan Shehzada Box Office Collection Day 3

ಬೆಂಗಳೂರು: ನಟ ಕಾರ್ತಿಕ್ ಆರ್ಯನ್ (Kartik Aaryan ) ಅಭಿನಯದ ಬಹು ನಿರೀಕ್ಷಿತ ಚಿತ್ರ ʻಶಹಜಾದಾʼ ಫೆ. 17ರಂದು ವಿಶ್ವಾದ್ಯಂತ ಬಿಡುಗಡೆಯಾಗಿದೆ. ಕಾರ್ತಿಕ್ ಆರ್ಯನ್ ಹಿಂದಿನ ಚಿತ್ರ ʻಭೂಲ್ ಭುಲೈಯಾ-2ʼ ಗೆ ಹೋಲಿಸಿದರೆ, ಕಾರ್ತಿಕ್ ಆರ್ಯನ್ ಅವರ ʻಶಹಜಾದಾʼ ಸಿನಿಮಾ ಅಷ್ಟಾಗಿ ಕಲೆಕ್ಷನ್‌ ಮಾಡುತ್ತಿಲ್ಲ. ಥಿಯೇಟರ್‌ಗಳಲ್ಲಿ ಮೊದಲ ವಾರಾಂತ್ಯದಲ್ಲಿ, ಸಿನಿಮಾ 20.20 ಕೋಟಿ ರೂ. ಗಳಿಕೆ ಕಂಡಿದೆ ಎಂದು ಬಾಕ್ಸ್ ಆಫೀಸ್ ವರ್ಲ್ಡ್‌ವೈಡ್ ವರದಿ ಮಾಡಿದೆ.

ಬಿಡುಗಡೆಯಾದ ಮೊದಲ ದಿನವೇ ʻಶಹಜಾದಾʼ ಬಾಕ್ಸ್ ಆಫೀಸ್‌ನಲ್ಲಿ 7 ಕೋಟಿ ರೂ. ಗಳಿಸಿತು.ಈ ಸಿನಿಮಾ ಭಾರತದಲ್ಲಿ 7.30 ಕೋಟಿ ರೂ. ಹೆಚ್ಚು ಗಳಿಕೆ ಮಾಡಿದೆ. ಶಾರುಖ್ ಖಾನ್ ಅಭಿನಯದ ‘ಪಠಾಣ್‌’ 26 ದಿನಗಳಿಂದ ಚಿತ್ರಮಂದಿರಗಳಲ್ಲಿದೆ. ಮತ್ತು ಇದು ಇನ್ನೂ ಪ್ರೇಕ್ಷಕರ ಮೆಚ್ಚಿನ ಚಿತ್ರವಾಗಿ ಉಳಿದಿದೆ. ಅದರ ನಾಲ್ಕನೇ ಭಾನುವಾರದ ನಂತರ, 515.70 ಕೋಟಿ ರೂ. ಗಳಿಕೆ ಕಂಡಿದೆ.

ವಾರಾಂತ್ಯದ ನಂತರ, ಶಹಜಾದಾ ದೇಶೀಯ ಬಾಕ್ಸ್ ಆಫೀಸ್‌ನಲ್ಲಿ 20.20 ಕೋಟಿ ರೂ. ಗಳಿಕೆ ಕಂಡಿದೆ ಎಂದು ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ವರದಿ ಮಾಡಿದ್ದಾರೆ. “ಶಹಜಾದಾ ನಿರೀಕ್ಷೆಗಳಿಗೆ ತಕ್ಕಂತೆ ಕಲೆಕ್ಷನ್‌ ಮಾಡಿಲ್ಲ. ಶುಕ್ರವಾರ 6 ಕೋಟಿ ರೂ. ಶನಿವಾರ 6.65 ಕೋಟಿ, ಭಾನುವಾರ 7.55 ಕೋಟಿ. ಒಟ್ಟು: ₹ 20.20 ಕೋಟಿʼʼ ಎಂದು ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Samantha: `ಪಠಾಣ್‌’ ಎಫೆಕ್ಟ್‌ನಿಂದ ಬಿಡುಗಡೆ ಮುಂದೂಡಿದ ಸಮಂತಾ ಅಭಿನಯದ ಶಾಕುಂತಲಂ?

ತರಣ್ ಆದರ್ಶ್ ಟ್ವೀಟ್

ʻಶಹಜಾದಾʼ ಸಿನಿಮಾ ಒಟಿಟಿ ಹಕ್ಕುಗಳನ್ನು ನೆಟ್‌ಫ್ಲಿಕ್ಸ್ 40 ಕೋಟಿ ರೂ. ಖರೀದಿಸಿದೆ ಎಂದು ವರದಿಯಾಗಿದೆ. ಚಿತ್ರದ ಅಂತಾರಾಷ್ಟ್ರೀಯ ವಿತರಣಾ ಹಕ್ಕು ಕೂಡ 5 ಕೋಟಿ ರೂ.ಗೆ ಮಾರಾಟವಾಗಿದೆ. ತೆಲುಗಿನ ʻಅಲಾ ವೈಕುಂಠಪುರಂಲೋʼ ಹಿಂದಿ ರಿಮೇಕ್‌ನಲ್ಲಿ ಕಾರ್ತಿಕ್ ಆರ್ಯನ್ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: Kartik Aaryan | ಕಾರ್ತಿಕ್ ಆರ್ಯನ್ ಅಭಿನಯದ ʻಶಹಜಾದಾʼ ಟ್ರೈಲರ್‌ ಔಟ್‌

ಈ ಚಿತ್ರವನ್ನು ರೋಹಿತ್‌ ಧವನ್‌ ನಿರ್ದೇಶನ ಮಾಡಿದ್ದಾರೆ. ಕೃತಿ ಸನೂನ್‌ ನಾಯಕಿಯಾಗಿದ್ದು, ಮನೀಷಾ ಕೊಯಿರಾಲ, ರೊನಿತ್‌ ರಾಯ್‌, ಪರೇಶ್‌ ರಾವಲ್‌ ಮುಂತಾದವರು ನಟಿಸಿದ್ದಾರೆ. ಕಾರ್ತಿಕ್ ಅವರು ʻಶಹಜಾದಾʼ ನಿರ್ಮಾಪಕರಾಗಿದ್ದಾರೆ. ಇಲ್ಲಿಯವರೆಗೆ ನಟರಾದ ಆರ್ಯನ್‌ ಇದೀಗ ನಿರ್ಮಾಪಕರೂ ಆಗಿದ್ದಾರೆ. ಈ ಚಿತ್ರಕ್ಕೆ ಪ್ರೀತಮ್ ಸಂಗೀತವಿದೆ.

Exit mobile version