Site icon Vistara News

Kaatera Movie: ʻಕಾಟೇರʼ ಸಿನಿಮಾ ಹೈದರಾಬಾದ್-ಕರ್ನಾಟಕ ವಿತರಣೆ ಹಕ್ಕು ಯಾರ ಪಾಲು?

Katera Movie Hyderabad Karnataka Distribution Rights

ಬೆಂಗಳೂರು: ಈಗಾಗಲೇ ವಿಶ್ವಾದ್ಯಂತ ಡಂಕಿ ಹಾಗೂ ಸಲಾರ್‌ ಸಿನಿಮಾ ಹವಾ ಸೃಷ್ಟಿಸುತ್ತಿದೆ. ಇದರ ಜತೆಗೆ ದರ್ಶನ್‌ ಅವರ ಕಾಟೇರ ಸಿನಿಮಾ (Kaatera Movie) ಬಿಡುಗಡೆಗೆ ಸಜ್ಜಾಗಿದೆ. ಈ ವರ್ಷ ಬಿಡುಗಡೆ ಆಗುತ್ತಿರುವ ದರ್ಶನ್​ರ ಎರಡನೇ ಸಿನಿಮಾ ಇದಾಗಿದೆ. ಈ ಸಿನಿಮಾದ ವಿತರಣಾ ಹಕ್ಕಿನ ಒಂದು ಭಾಗವನ್ನು ನಿರ್ದೇಶಕ ಗುರು ದೇಶಪಾಂಡೆ ತೆಗೆದುಕೊಂಡಿದ್ದಾರೆ. ಹೈದರಾಬಾದ್-ಕರ್ನಾಟಕ ಭಾಗದ ಜನರಿಗೆ ಸಿನಿಮಾವನ್ನು ತಲುಪಿಸುವ ಕಾರ್ಯವನ್ನು ಗುರು ದೇಶಪಾಂಡೆ ಮಾಡಲಿದ್ದಾರೆ.

ಗುರು ದೇಶಪಾಂಡೆ ಇತ್ತೀಚೆಗೆ ನಿರ್ಮಾಪಕರಾಗಿಯೂ ಸದ್ದು ಮಾಡುತ್ತಿದ್ದಾರೆ. ಸಿನಿಮಾ ವಿತರಣೆ ಗುರು ದೇಶಪಾಂಡೆ ಅವರಿಗೆ ಹೊಸತೇನಲ್ಲ. ಕರ್ನಾಟಕದಲ್ಲಿ ಹೇಗೆ ದರ್ಶನ್‌ ಸಿನಿಮಾ ನೋಡಲು ತುದಿಗಾಲಲ್ಲಿ ನಿಂತಿದ್ದಾರೋ, ಹಾಗೇ ದರ್ಶನ್​ಗೆ ಹೈದರಾಬಾದ್‌ ಕರ್ನಾಟಕದಲ್ಲಿ ಅಲ್ಲಿ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ. 

2010-11ನೇ ಸಾಲಿನಲ್ಲಿ ಅವರು ಸಿನಿಮಾ ವಿತರಕರಾಗಿ ಸಕ್ರಿಯರಾಗಿದ್ದರು. ಆ ಕಾಲದಲ್ಲಿ ರಜನೀಕಾಂತ್ ಮಾಜಿ ಅಳಿಯ ಧನುಶ್ ನಟಿಸಿದ್ದ ‘ಆಡುಕುಳಂ’, ‘ದೈವ ತಿರುಮಗಳ್’, ದಳಪತಿ ವಿಜಯ್ ನಟಿಸಿದ್ದ ‘ವೇಲಾಯುಧನ್’, ಯಶ್ ಅಭಿನಯದ ‘ಕಿರಾತಕ’, ‘ಸಂಜು ವೆಡ್ಸ್ ಗೀತಾ’ ಅಂಥಹಾ ಹಿಟ್ ಸಿನಿಮಾಗಳನ್ನು ವಿತರಿಸುವ ಮೂಲಕ ಗೆದ್ದಿದ್ದರು. ಯಶ್ ನಟನೆಯ ‘ರಾಜಾಹುಲಿ’ ಸಿನಿಮಾ ನಿರ್ದೇಶನ ಮಾಡಿದ್ದರು. ಅದರ ಹೊರತಾಗಿ, ‘ರುದ್ರತಾಂಡವ’, ‘ಜಾನ್ ಜಾನಿ ಜನಾರ್ಧನ’, ‘ಸಂಹಾರ’, ‘ಪಡ್ಡೆ ಹುಲಿ’ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ‘ಜಂಟಲ್​ಮ್ಯಾನ್’, ‘ಲವ್ ಯು ರಚ್ಚು’, ‘ಒಂಬತ್ತನೇ ದಿಕ್ಕು’ ಸಿನಿಮಾಗಳನ್ನು ನಿರ್ಮಾಣವೂ ಮಾಡಿದ್ದಾರೆ.

70ರ ದಶಕದಲ್ಲಿ ಕರ್ನಾಟಕದ ಹಳ್ಳಿಯೊಂದರಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿ ಕಾಟೇರ ಸಿನಿಮಾ ಮಾಡಲಾಗಿದೆ ಎಂದು ಸಿನಿಮಾ ತಂಡ ಹಿಂದೆಯೇ ಹೇಳಿತ್ತು. ಕತೆಗೆ ಹಳ್ಳಿಯ ಕತೆಯೇ ಸ್ಫೂರ್ತಿ ಎಂದು ಹೇಳಿರುವುದು ಟ್ರೈಲರ್​ನಲ್ಲಿ ಅಚ್ಚುಕಟ್ಟಾಗಿ ಕಾಣಿಸಿಕೊಂಡಿದೆ.ದರ್ಶನ್ ಅವರಿಗೆ ಈ ಹಿಂದೆ ತರುಣ್​ ಸುಧೀರ್​ ರಾಬರ್ಟ್ ಸಿನಿಮಾ ನಿರ್ದೇಶಿಸಿದ್ದರು. ಇದೀಗ ಅವರು ಮತ್ತೊಮ್ಮೆ ದರ್ಶನ್ ಆ್ಯಕ್ಷನ್​ ಕಟ್ ಹೇಳಿದ್ದಾರೆ. ದರ್ಶನ್​ಗಾಗಿ ಉತ್ತಮ ಕಥೆಯೊಂದಿಗೆ ತರುಣ್ ಸುಧೀರ್ ಬಂದಿದ್ದಾರೆ ಎಂಬುದು ಸಿನಿ ಕ್ಷೇತ್ರ ಮಾತು.ದರ್ಶನ್​ಗೆ ಜೋಡಿಯಾಗಿ ಹಿರಿಯ ನಟಿ ಮಾಲಾಶ್ರೀ ಮಗಳು ಆರಾಧನಾ ಕಾಣಿಸಿಕೊಂಡಿದ್ದಾರೆ. ಹಿರಿಯ ನಟಿ ಶ್ರುತಿ ಕುಮಾರ್ ಗೋವಿಂದ್, ವೈಜನಾಥ್ ಬಿರಾದಾರ, ಜಗಪತಿ ಬಾಬು ಸೇರಿದಂತೆ ಇನ್ನೂ ಅನೇಕರು ಮಿಂಚಲಿದ್ದಾರೆ.

ಇದನ್ನೂ ಓದಿ: Kaatera Movie: ಕಾಟೇರ ಚಿತ್ರಕ್ಕೆ ಎದುರಾಯ್ತು ‘ಸರ್ಪ ದೋಷ’! ಅರಣ್ಯಾಧಿಕಾರಿಗೆ ದೂರು

ಕಾಟೇರ ಸಿನಿಮಾದ 2 ಹಾಡುಗಳು ಕೂಡ ಈಗಾಗಲೇ ರಿಲೀಸ್ ಆಗಿದ್ದು ಸೂಪರ್ ಹಿಟ್ ಆಗಿದೆ. ಪಸಂದಾಗವ್ನೆ ಹಾಗೂ ಯಾವ ಜನುಮದ ಗೆಳತಿ ಹಾಡುಗಳು ಜನಮನ ಗೆದ್ದಿವೆ.ಇದೆಲ್ಲದರ ನಡುವೆ ಜೀ ಸಂಸ್ಥೆ ‘ಕಾಟೇರ’ ಚಿತ್ರದ ಡಿಜಿಟಲ್, ಸ್ಯಾಟಲೈಟ್ ರೈಟ್ಸ್ ಕೊಂಡುಕೊಂಡಿದೆ ಎನ್ನಲಾಗುತ್ತಿದೆ. 48 ದಿನಗಳ ಬಳಿಕ ಜೀ5ನಲ್ಲಿ ಸ್ಟ್ರೀಮಿಂಗ್ ಆಗುವ ಸಾಧ್ಯತೆಯಿದೆ. ಫೆಬ್ರವರಿ 16ಕ್ಕೆ ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಸಿನಿಮಾ ಒಟಿಟಿಗೆ ಬರಬಹುದು. ಯುಗಾದಿ ಹಬ್ಬಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಸಿನಿಮಾ ಪ್ರೀಮಿಯರ್ ಆಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

Exit mobile version