Site icon Vistara News

Kartik Aaryan | ಕಾರ್ತಿಕ್ ಆರ್ಯನ್ ಅಭಿನಯದ ʻಶಹಜಾದಾʼ ಟ್ರೈಲರ್‌ ಔಟ್‌

Kartik Aaryan SHEHZADA

ಬೆಂಗಳೂರು : ನಟ ಕಾರ್ತಿಕ್ ಆರ್ಯನ್ (Kartik Aaryan ) ಅಭಿನಯದ ಬಹು ನಿರೀಕ್ಷಿತ ಚಿತ್ರ ʻಶಹಜಾದಾʼ ಟ್ರೈಲರ್‌ ಜನವರಿ 12 ಗುರುವಾರ ಬಿಡುಗಡೆಗೊಂಡಿದೆ. ತೆಲುಗಿನ ʻಅಲಾ ವೈಕುಂಠಪುರಂಲೋʼ ಹಿಂದಿ ರಿಮೇಕ್‌ನಲ್ಲಿ ಕಾರ್ತಿಕ್ ಆರ್ಯನ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರವನ್ನು ರೋಹಿತ್‌ ಧವನ್‌ ನಿರ್ದೇಶನ ಮಾಡುತ್ತಿದ್ದಾರೆ.

ಕೃತಿ ಸನೂನ್‌ ನಾಯಕಿಯಾಗಿದ್ದು, ಮನೀಷಾ ಕೊಯಿರಾಲ, ರೊನಿತ್‌ ರಾಯ್‌, ಪರೇಶ್‌ ರಾವಲ್‌ ಮುಂತಾದವರು ನಟಿಸಿದ್ದಾರೆ. ಫೆಬ್ರವರಿ 10ರಂದು ಚಿತ್ರ ಬಿಡುಗಡೆಯಾಗುತ್ತಿದೆ. ಚಿತ್ರೀಕರಣ ಸಂದರ್ಭದಲ್ಲಿ ಹಣಕಾಸಿನ ಸಮಸ್ಯೆ ಎದುರಾಗಿತ್ತಂತೆ. ಆ ಸಂದರ್ಭದಲ್ಲಿ ಆರ್ಯನ್‌ ಮುಂದೆ ಬಂದು ಚಿತ್ರದ ಸಂಭಾವನೆ ಬಿಟ್ಟುಬಿಡುವುದಾಗಿ ಹೇಳಿದ್ದರು. ಹಾಗಾಗಿ ಅವರಿಗೂ ನಿರ್ಮಾಪಕರ ಸ್ಥಾನ ನೀಡಲಾಗಿದೆ ಎಂದು ವರದಿ ಆಗಿದೆ. ಕಾರ್ತಿಕ್ ಅವರು ʻಶಹಜಾದಾʼ ನಿರ್ಮಾಪಕರಾಗಿದ್ದಾರೆ. ಇಲ್ಲಿಯವರೆಗೆ ನಟರಾದ ಆರ್ಯನ್‌ ಇದೀಗ ನಿರ್ಮಾಪಕರೂ ಆಗಿದ್ದಾರೆ. ಈ ಚಿತ್ರಕ್ಕೆ ಪ್ರೀತಮ್ ಸಂಗೀತವಿದೆ.

ಇದನ್ನೂ ಓದಿ | Star Fashion | ನಟ ಹೃತಿಕ್‌ ರೋಷನ್‌ ಗ್ರೀಕ್‌ ಗಾಡ್ ಆಫ್‌ ಬಾಲಿವುಡ್‌ ಆಗಿದ್ದು ಹೇಗೆ?

ಈ ಹಿಂದೆ ಅಷ್ಟೇ ಕಾರ್ತಿಕ್ ಆರ್ಯನ್ ಮತ್ತು ನಟಿ ಸಾರಾ ಅಲಿ ಖಾನ್ ಹೊಸ ವರ್ಷವನ್ನು ಒಟ್ಟಾಗಿ ಸ್ವಾಗತಿಸಿದ್ದರು. ಒಂದು ಕಾಲದ ಲವ್ ಬರ್ಡ್ಸ್ ಕಾರ್ತಿಕ್ ಮತ್ತು ಸಾರಾ ದೂರ ಆಗಿದ್ದರು. ಒಟ್ಟಿಗೆ ವಿದೇಶದಲ್ಲಿ ಹೊಸ ವರ್ಷ ಆಚರಣೆ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇಬ್ಬರೂ ಲಂಡನ್‌ಗೆ ಹಾರಿದ್ದು ಒಟ್ಟಿಗೆ ಹೊಸ ವರ್ಷ ವೆಲ್ ಕಮ್ ಮಾಡಿದ್ದಾರೆ. ಇಬ್ಬರು ಶೇರ್ ಮಾಡಿರುವ ಫೋಟೊಗಳು ಇವರ ಬಗ್ಗೆ ಸುಳಿವು ಬಿಟ್ಟುಕೊಟ್ಟಿದೆ. ʻ ಸತ್ಯಪ್ರೇಮ್ ಕಿ ಕಥಾʼ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.  

ಇದನ್ನೂ ಓದಿ | Bollywood Announcements | ಟೆಹರಾನ್ ಚಿತ್ರದಲ್ಲಿ ಮಾನುಷಿ ಚಿಲ್ಲರ್: ಸೆಟ್ಟೇರಲಿವೆ ಸಾಲು ಸಾಲು ಸಿನಿಮಾ

Exit mobile version