Site icon Vistara News

Katrina Kaif | ಕತ್ರಿನಾ ಕೈಫ್‌ ಪ್ರೆಗ್ನೆಂಟ್?‌ ವಿಡಿಯೋದಲ್ಲಿದೆಯಾ ಉತ್ತರ?

katrina kaif

ಮಂಬಯಿ: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಕಾಣಬರುತ್ತಿರುವ ನಟಿ ಕತ್ರಿನಾ ಕೈಫ್‌ ಅವರ ವಿಡಿಯೋಗಳು ಕುತೂಹಲ ಮೂಡಿಸುತ್ತಿವೆ. ಇಂಥದೇ ಒಂದು ವಿಡಿಯೋದಲ್ಲಿ ಹೊಳೆಯುವ ಹಳದಿ ಬಣ್ಣದ ಕುರ್ತಾ ಧರಿಸಿರುವ ಕತ್ರಿನಾ ಅವರು ಮುಂಬಯಿ ಏರ್‌ಪೋರ್ಟ್‌ನಲ್ಲಿ ಹೆಜ್ಜೆ ಹಾಕುತ್ತಿರುವುದು ವೈರಲ್‌ ಆಗಿದೆ. ಲೋಹ್ರಿ ಸೆಲೆಬ್ರೇಷನ್‌ ಮುಗಿಸಿ ಬರುತ್ತಿರುವ ಕತ್ರಿನಾ ಲುಕ್‌ಗೆ ಬಂದ ಪ್ರತಿಕ್ರಿಯೆಗಳೂ ಕುತೂಹಲ ಮೂಡಿಸುವಂತಿವೆ.

ಒಂದೆರಡು ತಿಂಗಳಿನಿಂದ ಕತ್ರಿನಾ ಕೈಫ್‌ ಇದಕ್ಕೆ ಸಂಬಂಧಿಸಿ ಸುದ್ದಿಯಲ್ಲಿದ್ದಾರೆ. ಕತ್ರಿನಾ ಪ್ರೆಗ್ನೆಂಟ್‌ ಆಗಿರಬಹುದು ಎಂಬ ಊಹೆ ಹರಿದಾಡುತ್ತಿದೆ. ಯಾಕೆಂದರೆ ಕತ್ರಿನಾ ಇತ್ತೀಚೆಗೆ ಸಡಿಲವಾದ ಉಡುಗೆಗಳನ್ನು ಇತ್ತೀಚೆಗೆ ಧರಿಸಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಕ್ಕೂ ಮೊದಲು ಅವರು ಫಿಟ್‌ ಆದ ದಿರಸುಗಳನ್ನು ಧರಿಸಿಕೊಂಡಿರುವುದು ಸಾಮಾನ್ಯವಾಗಿ ಕಾಣಬರುತ್ತಿತ್ತು.

ಇದನ್ನೂ ಓದಿ | Katrina Kaif | ಹೊಸ ವರ್ಷ ಸ್ವಾಗತಿಸಲು ರಾಜಸ್ಥಾನಕ್ಕೆ ತೆರಳಿದ ಕತ್ರಿನಾ-ವಿಕ್ಕಿ: ಫೋಟೊಗಳು ವೈರಲ್‌!

”ಈ ಡ್ರೆಸ್‌ನಲ್ಲಿ ಕತ್ರಿನಾ ಅದ್ಭುತವಾಗಿ ಕಂಗೊಳಿಸುತ್ತಿದ್ದಾರೆ. ಅವರ ಡ್ರೆಸ್‌ ಸೆನ್ಸ್‌ ಅದ್ಭುತವಾಗಿದೆʼʼ ಎಂದು ಕೆಲವು ಪ್ರತಿಕ್ರಿಯೆಗಳು ಬಂದಿವೆ. ಇನ್ನು ಕೆಲವು ʼʼಇತ್ತೀಚೆಗೆ ಅವರು ಸಡಿಲವಾದ ಡ್ರೆಸ್‌ ಹೆಚ್ಚಾಗಿ ಧರಿಸುತ್ತಿದ್ದಾರೆ. ಪ್ರೆಗ್ನೆಂಟ್‌ ಇರಬಹುದುʼʼ ಎಂದು ಇನ್ನು ಕೆಲವು ಕಾಮೆಂಟ್‌ಗಳು ಊಹಿಸಿವೆ.

ಕತ್ರಿನಾ ಕೈಫ್-‌ ವಿಕ್ಕಿ ಕೌಶಲ್‌ ತಮ್ಮ ಮೊದಲ ಮಗುವನ್ನು ನಿರೀಕ್ಷಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಇಬ್ಬರೂ ಈ ಸುದ್ದಿಯನ್ನೇನೂ ಖಚಿತಪಡಿಸಿಲ್ಲ. ಇಬ್ಬರೂ 2021ರ ಡಿಸೆಂಬರ್‌ನಲ್ಲಿ ರಾಜಸ್ಥಾನದಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದರು. ಕತ್ರಿನಾ ಪ್ರೆಗ್ನೆನ್ಸಿಯ ಸುದ್ದಿಗಳನ್ನು ವಿಕ್ಕಿ ಕೌಶಲ್‌ ಅವರ ವಕ್ತಾರ ನಿರಾಕರಿಸಿದ್ದಾರೆ. ಕತ್ರಿನಾ ಕೈಯಲ್ಲಿ ಈಗ ಮೆರ್ರಿ ಕ್ರಿಸ್‌ಮಸ್‌ (ವಿಜಯ್‌ ಸೇತುಪತಿ ಜತೆಗೆ), ಟೈಗರ್‌ 3 (ಸಲ್ಮಾನ್‌ ಖಾನ್‌ ಜತೆಗೆ) ಹಾಗೂ ಜೀ ಲೇ ಝರಾ (ಪ್ರಿಯಾಂಕ ಚೋಪ್ರಾ, ಅಲಿಯಾ ಭಟ್‌ ಜತೆಗೆ) ಚಿತ್ರಗಳಿವೆ.

ಇದನ್ನೂ ಓದಿ | siddhivinayak temple | ಪತಿ ವಿಕ್ಕಿ, ಅತ್ತೆಯೊಂದಿಗೆ ಮುಂಬೈನ ಸಿದ್ಧಿವಿನಾಯಕನ ದೇವಸ್ಥಾನಕ್ಕೆ ಭೇಟಿ ಕೊಟ್ಟ ಕತ್ರಿನಾ

Exit mobile version