Site icon Vistara News

Katrina Kaif: ನನ್ನ 7 ಕೋಟಿ ಇನ್‌ಸ್ಟಾ ಫ್ಯಾಮಿಲಿ ಎಂದು ಫೋಟೊ ಜತೆಗೆ ಖುಷಿ ಹಂಚಿಕೊಂಡ ನಟಿ ಕತ್ರಿನಾ ಕೈಫ್

Katrina Kaif 70 Million followers on Instagram

ಬೆಂಗಳೂರು : ಬಾಲಿವುಡ್ ನಟಿ ಕತ್ರಿನಾ ಕೈಫ್ (Katrina Kaif) ಸುಮಾರು 2 ದಶಕಗಳಿಂದ ಸಿನಿರಂಗದಲ್ಲಿ ಅದೆಷ್ಟೋ ಹೃದಯಗಳನ್ನು ಗೆದ್ದಿದ್ದಾರೆ. ದಿನದಿಂದ ದಿನಕ್ಕೆ ಅವರಿಗೆ ಫಾಲೋವರ್ಸ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ 70 ಮಿಲಿಯನ್‌ (7 ಕೋಟಿ) ಅನುಯಾಯಿಗಳನ್ನು ಹೊಂದಿರುವ ನಟಿ ಈ ಸಿಹಿ ಸುದ್ದಿಯನ್ನು ಇನ್‌ಸ್ಟಾದಲ್ಲಿ ಹೇಳಿಕೊಂಡಿದ್ದಾರೆ.

ನಟಿ ತಮ್ಮ ಸಂತೋಷವನ್ನು ಇನ್‌ಸ್ಟಾದಲ್ಲಿ ಹೇಳಿಕೊಂಡಿದ್ದು, ʻʻನನ್ನ 70 ಮಿಲಿ ಇನ್‌ಸ್ಟಾ ಫ್ಯಾಮಿಲಿ” ಎಂದು ಬರೆದುಕೊಂಡಿದ್ದಾರೆ. ಕತ್ರಿನಾ ಅವರ ಈ ಸಾಧನೆಗೆ ಅವರ ಅಭಿಮಾನಿಗಳು ಕಮೆಂಟ್‌ ಮೂಲಕ ಅಭಿನಂದನೆಗಳನ್ನು ಹೇಳುತ್ತಿದ್ದಾರೆ. ಕತ್ರಿನಾ ಅವರ ಸೆಲೆಬ್ರಿಟಿ ಸ್ನೇಹಿತರು ಜೋಯಾ ಅಖ್ತರ್ ಸೇರಿದಂತೆ ಇತರರು ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ. ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್ ಮತ್ತು ಆಲಿಯಾ ಭಟ್ ಅವರಂತಹ ಕೆಲವು ಸೆಲೆಬ್ರಿಟಿಗಳಲ್ಲಿ ಕತ್ರಿನಾ ಕೂಡ ಒಬ್ಬರು, ಇದೀಗ 70 ಮಿಲಿಯನ್ ಅನುಯಾಯಿಗಳ ಗಡಿಯನ್ನು ದಾಟಿದ್ದಾರೆ.

ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಕತ್ರಿನಾ ಅಭಿಮಾನಿಯೊಬ್ಬರು, “ನೀವು ಗಳಿಸಿದ ಪ್ರತಿಯೊಂದು ಯಶಸ್ಸಿಗೆ ನೀವು ಅರ್ಹರುʼʼ ಎಂದು ಬರೆದುಕೊಂಡರೆ, ಮತ್ತೊಬ್ಬ ಅಭಿಮಾನಿ, “ದಯವಿಟ್ಟು ಹೆಚ್ಚಿನ ಚಿತ್ರಗಳನ್ನು ಪೋಸ್ಟ್ ಮಾಡಿ, ನಾವು ಈಗಾಗಲೇ ನಿಮ್ಮನ್ನು ಬಹಳಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೇವೆ,” ಎಂದು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ:Katrina Kaif | ಕತ್ರಿನಾ ಕೈಫ್‌ ಪ್ರೆಗ್ನೆಂಟ್?‌ ವಿಡಿಯೋದಲ್ಲಿದೆಯಾ ಉತ್ತರ?

ಇದನ್ನೂ ಓದಿ: Katrina Kaif | ಹೊಸ ವರ್ಷ ಸ್ವಾಗತಿಸಲು ರಾಜಸ್ಥಾನಕ್ಕೆ ತೆರಳಿದ ಕತ್ರಿನಾ-ವಿಕ್ಕಿ: ಫೋಟೊಗಳು ವೈರಲ್‌!

ಕೆಲವು ದಿನಗಳಿಂದ ಕತ್ರಿನಾ ಅನಾರೋಗ್ಯಕ್ಕೆ ಒಳಗಾಗುವುದರಿಂದ ಅವರ ಕೆಲಸದ ಮೇಲೆ ಪರಿಣಾಮ ಬೀರುತ್ತಿದೆ ಎಂದು ವರದಿಯಾಗಿದೆ. ಇತ್ತೀಚೆಗೆ, ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ರಾಜಸ್ಥಾನದಲ್ಲಿ ತಮ್ಮ ಹೊಸ ವರ್ಷವನ್ನು ಸೆಲೆಬ್ರೆಟ್‌ ಮಾಡಿದ್ದರು. ನಂತರ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ನಟಿ ಸಲ್ಮಾನ್ ಖಾನ್ ಮತ್ತು ಇಮ್ರಾನ್ ಹಶ್ಮಿ ಜತೆಗೆ ‘ಟೈಗರ್ 3’ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕತ್ರಿನಾ ಕೈಫ್ (Katrina Kaif) ಮತ್ತು ಕಾಲಿವುಡ್‌ ನಟ ವಿಜಯ್ ಸೇತುಪತಿ ಅಭಿನಯದ ʻಮೆರ‍್ರಿ ಕ್ರಿಸ್‌ಮಸ್ʼ 2023 ರಲ್ಲಿ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಪ್ರಿಯಾಂಕಾ ಚೋಪ್ರಾ ಮತ್ತು ಆಲಿಯಾ ಭಟ್ ಅವರೊಂದಿಗೆ ಫರ್ಹಾನ್ ಅಖ್ತರ್ ನಿರ್ದೇಶನದ ʻಜೆ ಲೀ ಜರಾʼಚಿತ್ರದ ಚಿತ್ರೀಕರಣದಲ್ಲಿಯೂ ಬ್ಯುಸಿಯಾಗಿದ್ದಾರೆ.

Exit mobile version