Site icon Vistara News

Karunada Sambhrama 2022 | ಡಿ. 10,11ರಂದು ಕರುನಾಡ ಸಂಭ್ರಮ : ಚಿರಂಜೀವಿ ಸರ್ಜಾಗೆ ಮರಣೋತ್ತರ ಕನ್ನಡ ಕಲಾಭೂಷಣ ಪ್ರಶಸ್ತಿ

Karunada Sambhrama 2022

ಬೆಂಗಳೂರು : 2022ರ ಕರುನಾಡ ಸಂಭ್ರಮಕ್ಕೆ (Karunada Sambhrama 2022 ) ಕ್ಷಣಗಣನೆ ಆರಂಭವಾಗಿದೆ. ಡಿಸೆಂಬರ್ 10,11ರಂದು ನಡೆಯುತ್ತಿರುವ ಅದ್ಧೂರಿ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜಾಗುತ್ತಿದೆ. ಜಿಕೆಜಿಎಸ್ ಟ್ರಸ್ಟ್ ವತಿಯಿಂದ ನಿರಂತರವಾಗಿ ಪ್ರತಿ ವರ್ಷ ನಡೆಯುತ್ತಿರುವ ಈ ಕಾರ್ಯಕ್ರಮ ಈ ಬಾರಿ 12ನೇ ವರ್ಷಕ್ಕೆ ಕಾಲಿಟ್ಟಿದೆ.

ಪ್ರತಿ ವರ್ಷದಂತೆ ಈ ಬಾರಿಯೂ ಸಾಕಷ್ಟು ವಿಶೇಷತೆ ಹಾಗೂ ಕಲರ್‌ಫುಲ್‌ನಿಂದ ಕರುನಾಡ ಸಂಭ್ರಮ ಕೂಡಿರಲಿದೆ. ವಿದ್ಯಾಪೀಠ ಸರ್ಕಲ್ ಡೊಂಕಲ ಗ್ರೌಂಡ್‌ನಲ್ಲಿ ಈ ಅದ್ಧೂರಿ ಕಾರ್ಯಕ್ರಮ ನಡೆಯಲಿದೆ. ವರುಣ್‌ ಸ್ಟುಡಿಯೋಸ್‌, ರಾಜ್ ಇವೆಂಟ್ಸ್ ಜತೆಗೂಡಿ ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದೆ. ಕಾರ್ಯಕ್ರಮದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಕನ್ನಡ ಕಲಾಭೂಷಣ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈ ಬಾರಿ ನಟ ಚಿರಂಜೀವಿ ಸರ್ಜಾ ಅವರಿಗೆ ಮರಣೋತ್ತರ ಕನ್ನಡ ಕಲಾಭೂಷಣ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಚಿರಂಜೀವಿ ಸರ್ಜಾ ಕುಟುಂಬ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ | Nenapirali Prem | ನೆನಪಿರಲಿ ಪ್ರೇಮ್‌ ಪುತ್ರಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ: ಯಾವ ಸಿನಿಮಾದಲ್ಲಿ ನಟನೆ?

ಕಾರ್ಯಕ್ರಮದಲ್ಲಿ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್, ಸೃಜನ್ ಲೋಕೇಶ್, ಶ್ರೀನಗರ ಕಿಟ್ಟಿ, ಧ್ರುವ ಸರ್ಜಾ, ರವಿಶಂಕರ್ ಗೌಡ, ನಿಧಿ ಸುಬ್ಬಯ್ಯ, ಆರುಮುಗಂ ರವಿ ಶಂಕರ್, ಮಾನ್ವಿತಾ ಹರೀಶ್, ಸಂಗೀತಾ ಶೃಂಗೇರಿ, ವಿರಾಟ್, ರವಿಚಂದ್ರನ್ ಸೇರಿದಂತೆ ಹಲವು ತಾರೆಯರು ಕರುನಾಡ ಸಂಭ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.

ಎಸ್ ಪಿ ಬಿ ಚರಣ್, ಸಿಂಗರ್ ಮನು, ನವೀನ್ ಸಜ್ಜು, ಅನನ್ಯಾ ಭಟ್, ಅನುರಾಧಾ ಭಟ್, ವಿಜಯ್ ಪ್ರಕಾಶ್ ಒಳಗೊಂಡ ಖ್ಯಾತ ಗಾಯಕರು ಈ ಸಂಭ್ರಮದ ರಂಗನ್ನು ತಮ್ಮ ಹಾಡಿನ ಮೂಲಕ ಹೆಚ್ಚಿಸಲಿದ್ದಾರೆ.

ಇದನ್ನೂ ಓದಿ | SIIMA 2022 | ಮುಂದಿನ ಸಿನಿಮಾದ ಅಪ್‌ಡೇಟ್‌ ಕೊಟ್ರು ರಾಕಿಂಗ್‌ ಸ್ಟಾರ್‌ ಯಶ್‌: ಇಲ್ಲಿದೆ ಸೈಮಾ ಪ್ರಶಸ್ತಿಗಳ ವಿವರ

Exit mobile version