Site icon Vistara News

Katrina Kaif | ವಿಮಾನ ನಿಲ್ದಾಣದಲ್ಲಿ ಕತ್ರಿನಾ-ವಿಕ್ಕಿ ತಡೆದು ವಿಚಾರಣೆ ನಡೆಸಿದ ಭದ್ರತಾ ಸಿಬ್ಬಂದಿ: ವಿಡಿಯೊ ವೈರಲ್‌!

Katrina Kaif

ಬೆಂಗಳೂರು: ಬಾಲಿವುಡ್‌ ನಟಿ ಕತ್ರಿನಾ ಕೈಫ್‌ (Katrina Kaif) ಹಾಗೂ ವಿಕ್ಕಿ ಕೌಶಲ್ ಕ್ರಿಸ್ಮಸ್‌ ಸಂಭ್ರಮಾಚರಣೆ ನಂತರ ವೆಕೇಶನ್‌ಗೆ ತೆರಳಿದ್ದಾರೆ. ಈ ವೇಳೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕತ್ರಿನಾ ಮತ್ತು ವಿಕ್ಕಿ ಅವರನ್ನು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಅಧಿಕಾರಿಗಳು ನಿಲ್ಲಿಸಿರುವ ವಿಡಿಯೊ ವೈರಲ್‌ ಆಗಿದೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಚೆಕ್ಕಿಂಗ್‌ಗಾಗಿ ನಿಲ್ಲದೇ ಹಾಗೆಯೇ ಹೋಗುತ್ತಿದ್ದ ಕತ್ರಿನಾ ಅವರನ್ನು ಸಿಬ್ಬಂದಿ ಕರೆದು ಪರಿಶೀಲಿಸಿದ್ದಾರೆ. ಇದೀಗ ಈ ವಿಡಿಯೊ ವೈರಲ್‌ ಆಗಿದೆ.

ಬಾಲಿವುಡ್ ಖ್ಯಾತ ನಟಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಜೋಡಿ ಬಾಲಿವುಡ್‌ನ ಕ್ಯೂಟ್ ಜೋಡಿಗಳಲ್ಲಿ ಒಂದು. ಇವರು ಮದುವೆಯಾಗಿ ಒಂದು ವರ್ಷ ಕಳೆಯಿತು. ಸಂತೋಷದ ಜೀವನ ನಡೆಸುತ್ತಿರುವ ಕತ್ರಿನಾ ಮತ್ತು ವಿಕ್ಕಿ ಸದಾ ಜತೆಯಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಇದೀಗ ವಿಮಾನ ನಿಲ್ದಾಣದಲ್ಲಿ ಸಿಐಎಸ್‌ಎಫ್ ಸಿಬ್ಬಂದಿಯು ಕತ್ರಿನಾ ಅವರನ್ನು ತಡೆದು ಚೆಕ್ಕಿಂಗ್‌ ಮಾಡಿರುವ ವಿಡಿಯೊ ವೈರಲ್‌ ಆಗಿದೆ. ಪ್ರವೇಶ ದ್ವಾರದಲ್ಲಿ ಕತ್ರಿನಾ ಹಾಗೂ ವಿಕ್ಕಿ ಎಂಟ್ರಿ ಕೊಡುವ ವೇಳೆ ವಿಕ್ಕಿ ಅವರು ಅಲ್ಲೇ ನಿಂತು ಐಡಿ ಪರಿಶೀಲಿಸಿಕೊಂಡರು. ಆದರೆ ಕತ್ರಿನಾ ಅವರು ನೇರವಾಗಿ ಒಳಗೆ ಹೋಗಿದ್ದಾರೆ. ಈ ವೇಳೆ ಸಿಬ್ಬಂದಿ ಕತ್ರಿನಾ ಅವರಿಗೆ ʻʻಮೇಡಂ ಸ್ವಲ್ಪ ನಿಲ್ಲಿ. ಚೆಕ್ ಮಾಡಬೇಕುʼʼಎಂದು ಹೇಳಿದ್ದಾರೆ. ಇದೀಗ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ.

ಇದನ್ನೂ ಓದಿ | Katrina Kaif | ವಿಕ್ಕಿ ಕೌಶಲ್ ಡೈರೆಕ್ಟರ್‌ ಆಗಿದ್ದಾರಂತೆ: ವೈರಲ್‌ ಆಯ್ತು ಕತ್ರಿನಾ ಕೈಫ್‌ ದಂಪತಿ ವಿಡಿಯೊ!

ವಿಡಿಯೊ ನೋಡಿ ನೆಟ್ಟಿಗರು ʻʻಇಬ್ಬರೂ ಖಾಸಗಿ ಪ್ರೈವೇಟ್‌ ವಿಮಾನ ನಿಲ್ದಾಣ ಎಂದು ಅಂದುಕೊಂಡಿರಬೇಕು. ಅದಕ್ಕಾಗಿ ನೇರವಾಗಿ ಹೋಗಿದ್ದಾರೆ. ಸಿಆರ್‌ಪಿಎಫ್ ನೀವು ಒಳ್ಳೆಯ ಕೆಲಸ ಮಾಡಿದ್ದೀರಿʼʼಎಂದು ಕಮೆಂಟ್‌ ಮಾಡಿದ್ದಾರೆ. ಇನ್ನೊಬ್ಬರು ʻʻನನಗೆ ಕತ್ರಿನಾ ಅವರ ಕಾಸ್ಟ್ಯೂಮ್‌ ಇಷ್ಟವಾಯಿತು. ಅವರ ಸಾಂತಾ ಕ್ಲಾಸ್‌ ಉಡುಗೆ ತುಂಬ ಇಷ್ಟʼʼಎಂದು ಹೊಗಳಿದ್ದಾರೆ.

ಭಾನುವಾರದಂದು ವಿಕ್ಕಿ ಮತ್ತು ಕತ್ರಿನಾ ತಮ್ಮ ಮನೆಯಲ್ಲಿ ಆತ್ಮೀಯರಿಗೆ ಮಾತ್ರ ಕ್ರಿಸ್ಮಸ್ ಪಾರ್ಟಿಯನ್ನು ಹಮ್ಮಿಕೊಂಡಿದ್ದರು. ವಿಕ್ಕಿ ಅವರ ತಂದೆ ತಾಯಿ, ಶಾಮ್ ಕೌಶಲ್, ವೀಣಾ ಕೌಶಲ್‌ ಮತ್ತು ಅವರ ಸಹೋದರ, ನಟ ಸನ್ನಿ ಕೌಶಲ್ ಭಾಗಿಯಾಗಿದ್ದರು. ಕತ್ರಿನಾ ಅವರ ಸಹೋದರಿ ಇಸಾಬೆಲ್ಲೆ ಕೈಫ್ ಕೂಡ ಕುಟುಂಬದ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಕತ್ರಿನಾ ಅವರ ಸ್ನೇಹಿತ, ಚಲನಚಿತ್ರ ನಿರ್ಮಾಪಕ ಕಬೀರ್ ಖಾನ್ ಅವರ ಪತ್ನಿ, ನಟಿ ಮಿನಿ ಮಾಥುರ್ ಸೇರಿದಂತೆ ಹಲವರು ಕತ್ರಿನಾ ಅವರ ಕುಟುಂಬದೊಂದಿಗೆ ಕ್ರಿಸ್ಮಸ್‌ ಆಚರಿಸಿಕೊಂಡಿದ್ದರು.

ನಟ ನೇಹಾ ಧೂಪಿಯಾ, ಅಂಗದ್ ಬೇಡಿ, ಚಲನಚಿತ್ರ ನಿರ್ಮಾಪಕ ಆನಂದ್ ತಿವಾರಿ, ನಟರಾದ ಅಂಗೀರ ಧರ್ ಮತ್ತು ಕರಿಷ್ಮಾ ಕೊಹ್ಲಿ ಕೂಡ ಕತ್ರಿನಾ ದಂಪತಿಯ ಕ್ರಿಸ್ಮಸ್ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದರು.

ಕತ್ರಿನಾ ಅವರು ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಶ್ರೀರಾಮ್ ರಾಘವನ್ ನಿರ್ದೇಶನದ ʻಮೆರ‍್ರಿ ಕ್ರಿಸ್ಮಸ್ʼ ಚಿತ್ರದಲ್ಲಿ ನಟ ವಿಜಯ್ ಸೇತುಪತಿ ಕಾಣಿಸಿಕೊಳ್ಳುತ್ತಿದ್ದಾರೆ. ಸಲ್ಮಾನ್ ಖಾನ್ ಅವರ ʻಟೈಗರ್ 3ʼ ನಲ್ಲಿಯೂ ಕತ್ರಿನಾ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ | Katrina Kaif | ಕತ್ರಿನಾ ಕೈಫ್-ವಿಜಯ್ ಸೇತುಪತಿ ಕಾಂಬಿನೇಶನ್‌ ʻಮೆರ‍್ರಿ ಕ್ರಿಸ್‌ಮಸ್‌ʼ ಮುಂದಿನ ವರ್ಷ ತೆರೆಗೆ? ಟ್ವಿಸ್ಟ್‌ ಇರಲಿದೆ ಎಂದ ನಟಿ!

Exit mobile version